ಬ್ರೇಕಿಂಗ್ ನ್ಯೂಸ್
05-07-25 12:56 pm Mangalore Correspondent ಕರಾವಳಿ
ಮಂಗಳೂರು, ಜುಲೈ.5: ಹಿಂದು ಜಾಗರಣ ವೇದಿಕೆ ಮುಖಂಡನೊಬ್ಬನ ಮೊಬೈಲ್ ನಲ್ಲಿ 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ಪತ್ತೆಯಾಗಿದ್ದು ಕರಾವಳಿಯಲ್ಲಿ ಭಾರೀ ಸುದ್ದಿಗೆ ಗ್ರಾಸವಾಗಿದೆ. ಮೂಡುಬಿದ್ರೆಯ ಹಿಂಜಾವೇ ಮುಖಂಡ ಸಮಿತ್ ರಾಜ್ ದರೆಗುಡ್ಡೆ ಎಂಬಾತನ ಮೊಬೈಲ್ ನಲ್ಲಿ ಪೊಲೀಸರ ಪರಿಶೀಲನೆ ವೇಳೆ ಅಶ್ಲೀಲ ವಿಡಿಯೋ ಸಿಕ್ಕಿದೆಯೆಂದು ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಐವತ್ತಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಸಿಕ್ಕಿದ್ದು ಇದರಲ್ಲಿ ಕರಾವಳಿ ರಾಜಕಾರಣಿಯೊಬ್ಬರ ವಿಡಿಯೋ ಇದೆಯೆಂದೂ ವದಂತಿ ಹರಡಿದೆ. 2024ರ ನವೆಂಬರ್ ತಿಂಗಳಲ್ಲಿ ಅಪಘಾತ ಪಡಿಸಿದ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆದ ಪ್ರಕರಣದಲ್ಲಿ ಸಮಿತ್ ರಾಜ್ ನನ್ನು ಮೂಡುಬಿದ್ರೆ ಪೊಲೀಸರು ಬಂಧಿಸಿದ್ದು ಈ ವೇಳೆ ಮೊಬೈಲ್ ಪರಿಶೀಲನೆ ಮಾಡಿದ್ದರು. ಮೊಬೈಲ್ ಲಾಕ್ ಆಗಿದ್ದರಿಂದ ಕೋರ್ಟ್ ಅನುಮತಿ ಪಡೆದು ಮೊಬೈಲನ್ನು ಹೆಚ್ಚಿನ ಪರಿಶೀಲನೆಗಾಗಿ ಮಂಗಳೂರಿನ ಸೆನ್ ಠಾಣೆಯ ಲ್ಯಾಬ್ ನಲ್ಲಿ ಚೆಕ್ ಮಾಡಲಾಗಿತ್ತು.
ಈ ವೇಳೆ, 50ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ತುಣುಕು ಪತ್ತೆಯಾಗಿದೆ. ಅಲ್ಲದೆ, ಗಂಡು ಮತ್ತು ಹೆಣ್ಣಿನ ನಗ್ನ ಹಲವಾರು ದೃಶ್ಯಾವಳಿಗಳು ಪತ್ತೆಯಾಗಿದ್ದು ತನ್ನದೇ ಲೈಂಗಿಕ ಸಂಪರ್ಕದ ದೃಶ್ಯಾವಳಿಗಳೂ ಇರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಅಶ್ಲೀಲ ವಿಡಿಯೋ ಹಿನ್ನೆಲೆಯಲ್ಲಿ ಮೂಡುಬಿದಿರೆ ಠಾಣೆ ಇನ್ಸ್ಪೆಕ್ಟರ್ ಸಂದೇಶ್ ದೂರಿನಂತೆ ಬಿಎನ್ಎಸ್ ಸೆಕ್ಷನ್ 294(ಎ) ಪ್ರಕಾರ ಅಶ್ಲೀಲ ವಿಡಿಯೋಗಳನ್ನು ಹೊಂದಿದ್ದಕ್ಕಾಗಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುವ ಅಥವಾ ಇನ್ಯಾರಿಗೋ ಕಳುಹಿಸಿ ಬೆದರಿಕೆ ಒಡ್ಡುವ ಸಾಧ್ಯತೆ ಇದೆಯೆಂದು ಕೇಸು ದಾಖಲಿಸಲಾಗಿದೆ. ಇಂತಹ ವಿಡಿಯೋಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಸಾಧ್ಯತೆಯಿರುವ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಯಾರೂ ಸಂತ್ರಸ್ತರು ದೂರು ಕೊಟ್ಟಿಲ್ಲ. ಯಾರಾದ್ರೂ ಬ್ಲಾಕ್ಮೇಲ್ ಒಳಗಾದವರು, ಸಂತ್ರಸ್ತರಿದ್ದರೆ ದೂರು ಕೊಟ್ಟರೆ ರೇಪ್ ಕೇಸು ದಾಖಲಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ರಿ ಪ್ರಕರಣದಲ್ಲಿ ಆರೋಪಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದು ಯಾರಾದ್ರೂ ದೌರ್ಜನ್ಯಕ್ಕೊಳಗಾದವರಿದ್ದರೆ ದೂರು ಕೊಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
A major controversy has erupted in the coastal region after over 50 obscene video clips were allegedly found on the mobile phone of a Hindu Jagarana Vedike leader. An FIR has been registered against the accused, identified as Sumith Raj Daregudde, a prominent figure associated with the organization in Moodbidri.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 05:16 pm
Mangalore Correspondent
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
Mangalore FIR, Dharmasthala, Criminal Activit...
04-07-25 10:54 pm
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm