ಬ್ರೇಕಿಂಗ್ ನ್ಯೂಸ್
06-07-25 10:52 pm HK News Desk ಕ್ರೈಂ
ಚೆನ್ನೈ, ಜುಲೈ 6 : ಪೊಲೀಸರು ಕೆಲವೊಮ್ಮೆ ಎಷ್ಟು ಕ್ರೂರವಾಗಿ ವರ್ತಿಸುತ್ತಾರೆ ಎನ್ನುವುದಕ್ಕೆ ತಮಿಳುನಾಡಿನಲ್ಲಾದ ಈ ಘಟನೆಯೇ ಸಾಕ್ಷಿ. ಚಿನ್ನದ ಸರ ಕಳವು ಆರೋಪಕ್ಕೀಡಾದ ದೇವಸ್ಥಾನದ ಸೆಕ್ಯುರಿಟಿ ಸಿಬಂದಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ಅತ್ಯಂತ ಕ್ರೂರವಾಗಿ ಹಿಂಸಿಸಿದ್ದು, ಯದ್ವಾತದ್ವಾ ಹೊಡೆದಿದ್ದರಿಂದ ಆ ವ್ಯಕ್ತಿ ಲಾಕಪ್ ಡೆತ್ ಆಗಿದ್ದಾನೆ. ತಮಿಳುನಾಡು ರಾಜಕೀಯದಲ್ಲಿ ಈ ಪ್ರಕರಣ ಬಿರುಗಾಳಿ ಎಬ್ಬಿಸಿದ್ದು, ಇದರ ಬೆನ್ನಲ್ಲೇ ಎಸ್ಪಿ ಸೇರಿ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಲ್ಲದೆ, ನಾಲ್ವರನ್ನು ಬಂಧನ ಮಾಡಲಾಗಿದೆ. ಅಲ್ಲದೆ, ವಿಪಕ್ಷಗಳ ಒತ್ತಡಕ್ಕೆ ಮಣಿದು ಒಟ್ಟು ಪ್ರಕರಣವನ್ನು ಡಿಎಂಕೆ ಸರಕಾರ ಸಿಬಿಐ ತನಿಖೆಗೆ ವಹಿಸಿದೆ.
ಶಿವಗಂಗಾ ಜಿಲ್ಲೆಯ ಮಾದಾಪುರಂ ಎಂಬಲ್ಲಿನ ದೇವಸ್ಥಾನಕ್ಕೆ ಬಂದಿದ್ದ ಶ್ರೀಮಂತ ಕುಟುಂಬವೊಂದು ತಮ್ಮ ಕಾರನ್ನು ಪಾರ್ಕ್ ಮಾಡುವಂತೆ ಅಲ್ಲಿದ್ದ ಸೆಕ್ಯುರಿಟಿ ಸಿಬಂದಿಗೆ ಸೂಚಿಸಿತ್ತು. ಆದರೆ ಇದೇ ವೇಳೆ, ಬ್ಯಾಗಿನಲ್ಲಿದ್ದ ಚಿನ್ನದ ಸರ ಕಳವಾಗಿದೆ ಎಂದು ಕುಟುಂಬದ ಮಹಿಳೆಯೊಬ್ಬರು ಸ್ಥಳೀಯ ಠಾಣೆಯಲ್ಲಿ ಮರುದಿನ ದೂರು ನೀಡಿದ್ದರು. ಈಕೆ ಪ್ರಭಾವಿ ಕುಟುಂಬಕ್ಕೆ ಸೇರಿದ ಮಹಿಳೆಯಾಗಿದ್ದರಿಂದ ಪೊಲೀಸರು ತೀವ್ರ ರೀತಿಯಲ್ಲಿ ವರ್ತಿಸಿದ್ದು, ಕಾರು ಪಾರ್ಕ್ ಮಾಡಿದ್ದ ದೇವಸ್ಥಾನದ ಸೆಕ್ಯುರಿಟಿ ಸಿಬಂದಿ ಅಜಿತ್ ಕುಮಾರ್ ನನ್ನು ಜೂನ್ 27ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅಷ್ಟೇ ಅಲ್ಲ, ಚಿನ್ನದ ಸರ ತಾನೇ ಕಳವು ಮಾಡಿದ್ದಾಗಿ ಒಪ್ಪಿಕೊಳ್ಳುವಂತೆ ಠಾಣೆಯಲ್ಲಿ ಕೂಡಿಹಾಕಿ ಹಿಂಸೆ ನೀಡಿದ್ದಾರೆ.
ಪೊಲೀಸರು ಎಷ್ಟು ಹಿಂಸೆ ನೀಡಿದರೂ ಅಜಿತ್ ಕುಮಾರ್ ತನಗೇನೂ ಗೊತ್ತಿಲ್ಲ, ನಾನು ಸರ ಕಳವು ಮಾಡಿಲ್ಲ ಎಂದೇ ಹೇಳಿದ್ದಾನೆ. ಕೊನೆಗೆ ಇವರು ಹೊಡೆದು ನನ್ನನ್ನು ಸಾಯಿಸುತ್ತಾರೆಂದು ಭಯಗೊಂಡು ತಾನೇ ಕಳವು ಮಾಡಿದ್ದೇನೆಂದು ಹೇಳಿದ್ದಲ್ಲದೆ, ಚಿನ್ನದ ಸರವನ್ನು ದೇವಸ್ಥಾನ ಬಳಿಯಲ್ಲೇ ಇಟ್ಟಿದ್ದೇನೆ, ಆ ಜಾಗಕ್ಕೆ ಕರೆದೊಯ್ಯುವಂತೆ ಪೊಲೀಸರಿಗೆ ಹೇಳಿದ್ದಾನೆ. ಅದರಂತೆ, ಪೊಲೀಸರು ಆ ಜಾಗಕ್ಕೆ ಒಯ್ಯುತ್ತಲೇ ಅಜಿತ್ ಎಲ್ಲರ ಮುಂದೆ ನಿಜ ಘಟನೆಯನ್ನು ಹೇಳಿದ್ದಾನೆ, ತಾನು ಯಾವುದೇ ಸರ ಕದ್ದಿಲ್ಲ, ವಿನಾಕಾರಣ ನನಗೆ ಹಿಂಸೆ ನೀಡಿದ್ದಾರೆ. ನಾನೇ ಸರ ಕದ್ದಿದ್ದಾಗಿ ಒಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದಾಗಿ ಅಲ್ಲಿ ಸೇರಿದ್ದ ಜನರ ಮುಂದೆಯೇ ಹೇಳಿಕೆ ನೀಡಿದ್ದಾನೆ. ಇದನ್ನು ಅಲ್ಲಿದ್ದವರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು, ಪೊಲೀಸರಿಗೆ ಮುಖಕ್ಕೆ ಹೊಡೆದಂತೆ ಆಗಿತ್ತು.
ಇದರಿಂದ ಮತ್ತಷ್ಟು ಸಿಟ್ಟುಗೊಂಡ ಪೊಲೀಸರು ಅಜಿತ್ ನನ್ನು ಮತ್ತೆ ಠಾಣೆಗೊಯ್ದು ಎದೆ, ಮುಖ ಎಂದೂ ನೋಡದೆ ಬೂಟು ಕಾಲಿನಲ್ಲಿ ತುಳಿದು ಬಾರುಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಲಾಠಿಯಲ್ಲಿ ಕುತ್ತಿಗೆ, ಎದೆ, ಕುಂಡೆ, ಬೆನ್ನಿಗೆ ತೀವ್ರ ರೀತಿಯಲ್ಲಿ ಥಳಿಸಿದ್ದಾರೆ. ಇದರಿಂದ ಅಜಿತ್ ಕೋಮಾ ಸ್ಥಿತಿಗೆ ಹೋಗಿದ್ದು, ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಜೂನ್ 29ರಂದು ಅಜಿತ್ ಕುಮಾರ್ ಸಾವನ್ನಪ್ಪಿದ ಸುದ್ದಿ ಹೊರ ಬಂದಿದ್ದು, ಲಾಕಪ್ ಸಾವೆಂದು ಭಾರೀ ವಿವಾದ ಎದ್ದಿತ್ತು. ಆದರೆ ಪೊಲೀಸರು ತಮ್ಮ ತಪ್ಪನ್ನು ಮುಚ್ಚಿ ಹಾಕಲು ಆತನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎನ್ನುವ ರೀತಿ ಬಿಂಬಿಸಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಅಷ್ಟರಲ್ಲಿ ಅಜಿತ್ ಕುಮಾರ್ ಸಾರ್ವಜನಿಕರ ಮುಂದೆ ನೀಡಿದ್ದ ಹೇಳಿಕೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಪೊಲೀಸರೇ ಹೊಡೆದು ಹಾಕಿದ್ದಾರೆ ಎನ್ನುವ ಸುದ್ದಿ ಹಬ್ಬಿದ್ದರಿಂದ ವಿಪಕ್ಷಗಳು ಸರಕಾರವನ್ನು ಕಟುವಾಗಿ ಟೀಕಿಸಿದ್ದವು. ಅಜಿತ್ ಕುಟುಂಬಸ್ಥರು ಪೊಲೀಸರ ಬಗ್ಗೆಯೇ ಆರೋಪಿಸಿ ಪ್ರತಿಭಟನೆ ನಡೆಸಿದ್ದರು.ಇಷ್ಟಾಗುತ್ತಲೇ ಲಾಕಪ್ ಡೆತ್ ಆದ ಅಜಿತ್ ಕುಮಾರ್ ಶವವನ್ನು ಪೋಸ್ಟ್ ಮಾರ್ಟಂ ಮಾಡಿದ್ದು, ಅದರಲ್ಲಿ ನಿಜ ವೃತ್ತಾಂತ ಹೊರಬಂದಿತ್ತು. ಲಾಕಪ್ ತಲೆ, ಮುಖ, ಎದೆ, ಕುಂಡೆಯಲ್ಲಿ ಬಾರುಕೋಲಿನಿಂದ ಹೊಡೆದು ಹಾಕಿದ್ದಕ್ಕೆ ಸಾಕ್ಷಿ ಸಿಕ್ಕಿತ್ತು. ತಲೆ, ಮುಖ ಸೀಳಿದಂತಾಗಿ ಹೆಣವೇ ಬಾತುಹೋಗಿತ್ತು. ಅಲ್ಲದೆ, 46 ಕಡೆ ತೀವ್ರ ರೀತಿಯ ಗಾಯಗಳಿರುವುದನ್ನು ವೈದ್ಯಕೀಯ ವರದಿ ಹೇಳಿತ್ತು. ಅದರ ಬೆನ್ನಲ್ಲೇ ತಮಿಳುನಾಡು ಸರಕಾರ ಕೊಲೆ ಪ್ರಕರಣ ದಾಖಲಿಸಲು ಸೂಚಿಸಿದ್ದು, ತನಿಖೆ ನಡೆಸಬೇಕಿದ್ದ ಠಾಣೆಯ ಪೊಲೀಸರೇ ಆರೋಪಿಗಳಾಗಿ ಬದಲಾಗಿದ್ದರು. ಘಟನೆ ಸಂಬಂಧಿಸಿ ಆರು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಲ್ಲದೆ, ಕೃತ್ಯಕ್ಕೆ ಕಾರಣವಾದ ನೆಪದಲ್ಲಿ ಕೆಲವರನ್ನು ಬಂಧನ ಮಾಡಲಾಗಿದೆ. ಅಲ್ಲದೆ, ಸಿವಗಂಗಾ ಎಸ್ಪಿಯನ್ನೂ ಅಮಾನತು ಮಾಡಲಾಗಿದೆ.
ಮಹಿಳೆಯ ದೂರಿನ ಪ್ರಕಾರ, 80 ಗ್ರಾಮ್ ಚಿನ್ನ ಕಳವಾಗಿತ್ತು. ಮಾದಾಪುರಂ ಭದ್ರಕಾಳಿ ದೇವಸ್ಥಾನಕ್ಕೆ ಬಂದಿದ್ದಾಗ ಘಟನೆ ನಡೆದಿತ್ತು. ಸೆಕ್ಯುರಿಟಿ ಸಿಬಂದಿಯಾಗಿದ್ದ ಅಜಿತ್ ಕುಮಾರ್ ನಲ್ಲಿ ಕಾರನ್ನು ಪಾರ್ಕ್ ಮಾಡುವಂತೆ ಸೂಚಿಸಲಾಗಿತ್ತು. ಆತನಿಗೆ ಡ್ರೈವಿಂಗ್ ಬರದೇ ಇದ್ದುದರಿಂದ ಬೇರೊಬ್ಬರಲ್ಲಿ ಹೇಳಿ ಕಾರನ್ನು ತುಸು ದೂರದಲ್ಲಿ ಪಾರ್ಕ್ ಮಾಡಿಸಿದ್ದ ಎನ್ನಲಾಗಿದೆ. ಆದರೆ ಪೊಲೀಸರು ಈತನ ಮಾತು ಕೇಳದೆ ಚಿತ್ರಹಿಂಸೆ ನೀಡಿದ್ದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಡಿಎಂಕೆ ಸರಕಾರ ಬಂದ ಬಳಿಕ ತಮಿಳುನಾಡಿನಲ್ಲಿ 24 ಲಾಕಪ್ ಸಾವುಗಳು ಸಂಭವಿಸಿದ್ದು, ಬಿಜೆಪಿ ಮತ್ತು ಎಐಎಡಿಎಂಕೆ ನಾಯಕರು ಸಿಎಂ ಸ್ಟಾಲಿನ್ ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ, ತಮಿಳುನಾಡು ಹೈಕೋರ್ಟ್ ಸುಮೊಟೋ ಕೇಸು ದಾಖಲಿಸಿದ್ದು, ಅಜಿತ್ ಏನು ಟೆರರಿಸ್ಟ್ ಆಗಿದ್ದನಾ, ಆ ರೀತಿಯ ಟ್ರೀಟ್ಮೆಂಟ್ ಯಾಕೆ ಕೊಡಲಾಯಿತು ಎಂದು ಪ್ರಶ್ನಿಸಿ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಸಾಮಾನ್ಯ ಕೊಲೆ ಪ್ರಕರಣದಲ್ಲಿಯೂ ಇಷ್ಟೊಂದು ಕ್ರೂರ ರೀತಿಯಲ್ಲಿ ಹಲ್ಲೆ ಆಗುವುದಿಲ್ಲ. ಇದು ಅದಕ್ಕಿಂತಲೂ ಘೋರ ಎಂದು ಕೋರ್ಟ್ ಹೇಳಿದೆ. ಇದೇ ವೇಳೆ, ರಾಜ್ಯ ಸರಕಾರ ಒಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಕೊಟ್ಟು ತಲೆಗೆ ಹತ್ತಿದ್ದ ಹೊರೆಯನ್ನು ಇಳಿಸುವ ಯತ್ನ ಮಾಡಿದೆ.
28 ವರ್ಷದ ಅಜಿತ್ ಕುಮಾರ್ ಬಡ ಕುಟುಂಬದ ಯುವಕನಾಗಿದ್ದು, ಸ್ಕೂಲ್ ಡ್ರಾಪೌಟ್ ಆದಬಳಿಕ ತಂದೆಯಿಲ್ಲದ ಕುಟುಂಬಕ್ಕೆ ತಾನೇ ಆಧಾರವಾಗಿದ್ದ. ನಾಡಾರ್ ಹಿಂದುಳಿದ ಸಮುದಾಯಕ್ಕೆ ಸೇರಿದ ಹುಡುಗನಾಗಿದ್ದು, ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ರಾಜ್ಯ ಸರಕಾರದ ದೇವಸ್ಥಾನ ಆಗಿದ್ದರೂ, ಅಲ್ಲಿ ಗುತ್ತಿಗೆ ಕಾರ್ಮಿಕನಾಗಿ ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ. ಇನ್ನೊಬ್ಬ ಸೋದರ ವಿನೀತ್ ಕುಮಾರ್ ಕೆಲಸಕ್ಕಾಗಿ ಅಲೆದಾಟ ನಡೆಸುತ್ತಿದ್ದ. ದೂರುದಾರೆ ಮಹಿಳೆ ಐಎಎಸ್ ಅಧಿಕಾರಿಯೊಬ್ಬರ ಸಂಪರ್ಕ ಇದ್ದುದರಿಂದ ಚಿನ್ನ ಕಳವಾದ ಬಗ್ಗೆ ದೂರು ಹೇಳಿಕೊಂಡಿದ್ದರು. ಇದರಿಂದ ಆ ಅಧಿಕಾರಿ ನೇರವಾಗಿ ಎಸ್ಪಿಗೆ ಫೋನಾಯಿಸಿ ತನಿಖೆ ಚುರುಕುಗೊಳಿಸುವಂತೆ ಹೇಳಿದ್ದರು. ಇದೇ ಕಾರಣಕ್ಕೆ ಒತ್ತಡಕ್ಕೆ ಬಿದ್ದ ಮೇಲಧಿಕಾರಿಗಳು, ಯಾವುದೇ ಬೆಲೆ ತೆತ್ತಾದರೂ ಚಿನ್ನ ಮರಳಿ ವಶಕ್ಕೆ ಪಡೆಯಿರಿ ಎಂದು ಕೆಳಸ್ತರದ ಪೊಲೀಸರಿಗೆ ಟಾಸ್ಕ್ ನೀಡಿದ್ದರು. ಇದರಂತೆ ಪೊಲೀಸರು ಆರೋಪಿಯೆಂದು ವಶಕ್ಕೆ ಪಡೆದಿದ್ದ ಅಜಿತ್ ಮೇಲೆ ಇನ್ನಿಲ್ಲದ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದರು ಎನ್ನಲಾಗಿದೆ.
A horrific case of custodial death in Tamil Nadu’s Sivaganga district has triggered public outrage and political storm, following the brutal police torture and death of Ajith Kumar, a 28-year-old security guard at a temple. The DMK government has now ordered a CBI investigation after mounting pressure from the opposition and widespread condemnation.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
06-07-25 03:53 pm
HK News Desk
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
06-07-25 10:52 pm
HK News Desk
Mangalore Foreign Job Scam, Hireglow Elegant,...
06-07-25 04:14 pm
Pregnant Woman Murder, Chamarajanagar: ಗರ್ಭಿಣ...
06-07-25 01:23 pm
6 ವರ್ಷಗಳ ಹಿಂದೆ ಮಗನ ಹತ್ಯೆ ; ಇಂದು ಅಪ್ಪನ ಗುಂಡಿಕ್...
05-07-25 11:04 pm
Puttur News, Girl Pregnant, Father Arrest: ಸಹ...
05-07-25 09:06 pm