ಬ್ರೇಕಿಂಗ್ ನ್ಯೂಸ್
14-01-26 05:22 pm HK News Desk ಕ್ರೈಂ
ಕಾರವಾರ, ಜ.14 : ಕ್ರಿಸ್ತಿಯನ್ ಯುವತಿಯೊಬ್ಬಳನ್ನು ಪ್ರೀತಿಸುವಂತೆ ಒತ್ತಾಯಿಸಿ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡಿದ್ದ ಕಾರವಾರದ ಜೆಡಿಎಸ್ ನಾಯಕಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್ ಎಂಬವರ ಪುತ್ರ ಚಿರಾಗ್ ಪೊಲೀಸ್ ಕೇಸು ದಾಖಲಾಗುತ್ತಲೇ ಯಾರ ಕೈಗೂ ಸಿಗದೆ ತಲೆಮರೆಸಿಕೊಂಡಿದ್ದಾನೆ.
ಕದ್ರಾದ ಕೆಪಿಸಿ ಕಾಲೋನಿಯ ಯುವತಿ ರಿಶೇಲ್ ಡಿಸೋಜಾ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆಗೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಚಿರಾಗ್ ಕಿರುಕುಳ ನೀಡಿದ್ದ. ಚಿರಾಗ್ ಬೈಗುಳದ ಮಾತಿನಿಂದ ಬೇಸತ್ತು ರಿಶೇಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಹುಡುಕಾಟ ನಡೆಸುವಷ್ಟರಲ್ಲಿ ಕಾರವಾರದ ನಂದನಗದ್ದಾ ಮನೆಯಿಂದ ಚಿರಾಗ್ ಪರಾರಿಯಾಗಿದ್ದಾನೆ.


'ಬದುಕೋದು ಬೇಡ, ಸತ್ತು ಹೋಗು' ಎಂದಿದ್ದ ಆರೋಪಿ
ಆರೋಪಿ ಚಿರಾಗ್ ಕಳೆದ ಕೆಲವು ಸಮಯದಿಂದ ರಿಶೇಲ್ ಮನೆಗೆ ಭೇಟಿ ನೀಡುತ್ತಿದ್ದು 'ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನೀನು ನನ್ನನ್ನು ಒಪ್ಪಿಕೊಳ್ಳಲೇಬೇಕು' ಎಂದು ಯುವತಿಗೆ ಬಲವಂತ ಮಾಡಿದ್ದ. ಆದರೆ ರಿಶೆಲ್ ಆತನ ಪ್ರೀತಿಯನ್ನು ನಿರಾಕರಿಸುತ್ತ ಬಂದಿದ್ದಳು. 'ನೀನು ನನ್ನ ಪ್ರೀತಿಯನ್ನು ಒಪ್ಪದಿದ್ದರೆ ಬದುಕಿದ್ದೂ ಪ್ರಯೋಜನವಿಲ್ಲ. ಸತ್ತು ಹೋಗು. ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು' ಎಂದು ನಿಂದಿಸಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದ ಎಂದು ಆರೋಪಿಸಲಾಗಿದೆ.
ಆರೋಪಿ ಚಿರಾಗ್ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ 'ನೀನು ಬದುಕಿದ್ದೂ ಪ್ರಯೋಜನವಿಲ್ಲ, ಸತ್ತು ಹೋಗು' ಎನ್ನುವ ಮಾತುಗಳಿಂದ ನೊಂದ ರಿಶೆಲ್, ಜೀವನದಲ್ಲಿ ಜಿಗುಪ್ಸೆಗೊಂಡು ಯಾರೂ ಇಲ್ಲದ ಸಮಯದಲ್ಲಿ ತನ್ನ ಮನೆಯ ಬೆಡ್‌ರೂಮ್‌ನಲ್ಲಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
A 20-year-old Christian woman, Rishel D’Souza from Kadra in Karwar, allegedly died by suicide after facing continuous harassment and pressure to accept a romantic relationship. The accused, Chirag, son of a JD(S) leader and former Zilla Panchayat member Chaitra Kotharkar, reportedly mentally harassed her after she repeatedly rejected his advances, even allegedly telling her to “die” if she did not accept his love.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am