ಬ್ರೇಕಿಂಗ್ ನ್ಯೂಸ್
01-12-25 04:50 pm Udupi Correspondent ಕ್ರೈಂ
ಉಡುಪಿ, ಡಿ 01 : ಜಿಲ್ಲೆಯಲ್ಲಿ ಯುವತಿಯೋರ್ವಳನ್ನು ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಅತ್ಯಾಚಾರ ಎಸಗಿ, ಕೊಲೆ ಮಾಡಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ಹಿಂದೂ ಜಾಗರಣಾ ವೇದಿಕೆ ನಾಯರ್ಕೋಡು ಘಟಕದ ಕಾರ್ಯಕರ್ತ ಪ್ರದೀಪ್ ಪೂಜಾರಿ (26) ಯನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯುವತಿಗೆ ಪ್ರದೀಪ್ ನಿರಂತರವಾಗಿ ಮದುವೆ ಯಾಗುವಂತೆ ಒತ್ತಡ, ಬೆದರಿಕೆ, ಕಿರುಕುಳ ನೀಡುತ್ತಿದ್ದನು. ಯುವತಿ ಇದನ್ನು ನೇರವಾಗಿ ನಿರಾಕರಿಸಿದ ನಂತರ, ಆಕೆ ಮತ್ತು ಕುಟುಂಬಕ್ಕೆ ತೀವ್ರ ಮಟ್ಟದ ತೊಂದರೆ ಶುರುವಾಯಿತು. ನಿರಂತರ ಕಿರುಕುಳದಿಂದ ಬೇಸತ್ತ ಯುವತಿ ಮೊದಲು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದನು.
ಆದರೆ, ಜಾಮೀನಿನ ರಕ್ಷಣೆ ಕೂಡ ಆ ಯುವತಿಯನ್ನು ಸುರಕ್ಷಿತವಾಗಿರಿಸಲಿಲ್ಲ. ನವೆಂಬರ್ 29ರ ಸಂಜೆ, ಯುವತಿ ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರದೀಪ್ ಮತ್ತೊಮ್ಮೆ ಆಕೆಯನ್ನು ಅಡ್ಡಗಟ್ಟಿದ್ದಾನೆ. ಮದುವೆಯಾಗುವಂತೆ ಒತ್ತಾಯಿಸಿ, ಮತ್ತೆ ಬೆದರಿಕೆ ಮತ್ತು ಪೀಡಿಸಲು ಪ್ರಾರಂಭಿಸಿದ್ದಾನೆ. ಯುವತಿ ಮದುವೆಗೆ ಮತ್ತೊಮ್ಮೆ ಸ್ಪಷ್ಟವಾಗಿ ನಿರಾಕರಿಸಿದಾಗ, ಆರೋಪಿ ತನ್ನ ಕೋಪ ಮತ್ತು ಅಹಂಕಾರದ ವಶಕ್ಕೆ ಜಾರಿ ಈ ದುಷ್ಕೃತ್ಯ ನಡೆಸಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ.
ಆಹಿತಕರ ಕ್ಷಣದಲ್ಲಿ ಯುವತಿಯನ್ನು ಕತ್ತು ಹಿಸುಕಿ ಬೆದರಿಸಿ, ಅಲ್ಲೇ ಅತ್ಯಾಚಾರ ಎಸಗಿದ್ದಾನೆ. ಯುವತಿ ಭಯಗೊಂಡಿದ್ದರೂ, ಮನೋಬಲ ಕಳೆದುಕೊಳ್ಳದೆ ತಕ್ಷಣವೇ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ನಂತರ ಯುವತಿಯ ಪೋಷಕರು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದರು. ಪೊಲೀಸರು ತಕ್ಷಣವೇ ಕ್ರಮ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಈ ಘಟನೆ ಪ್ರದೇಶದಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿದೆ. ಮಹಿಳೆಯರ ಮೇಲಿನ ನಿರಂತರ ಹಿಂಸೆ, ಕಿರುಕುಳ, ಧಮ್ಕಿಗಳು ಯಾವಾಗ ಅಂತ್ಯವಾಗುತ್ತವೆ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಕಾನೂನು ಕ್ರಮ ಕೈಗೊಳ್ಳುವಾಗಲೂ ಜಾಮೀನು ಪಡೆದ ಆರೋಪಿಗಳು ಹೊರಗೆ ಬಂದು ಮತ್ತೆ ಅಪರಾಧಕ್ಕೆ ಮುಂದಾಗುತ್ತಿರುವುದು ವ್ಯವಸ್ಥೆಯ ಡೌನ್ ಫಾಲ್ಗೆ ಸಾಕ್ಷಿಯಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ಕೊಡಿಸುವ ವಿಶ್ವಾಸವನ್ನು ಯುವತಿ ಕುಟುಂಬಕ್ಕೆ ನೀಡಿದ್ದಾರೆ.
A 26-year-old man, identified as Pradeep Poojary of Nairkodu and reportedly associated with a local organisation, has been arrested by the Udupi Women’s Police on charges of sexually assaulting a young woman and attempting to force her into marriage after repeated harassment.
03-12-25 03:01 pm
HK News Desk
ಜೈಷ್-ಇ-ಮೊಹಮ್ಮದ್ ಹೆಸರಲ್ಲಿ ಬೆಂಗಳೂರು ಏರ್ಪೋರ್ಟ್,...
02-12-25 10:17 pm
ಸಂಪುಟ ಪುನಾರಚನೆಯಾದ್ರೆ ಮುನಿಯಪ್ಪ, ಮಹದೇವಪ್ಪ, ಪರಮೇ...
02-12-25 06:29 pm
ಕೃತಕ ಬುದ್ಧಿಮತ್ತೆ ಎಫೆಕ್ಟ್ ; ಭವಿಷ್ಯದಲ್ಲಿ ಜನರು ಕ...
01-12-25 10:59 pm
ಸಿಎಂ, ಡಿಸಿಎಂ ಭೇಟಿಯಾಗಿ ಹೊಟ್ಟೆ ತುಂಬ ಉಪಹಾರ ಸೇವನೆ...
01-12-25 08:28 pm
03-12-25 07:19 pm
HK News Desk
Jawaharlal Nehru, Babri Masjid, Sardar Patel,...
03-12-25 07:14 pm
ಅಮೆರಿಕದ ಡಾಲರ್ ಎದುರು ನೈಂಟಿ ಕ್ರಾಸ್ ಮಾಡಿದ ರೂಪಾಯಿ...
03-12-25 05:32 pm
ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂ...
03-12-25 03:04 pm
ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್...
02-12-25 11:19 pm
03-12-25 07:23 pm
Mangalore Correspondent
CM Siddaramaiah, Mangalore, Narayan Guru: ದೇವ...
03-12-25 04:52 pm
K. C. Venugopal, Mangalore, Dk Shivakumar: ಮಂ...
03-12-25 11:54 am
Bjp, Arun Puthila, Puttur, Mangalore: ಬಿಜೆಪಿ...
01-12-25 09:25 pm
ಕ್ರಿಸ್ಮಸ್ ವೇಳೆಗೆ ಮಂಗಳೂರು- ಮುಂಬೈ ನಡುವೆ ವಾರದ ಎಲ...
01-12-25 03:08 pm
03-12-25 01:41 pm
Bangalore Correspondent
ಲೈಂಗಿಕ ಸಮಸ್ಯೆಗಳಿಗೆ ಆಯುರ್ವೇದ ಔಷಧ ನೆಪದಲ್ಲಿ ವಂಚನ...
02-12-25 10:48 pm
ಇನ್ನೋವಾ ಕಾರಿನಲ್ಲಿ ನಾಲ್ಕು ಕರುಗಳನ್ನು ಸಾಗಿಸುತ್ತಿ...
02-12-25 06:37 pm
ರೈಲಿನಲ್ಲಿ ಬಂದು ನಿಲ್ಲಿಸಿದ್ದ ಸ್ಕೂಟರ್ ಕಳವುಗೈದು ಪ...
02-12-25 02:26 pm
Udupi Rape, Crime, Hindu Jagaran Vedike: ಮದುವ...
01-12-25 04:50 pm