ಬ್ರೇಕಿಂಗ್ ನ್ಯೂಸ್
26-11-25 02:39 pm Mangalore Correspondent ಕ್ರೈಂ
ಮಂಗಳೂರು, ನ.26 : ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಲಂಡನ್ ಮೂಲದ ಲೇಡಿ ಹೆಸರಲ್ಲಿ ಕರೆ ಮಾಡಿ ಪೌಂಡ್ಸ್ ನೀಡುವುದಾಗಿ ಹೇಳಿ ನಂಬಿಸಿ 13 ಲಕ್ಷ ರೂಪಾಯಿ ಪಡೆದು ವಂಚಿಸಿದ ಘಟನೆ ನಡೆದಿದ್ದು ಮೋಸ ಹೋದ ವ್ಯಕ್ತಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
57 ವರ್ಷದ ದೂರುದಾರರಿಗೆ ಫೇಸ್ ಬುಕ್ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ತನ್ನನ್ನು ಲಂಡನ್ ಮೂಲದ ಲಿಲ್ಲಿಯನ್ ಮೇರಿ ಜಾರ್ಜ್ ಎಂದು ಪರಿಚಯಿಸಿದ್ದ ಮಹಿಳೆಯು ಬಳಿಕ ಚಾಟಿಂಗ್ ಮಾಡಿದ್ದರು. ಈ ವೇಳೆ, ನವೆಂಬರ್ ತಿಂಗಳಲ್ಲಿ ಲಂಡನ್ ಪೌಂಡ್ಸ್ ತೆಗೆದುಕೊಂಡು ಭಾರತಕ್ಕೆ ಬರುವುದಾಗಿ ಆಕೆ ತಿಳಿಸಿದ್ದಳು. ಅದರಂತೆ ನ.15ರಂದು ಸೊನಾಲಿ ಗುಪ್ತ ಎನ್ನುವ ಮಹಿಳೆ ಕರೆ ಮಾಡಿ ಲಂಡನ್ ಮಹಿಳೆ ಲಿಲ್ಲಿಯನ್ ಮೇರಿ ಜಾರ್ಜ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರು ಟ್ರಾವೆಲರ್ಸ್ ಚೆಕ್ 25,000 ಪೌಂಡ್ಸ್ ಮತ್ತು 1 ಕೆ.ಜಿ. ಚಿನ್ನವನ್ನು ತಂದಿದ್ದು ಭಾರತದ ರೂಪಾಯಿಯಲ್ಲಿ ಪೌಂಡ್ಸ್ ಗೆ ಸುಮಾರು 30 ಲಕ್ಷ ರೂ. ಆಗುತ್ತದೆ ಎಂದು ತಿಳಿಸಿ, ಕರೆಯನ್ನು ಲಿಲ್ಲಿಯನ್ ಗೆ ಕೊಟ್ಟಿದ್ದಾಳೆ.
ಬಳಿಕ ಲಿಲ್ಲಿಯನ್ ಮೇರಿ ಮಾತನಾಡಿ ಆ ಹಣವನ್ನು ಭೇಟಿ ಮಾಡುವ ಸಮಯದಲ್ಲಿ ನೀಡುವುದಾಗಿ ಹೇಳಿ ನಂಬಿಸಿದ್ದಾಳೆ. ಪೌಂಡ್ಸ್ ಕುರಿತು ಎಕ್ಸ್ಚೆಂಜ್ ರಿಜಿಸ್ಟ್ರೇಷನ್, ಡಿಸ್ಕೌಂಟ್ ಚಾರ್ಜಸ್, ಕಸ್ಟಮ್ಸ್ ಡಿಕ್ಲರೇಷನ್ ಫಾರ್ಮ್ ನಲ್ಲಿ ನಮೂದಿಸದೆ ಇರುವ ಬಗ್ಗೆ, ಮನಿ ಲಾಂಡರಿಂಗ್ ಚಾರ್ಜ್ ಬಗ್ಗೆ ಇನ್ನಿತರ ಅನೇಕ ಕಾರಣಗಳನ್ನು ತಿಳಿಸಿದ್ದು ತನ್ನನ್ನು ಪಾರು ಮಾಡಲು ಕೇಳಿಕೊಂಡಿದ್ದಳು. ಈ ವೇಳೆ, ಬೇರೆ ಬೇರೆ ಬ್ಯಾಂಕ್ ಖಾತೆಗಳ ವಿವರವನ್ನು ನೀಡಿ ಹಣ ಪಾವತಿಸಲು ಮಹಿಳೆ ತಿಳಿಸಿದ್ದಾಳೆ. ಅದರಂತೆ ನ.15ರಿಂದ 18ರ ವರೆಗೆ ದೂರುದಾರ ವ್ಯಕ್ತಿಯು ಹಂತ ಹಂತವಾಗಿ ಒಟ್ಟು 13,38,900 ರೂ. ವರ್ಗಾಯಿಸಿದ್ದಾರೆ. ಬಳಿಕ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಎರಡು ದಿನದಲ್ಲಿ ನೀಡುವುದಾಗಿ ಲಿಲ್ಲಿಯನ್ ತಿಳಿಸಿದ್ದಾಳೆ. ಆದರೆ ಆ ಬಳಿಕ ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದು ತಿಳಿದಿದ್ದು ಹಣ ಕಳಕೊಂಡ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ರಾಖಲಿಸಿದ್ದಾರೆ.
A 57-year-old man from Mangaluru lost ₹13.38 lakh after being duped by a woman who posed as a London resident and promised £25,000 and 1 kg of gold. Another woman pretended to be from Mumbai Airport Customs and demanded money for clearance charges. Realising he was cheated, the victim filed a complaint at Kadri Police Station.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
27-06-26 10:54 am
HK News Staffer
Mumbai Train Murder, Mangalore: ಮುಂಬೈ ಲೋಕಲ್ ಟ...
26-06-26 07:35 pm
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm