ಬ್ರೇಕಿಂಗ್ ನ್ಯೂಸ್
15-12-25 05:37 pm Udupi Correspondent ಕ್ರೈಂ
ಉಡುಪಿ, ಡಿ.15 : ಕೋಟತಟ್ಟು ಪಡುಕರೆ ಎಂಬಲ್ಲಿ ನಡೆದ ಸಂತೋಷ್ ಮೊಗವೀರ (30) ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ನಾಲ್ವರು ಆಪ್ತ ಸ್ನೇಹಿತರನ್ನು ಬಂಧಿಸಿದ್ದಾರೆ.
ಪಾರಂಪಳ್ಳಿ ಪಡುಕರೆಯ ದರ್ಶನ್(21), ಸಾಸ್ತಾನ ಪಾಂಡೇಶ್ವರದ ನೀರಾಡಿ ಜೆಡ್ಡುವಿನ ಕೌಶಿಕ್(21), ಕೋಟತಟ್ಟುವಿನ ಅಂಕಿತ್(19) ಮತ್ತು ಸುಜನ್(21) ಬಂಧಿತ ಆರೋಪಿಗಳು.

ಡಿ.14ರಂದು ಸಂಜೆ ವೇಳೆ ಸಂತೋಷ್ ಪೂಜಾರಿ, ಸಚಿನ್, ಚೇತನ್, ಕೌಶಿಕ್, ಸುಜನ್ ಮತ್ತು ದರ್ಶನ್ ಬಾರ್ ನಲ್ಲಿ ಪಾರ್ಟಿ ಮಾಡಿ, ಬಳಿಕ ಪಡುಕೆರೆಯ ಸರ್ಕಲ್ ಗೆ ಬಂದು ಅಲ್ಲಿ ಊಟ ಮಾಡಿಕೊಂಡಿದ್ದರು. ದರ್ಶನ್ ಮತ್ತು ಕೌಶಿಕ್, ಅಂಕಿತ್ ಹಾಗೂ ಸುಜನ್, ಸಂತೋಷ್ ಅವರ ಕುಟುಂಬದ ವಿಚಾರದಲ್ಲಿ ವಾಗ್ವಾದ ಆಗಿ ಅವಾಚ್ಯ ಶಬ್ದಗಳಿಂದ ಬೈದು, ಸಂತೋಷನಿಗೆ ನಾಲ್ಕು ಜನರು ಸೇರಿ ಹಲ್ಲೆ ನಡೆಸಿದರೆನ್ನಲಾಗಿದೆ.
ಹೊಡೆದಾಟದ ವೇಳೆ ದರ್ಶನ್, ಸಂತೋಷ್ ಕುತ್ತಿಗೆ ಹಿಂಬದಿಗೆ ಕೈಯಿಂದ ಬಲವಾಗಿ ಹೊಡೆದಿದ್ದಾನೆ. ಕೌಶಿಕ್ ಕೂಡ ಕೈಯಿಂದ ಹೊಡೆದಿದ್ದಾನೆ. ಬಳಿಕ ರಜತ್ ಇವರ ಜಗಳವನ್ನು ನಿಲ್ಲಿಸಿದ್ದು ಅಷ್ಟರಲ್ಲಿ ಹಲ್ಲೆಗಳೊಗಾದ ಸಂತೋಷ್ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.
ಬಳಿಕ ಸಂತೋಷನನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಪರೀಕ್ಷಿಸಿ ಸಂತೋಷ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
In a tragic incident triggered by a drunken argument, a 30-year-old man lost his life after being assaulted by his close friends at Kotathattu Padukere in Brahmavar taluk. Police have arrested four youths in connection with the case.
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
15-12-25 08:12 pm
HK News Desk
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
15-12-25 05:40 pm
Mangalore Correspondent
Mangalore Reels, Arrest, Police: ತಲವಾರು ಹಿಡಿದ...
14-12-25 05:48 pm
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm