ಬ್ರೇಕಿಂಗ್ ನ್ಯೂಸ್
07-07-26 03:50 pm HK News Staffer ಕ್ರೈಂ
ಉಳ್ಳಾಲ, ಜು.07: ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿರುವ ಪೋಕ್ಸೊ ಪ್ರಕರಣದ ಆರೋಪಿ ಆಟೋ ಚಾಲಕನನ್ನು ಪೊಲೀಸರು ಆಟೋದಲ್ಲಿ ಠಾಣೆಗೆ ಕರೆತರುತ್ತಿದ್ದಾಗ ಆರೋಪಿ ಹೊರಕ್ಕೆ ಜಿಗಿದು ಪರಾರಿಯಾದ ಘಟನೆ ನಡುಪದವು ಎಂಬಲ್ಲಿ ಸೋಮವಾರ ನಡೆದಿದ್ದು ಸ್ಥಳೀಯ ಕಾಂಗ್ರೆಸ್ ಪುಢಾರಿಯೊಬ್ಬ ಕೇಸನ್ನು ಮುಚ್ಚಿ ಹಾಕಲು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಪ್ರಕರಣವನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಆರೋಪಿ ಆಟೋ ಚಾಲಕ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ತನ್ನ ಗುಪ್ತಾಂಗ ತೋರಿಸಿದ್ದು, ಆಕ್ರೋಶಗೊಂಡ ಬಾಲಕಿ ಕಡೆಯವರು ಆರೋಪಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದರೆನ್ನಲಾಗಿದೆ. ಕೊಣಾಜೆ ಪೊಲೀಸರಿಗೆ ವಿಚಾರ ತಿಳಿದು ರಿಕ್ಷಾ ಚಾಲಕನಾಗಿದ್ದ ಆರೋಪಿಯ ಮೊಬೈಲ್ ಟವರನ್ನ ಟ್ರೇಸ್ ಮಾಡಿದ್ದಾರೆ. ನಿನ್ನೆ (ಸೋಮವಾರ) ಮಧ್ಯಾಹ್ನ ಆರೋಪಿಯನ್ನ ಕೊಣಾಜೆ ಪೊಲೀಸರಿಬ್ಬರು ಮುಡಿಪುವಿನಲ್ಲಿ ವಶಕ್ಕೆ ಪಡೆದು ಆತನ ಆಟೋ ರಿಕ್ಷಾದಲ್ಲೇ ಪೊಲೀಸ್ ಠಾಣೆಯ ಕಡೆ ಬಂದಿದ್ದಾರೆ. ನಡುಪದವು ತಲುಪುತ್ತಿದ್ದಂತೆ ಆರೋಪಿ ರಿಕ್ಷಾ ಚಾಲಕ ಚಾಲನೆಯಲ್ಲಿದ್ದ ಆಟೋ ರಿಕ್ಷಾದಿಂದ ಜಿಗಿದು ಪರಾರಿಯಾಗಿದ್ದಾನೆ. ಇಬ್ಬರು ಪೊಲೀಸರಿದ್ದ ಆಟೋ ರಿಕ್ಷಾ ಅದೃಷ್ಟವಶಾತ್ ರಸ್ತೆ ಬದಿಯ ಕಮರಿಗೆ ಬಿದ್ದು ನಿಂತಿದೆ.


ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು, ಪೊಲೀಸರು ಪರಾರಿಯಾದ ಆರೋಪಿಯ ಹುಡುಕಾಟ ನಡೆಸಿದ್ದರೆನ್ನಲಾಗಿದೆ. ಘಟನೆಯನ್ನ ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಆಟೋ ರಿಕ್ಷಾದ ಫೋಟೊಗಳನ್ನ ಕ್ಲಿಕ್ಕಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಆರೋಪಿಯನ್ನ ಕರೆ ತರುತ್ತಿದ್ದ ಆಟೋ ರಿಕ್ಷಾವನ್ನು ಕೊಣಾಜೆ ಠಾಣೆಯ 102 ಪೊಲೀಸ್ ತುರ್ತು ವಾಹನವು ಹಿಂಬಾಲಿಸುತ್ತಿತ್ತೆಂದು ಹೇಳಲಾಗಿದೆ. ಪೊಲೀಸರ ಎಡವಟ್ಟಿನಿಂದಲೇ ಈ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಆರೋಪಿ ಪರಾರಿಯಾದ ಬಳಿಕ ಕೊಣಾಜೆ ಠಾಣೆಗೆ ಸ್ಥಳೀಯವಾಗಿ ಮಣ್ಣು ಮಾಫಿಯಾದಲ್ಲಿ ತೊಡಗಿಸಿರುವ ಕೈ ಪುಢಾರಿಯೋರ್ವ ಭೇಟಿ ನೀಡಿ ಪ್ರಕರಣ ಮುಚ್ಚಿ ಹಾಕುವಂತೆ ಒತ್ತಡ ಹೇರಿದ್ದಾನೆಂದು ಹೇಳಲಾಗುತ್ತಿದೆ. ಕೊಣಾಜೆ ಪೊಲೀಸರಲ್ಲಿ ಈ ಬಗ್ಗೆ ವಿಚಾರಿಸಿದಾಗ ಪೋಕ್ಸೊ ಪ್ರಕರಣದ ಬಗ್ಗೆ ನಮಗೆ ಮಾಹಿತಿಯೇ ಬಂದಿಲ್ಲ. ಪೊಲೀಸರು ಆಟೋ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ರಿಕ್ಷಾ ಚಾಲಕ ಪೊಲೀಸರನ್ನ ಬಿಟ್ಟು ಗಾಬರಿಗೊಂಡು ಓಡಿಹೋಗಿದ್ದು, ಈ ಬಗ್ಗೆ ಜಾಲತಾಣಗಳಲ್ಲಿ ಊಹಾಪೋಹಗಳು ಹರಡುತ್ತಿವೆಯೆಂಬ ಸಬೂಬು ನೀಡಿದ್ದಾರೆ. ಪೊಲೀಸರು ಆಟೋ ರಿಕ್ಷಾದಲ್ಲಿ ಯಾಕೆ ಬಂದರು? ರಿಕ್ಷಾ ಚಾಲಕ ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಜಿಗಿದು ಪರಾರಿಯಾಗಿದ್ದೇಕೆ ಎಂಬ ಪ್ರಶ್ನೆಗಳಿಗೆ ಹಿರಿಯ ಅಧಿಕಾರಿಗಳೇ ಉತ್ತರ ನೀಡಬೇಕಿದೆ.
A man accused in a Protection of Children from Sexual Offences (POCSO) case allegedly escaped by jumping out of an auto-rickshaw while being taken to the Konaje Police Station on Monday. The incident reportedly occurred at Nadupadavu, raising questions over police handling of the accused and prompting allegations that attempts are being made to suppress the case.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm