ಬ್ರೇಕಿಂಗ್ ನ್ಯೂಸ್
03-07-26 04:22 pm HK News Staffer ಕ್ರೈಂ
ಕಾಸರಗೋಡು, ಜುಲೈ 3: ಇನ್‌ಸ್ಟಾ ಗ್ರಾಮ್ ಜಾಲತಾಣದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಫಾಲೊವರ್ಸ್ ಹೊಂದಿರುವ ಸ್ಟಾರ್ ಇನ್ ಫ್ಲುಯೆನ್ಸರ್ ಧನ್ಯಾ ಎಸ್.ಆರ್ ಅಲಿಯಾಸ್ ‘ಸ್ಪಾರ್ಟಾದ ಹೆಲೆನ್’ (28) ವಿರುದ್ಧ ಮದ್ಯದ ಅಮಲಿನಲ್ಲಿ ಅಪಾಯಕಾರಿಯಾಗಿ ಕಾರು ಚಲಾಯಿಸಿದ ಆರೋಪದಲ್ಲಿ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತಪಾಸಣೆಗೆ ಮುಂದಾದ ವೇಳೆ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ಕಾರನ್ನು ಬಳಿಕ ಬರೋಬ್ಬರಿ 17 ಕಿಲೋಮೀಟರ್ ಬೆನ್ನಟ್ಟಿ ಹಿಡಿದಿದ್ದಾರೆ.
ಜುಲೈ 1ರ ನಸುಕಿನ ಜಾವ 2 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಬಂದಿಯೋಡು ಎಂಬಲ್ಲಿ ಹೈಡ್ರಾಮಾ ನಡೆದಿದ್ದು, ಧನ್ಯಾ ಚಲಾಯಿಸುತ್ತಿದ್ದ ಟಾಟಾ ಪಂಚ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್ ನೇತೃತ್ವದ ಗಸ್ತು ತಂಡವು ವಿದ್ಯಾನಗರ ಠಾಣೆಯ ಕಡೆಯಿಂದ ಕುಂಬಳೆಗೆ ಬರುತ್ತಿದ್ದಾಗ, ಅಣಂಗೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಟಾಟಾ ಪಂಚ್ ಕಾರು ನಿಂತಿರುವುದನ್ನು ಗಮನಿಸಿದ್ದಾರೆ. ಪೊಲೀಸರು ವಾಹನವನ್ನು ಪರಿಶೀಲಿಸಲು ಹತ್ತಿರ ಬರುತ್ತಿದ್ದಂತೆ, ಚಾಲಕನ ಸೀಟಿನಲ್ಲಿದ್ದ ಧನ್ಯಾ ಪೊಲೀಸರ ಸೂಚನೆಗಳನ್ನು ನಿರ್ಲಕ್ಷಿಸಿ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಅನುಮಾನಗೊಂಡ ಪೊಲೀಸರು ಜೀಪ್‌ನಲ್ಲಿ ಕಾರನ್ನು ಬೆನ್ನಟ್ಟಿದ್ದು, ಮಂಗಲ್ಪಾಡಿ ಭಗವತಿ ನಗರದ ಬಳಿ 17 ಕಿ.ಮೀ ದೂರದ ವರೆಗೆ ಚೇಸ್ ಮಾಡಿ ಕಾರನ್ನು ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ, ಕಾರು ಚಾಲಕಿ ಧನ್ಯಾ ಅವರ ಉಸಿರಾಟದಲ್ಲಿ ಮದ್ಯದ ವಾಸನೆ ಬಂದಿದೆ. ತಕ್ಷಣವೇ ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ತೋರಿಸಿದೆ. ಮೋಟಾರು ವಾಹನ ಕಾಯ್ದೆಯಡಿ ನಿಗದಿಪಡಿಸಿದ ಮಿತಿಗಿಂತ (100 ಮಿಲಿಗೆ 30 ಮಿಗ್ರಾಂ) ಎರಡು ಪಟ್ಟು ಹೆಚ್ಚು ಇರುವುದು ದೃಢಪಟ್ಟಿದ್ದರಿಂದ ಕೇಸು ದಾಖಲಿಸಿದ್ದಾರೆ. ಕಾರಿನಲ್ಲಿ ಧನ್ಯಾ ಅವರೊಂದಿಗೆ ಪತಿ ರಾಜೇಶ್ ಕೆ.ಆರ್. ಕೂಡ ಪ್ರಯಾಣಿಸುತ್ತಿದ್ದರು. ಧನ್ಯಾ ವಿರುದ್ಧ ಬಿಎನ್‌ಎಸ್ ಸೆಕ್ಷನ್ 281 (ಅತಿವೇಗದ ಚಾಲನೆ) ಹಾಗೂ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 132(1), 179 ಮತ್ತು 185 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನ್ಯಾ, ಮದ್ಯ ಸೇವಿಸಿ ವಾಹನ ಚಲಾಯಿಸಿದ್ದು ನಿಜ. ಪೊಲೀಸರನ್ನು ನೋಡಿ ಗೊಂದಲಕ್ಕೀಡಾಗಿ ಕಾರು ಚಲಾಯಿಸಿದೆ ಅಷ್ಟೇ. ಪೊಲೀಸರು ಸಭ್ಯ ರೀತಿಯಲ್ಲೇ ನಡೆದುಕೊಂಡಿದ್ದಾರೆ. ಆದರೆ ಕೆಲವು ಮಾಧ್ಯಮಗಳು ನಾನು ಎಂಡಿಎಂಎ ಡ್ರಗ್ಸ್ ತಗೊಂಡಿದ್ದೆ ಅಂತ ಸುಳ್ಳು ವರದಿ ಮಾಡ್ತಿವೆ. ಇದಕ್ಕಾಗಿಯೇ ನಾನು ಮಿಮ್ಸ್ ಆಸ್ಪತ್ರೆಯಲ್ಲಿ ರಕ್ತದ ಮಾದರಿ ಪರೀಕ್ಷೆ ನೀಡಿದ್ದು, ರಿಪೋರ್ಟ್ ಬಂದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತೀನಿ” ಎಂದು ಹೇಳಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm