Mangalore Foreign Job Scam, Hireglow Elegant, Mangalore CCB Police: Hireglow Elegant ಹೆಸರಲ್ಲಿ ವಿದೇಶಿ ಉದ್ಯೋಗದ ಆಫರ್ ; ಮುಂಬೈನಲ್ಲಿದ್ದೇ ಕರಾವಳಿ ಜನರಿಗೆ ಪಂಗನಾಮ, ಮತ್ತಿಬ್ಬರು ಕತರ್ನಾಕ್ ಕಂತ್ರಿಗಳನ್ನು ಬಲೆಗೆ ಕೆಡವಿದ ಮಂಗಳೂರು ಸಿಸಿಬಿ

06-07-25 04:14 pm       Mangalore Correspondent   ಕ್ರೈಂ

ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಮಂಗಳೂರು, ಉಡುಪಿ ಜಿಲ್ಲೆಯ 280ಕ್ಕೂ ಹೆಚ್ಚು ಮಂದಿಗೆ ವಂಚನೆ ಎಸಗಿದ್ದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪ್ರಮುಖ ಆರೋಪಿಗಳಿಬ್ಬರನ್ನು ಮುಂಬೈನಲ್ಲಿ ಬಲೆಗೆ ಕೆಡವಿದ್ದಾರೆ.

ಮಂಗಳೂರು, ಜುಲೈ 6 : ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಮಂಗಳೂರು, ಉಡುಪಿ ಜಿಲ್ಲೆಯ 280ಕ್ಕೂ ಹೆಚ್ಚು ಮಂದಿಗೆ ವಂಚನೆ ಎಸಗಿದ್ದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಪ್ರಮುಖ ಆರೋಪಿಗಳಿಬ್ಬರನ್ನು ಮುಂಬೈನಲ್ಲಿ ಬಲೆಗೆ ಕೆಡವಿದ್ದಾರೆ.

ನವಿ ಮುಂಬೈನ ಕೋಪರ್ ಕೈರಾನೆ ನಿವಾಸಿ ದಿಲ್ ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಥಾಣೆಯ ಡೊಂಬಿವಿಲಿ ನಿವಾಸಿ ಸಾಹುಕಾರಿ ಕಿಶೋರ್ ಕುಮಾರ್ ಅಲಿಯಾಸ್ ಅನಿಲ್ ಕುಮಾರ್ (34) ಬಂಧಿತರು. ಆರೋಪಿಗಳು ಮಂಗಳೂರಿನ ಬೆಂದೂರ್ ವೆಲ್ ನಲ್ಲಿ Hireglow Elegant Overseas International Ltd ಎಂಬ ಕಚೇರಿಯನ್ನು ತೆರೆದು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಉದ್ಯೋಗದ ಹಿಂದೆ ಬಿದ್ದವರಿಂದ ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದರು.

ಆದರೆ ಒಬ್ಬೊಬ್ಬರು 2ರಿಂದ 5 ಲಕ್ಷದ ವರೆಗೆ ಹಣ ಕೊಟ್ಟಿದ್ದರೂ ಉದ್ಯೋಗ ನೀಡದೇ ಇದ್ದಾಗ ಸಂತ್ರಸ್ತರು ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಫೆಬ್ರವರಿ ತಿಂಗಳಲ್ಲಿ ಕದ್ರಿ ಠಾಣೆಯಲ್ಲಿ 289 ಜನರಿಗೆ 4.50 ಕೋಟಿ ಹಣ ವಂಚಿಸಿದ್ದಾಗಿ ಪ್ರಕರಣ ದಾಖಲಾಗಿತ್ತು. ಕಳೆದ ಎಪ್ರಿಲ್ ತಿಂಗಳಲ್ಲಿ ಪ್ರಕರಣದ ಬಗ್ಗೆ ಕಾಂಗ್ರೆಸ್ ಮುಖಂಡ ಲಾರೆನ್ಸ್ ಡಿಸೋಜ ಧ್ವನಿಯೆತ್ತಿ ಪೊಲೀಸ್ ಕಮಿಷನರ್ ಅವರಿಗೆ ಒತ್ತಡ ಹಾಕಿದ್ದರಿಂದ ತನಿಖೆಗೆ ಚುರುಕು ಸಿಕ್ಕಿತ್ತು. ಅಲ್ಲದೆ, ಈ ಬಗ್ಗೆ ನವೆಂಬರ್ ತಿಂಗಳಲ್ಲಿಯೇ ಇಮಿಗ್ರೇಶನ್ ಅಧಿಕಾರಿಗಳಿಂದ ಸದ್ರಿ ಏಜನ್ಸಿ ನಕಲಿಯೆಂದು ಮಾಹಿತಿ ಬಂದಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ ಬಗ್ಗೆ ಕದ್ರಿ ಠಾಣೆಯ ಎಸ್ಐ ಮತ್ತು ಇನ್ಸ್ ಪೆಕ್ಟರ್ ಅವರನ್ನು ಅಂದಿನ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅಮಾನತು ಮಾಡಿದ್ದರು.

ಅದೇ ಸಂದರ್ಭದಲ್ಲಿ ಪ್ರಕರಣದ ತನಿಖೆಯನ್ನು ಸಿಸಿಬಿ ತಂಡಕ್ಕೆ ವರ್ಗಾಯಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿ ಮಸೀವುಲ್ಲಾ ಖಾನ್ ಎಂಬ ಮುಂಬೈ ಮೂಲದ ಆರೋಪಿಯನ್ನು ಬಂಧಿಸಿದ್ದರು. ತನಿಖೆ ಮುಂದುವರಿಸಿದ ಸಿಸಿಬಿ ಇನ್ಸ್ ಪೆಕ್ಟರ್ ಶರೀಫ್ ನೇತೃತ್ವದ ಪೊಲೀಸರು ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯ ಸಂದರ್ಭದಲ್ಲಿ ಇವರು ಮುಂಬೈನಲ್ಲೇ ಇದ್ದುಕೊಂಡು ಸಂತ್ರಸ್ತರ ಜೊತೆಗೆ ನೇರ ಸಂಪರ್ಕ ಇಲ್ಲದೆ, ಕಚೇರಿ ಸಿಬಂದಿಯ ಮೂಲಕ ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ನಂಬಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ. ಇವರು ಮುಂಬೈ, ಮಂಗಳೂರು ಸೇರಿದಂತೆ ಬೇರೆ ಬೇರೆ ಕಡೆಯೂ ಇದೇ ರೀತಿ ವಿದೇಶಿ ಉದ್ಯೋಗದ ಆಫರ್ ನೀಡುವ ಕಚೇರಿ ತೆರೆದು ಇನ್ನಷ್ಟು ಮಂದಿಗೆ ದೋಖಾ ಎಸಗಿರುವ ಮಾಹಿತಿ ಲಭಿಸಿದ್ದು, ಮಂಗಳೂರು ಪೊಲೀಸರು ಅವರನ್ನು ಕಸ್ಟಡಿಗೆ ಪಡೆದು ಡ್ರಿಲ್ ಮಾಡಲಿದ್ದಾರೆ.

In a major breakthrough, the Mangalore CCB police have arrested two prime accused from Mumbai in a large-scale overseas job scam that duped more than 280 people from Mangalore and Udupi districts. The arrested have been identified as Dilshad Abdul Sattar Khan (45), a resident of Kopar Khairane in Navi Mumbai, and Kishore Kumar alias Anil Kumar (34), a resident of Dombivli, Thane. The duo had opened an office in Bendorewell, Mangalore, under the name Hireglow Elegant Overseas International Ltd.