ಬ್ರೇಕಿಂಗ್ ನ್ಯೂಸ್
13-02-26 11:52 am HK News Desk ಕ್ರೈಂ
ನವದೆಹಲಿ, ಫೆ.12: ಡಿಜಿಟಲ್ ವಂಚನೆ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚುತ್ತಿರುವಾಗಲೇ ಕಾಂಬೋಡಿಯಾದಲ್ಲಿ ನಕಲಿ ಭಾರತೀಯ ಪೊಲೀಸ್ ಠಾಣೆಯನ್ನು ತೆರೆದು ಅದರ ಮೂಲಕವೇ ಸೈಬರ್ ವಂಚನಾ ಜಾಲ ನಡೆಸುತ್ತಿದ್ದುದನ್ನು ತನಿಖಾ ತಂಡ ಪತ್ತೆಹಚ್ಚಿದೆ.
ವಿಯೆಟ್ನಾಂ ಗಡಿಗೆ ಹೊಂದಿಕೊಂಡಿರುವ ಕಾಂಪೊಟ್ ಪ್ರಾಂತ್ಯದಲ್ಲಿ 'ಡಿಜಿಟಲ್ ಅರೆಸ್ಟ್' ಸೇರಿ ವಿವಿಧ ಬಗೆಯ ವಂಚನೆ ಚಟುವಟಿಕೆ ನಡೆಸುತ್ತಿದ್ದ ಖತರ್ನಾಕ್ ಜಾಲವನ್ನು ವಿಯೆಟ್ನಾಂ ಪೊಲೀಸ್ ಪಡೆ ಪತ್ತೆ ಮಾಡಿದೆ. ಅಂತಾರಾಷ್ಟ್ರೀಯ ವಂಚನೆಗಳಿಗೆ ತಡೆ ಹಾಕಲು ಕಾಂಬೋಡಿಯಾ ಪೊಲೀಸರು ಇತ್ತೀಚೆಗೆ ಭಾರಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 190 ಸ್ಕ್ಯಾಮ್ ಸೆಂಟರ್‌ಗಳನ್ನು ಪತ್ತೆ ಮಾಡಿ ಜಪ್ತಿ ಮಾಡಲಾಗಿದೆ. 173 ಅಧಿಕಾರಿ ಸೋಗಿನಲ್ಲಿದ್ದ ಸೈಬರ್ ವಂಚಕರನ್ನೂ ಬಂಧಿಸಲಾಗಿದೆ. ಈ ಸೆಂಟರ್‌ಗಳನ್ನು ಭಾರತೀಯ ಪೊಲೀಸ್ ಠಾಣೆಯೆಂದು ಬಿಂಬಿಸಿ ಜನರನ್ನು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಭಾರತೀಯರೇ ಟಾರ್ಗೆಟ್ !
ಸೈಬರ್ ಜಾಲದ ಸೂತ್ರಧಾರಿ ಚೀನಾ ಮೂಲದ ಕಿಂಗ್ ಪಿನ್ ಲೀ ಕುಯಾಂಗ್ ಎಂದು ಶಂಕಿಸಲಾಗಿದೆ. ನಕಲಿ ಪೊಲೀಸ್ ಠಾಣೆಯು ಸಿನಿಮಾ ಸೆಟ್ ರೀತಿಯಿದ್ದು ಪಾಳುಬಿದ್ದ ಕಟ್ಟಡ, ಕಾಂಪೌಂಡ್‌ನಲ್ಲಿ ತಾತ್ಕಾಲಿಕ ಎನ್ನುವಂತೆ ನಿರ್ಮಿಸಲಾಗಿದೆ. ಇದರಲ್ಲಿ ಮುಂಬಯಿ ಪೊಲೀಸ್ ಹಾಗೂ ಸಿಬಿಐ ಲೋಗೊಗಳಿರುವ ನಕಲಿ ಸೈನ್ ಬೋರ್ಡ್ ಗಳಿವೆ. ಎರಡೂ ಬದಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಹಾಗೂ ಭಾರತದ ರಾಷ್ಟ್ರಧ್ವಜವನ್ನು ಅಳವಡಿಸಲಾಗಿದೆ. ವಿದೇಶಗಳಲ್ಲಿರುವ ಭಾರತೀಯರನ್ನು 'ಡಿಜಿಟಲ್ ಅರೆಸ್ಟ್' ಹೆಸರಲ್ಲಿ ವಂಚಿಸುವ ಜಾಲ ಇದಾಗಿದೆ ಎಂದು ವಿಯೆಟ್ನಾಂ ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರು ಪೊಲೀಸರು ನೇಪಾಳದಲ್ಲಿದ್ದುಕೊಂಡು ಸೈಬರ್ ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸಿದ್ದರು. ಈ ವೇಳೆ, ಇವರಿಗೆ ಕಾಂಬೋಡಿಯಾದಲ್ಲಿ ನೆಟ್ವರ್ಕ್ ಇರೋದು, ಹಣವನ್ನು ಯುಎಸ್ ಡಾಲರಿಗೆ ಪರಿವರ್ತಿಸುವ ಜಾಲ ಇರುವುದು ತಿಳಿದುಬಂದಿತ್ತು. ಮಲೇಶಿಯಾ, ಥಾಯ್ಲೆಂಡಿಗೆ ಉದ್ಯೋಗಕ್ಕೆ ತೆರಳುವ ಭಾರತೀಯರನ್ನೇ ಬಳಸಿಕೊಂಡು ಸೈಬರ್ ವಂಚನಾ ಜಾಲ ನಡೆಸುತ್ತಿರುವುದೂ ಪತ್ತೆಯಾಗಿತ್ತು.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
16-08-26 04:14 pm
HK News Staffer
ಸ್ವಾತಂತ್ರ್ಯ ದಿನಾಚರಣೆ ವೇಳೆ ವಂದೇ ಮಾತರಂ ಗೀತೆಗೆ ಸ...
16-08-26 03:47 pm
ಚರಕದಿಂದ ನೂಲು ತೆಗೆದು, ಸಮುದ್ರ ಕಿನಾರೆಯಲ್ಲಿ ಉಪ್ಪು...
15-08-26 10:08 pm
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm