ಬ್ರೇಕಿಂಗ್ ನ್ಯೂಸ್
13-02-25 10:14 pm Mangalore Correspondent ಕ್ರೈಂ
ಉಳ್ಳಾಲ, ಫೆ.13: ಉಳ್ಳಾಲ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಕಳ್ಳತನ, ದರೋಡೆ ಕೃತ್ಯಗಳು ಹೆಚ್ಚತೊಡಗಿವೆ. ಇತ್ತೀಚೆಗೆ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದ ಬೆನ್ನಲ್ಲೇ ಉಳ್ಳಾಲ ಠಾಣೆಯ ಪಿಎಸ್ ಐ ಒಬ್ಬರಿದ್ದ ಜೀಪಿನಿಂದಲೇ ಪೊಲೀಸ್ ವಾಕಿ ಟಾಕಿಯನ್ನೇ ಕಳವುಗೈಯಲಾಗಿತ್ತು. ಇದೀಗ ಹಾಡಹಗಲೇ ನಿಲ್ಲಿಸಿದ್ದ ವಾಹನಗಳ ಹೆಲ್ಮೆಟ್ ಗಳನ್ನೇ ಕಳ್ಳರು ಎಗರಿಸುವ ಕೃತ್ಯಕ್ಕೆ ಮುಂದಾಗಿದ್ದಾರೆ.
ರಾ.ಹೆ. 66 ರ ಕೊಲ್ಯದ ಅಂಚೆ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಪೋಸ್ಟ್ ಡೆಲಿವರಿ ಕಾರ್ಯ ನಿರ್ವಹಿಸುತ್ತಿರುವ ಯುವತಿಯೋರ್ವರು ಕಚೇರಿ ಹೊರಗಡೆ ಸ್ಕೂಟರಲ್ಲಿಟ್ಟಿದ್ದ ಹೆಲ್ಮೆಟನ್ನ ಬುಧವಾರ ಬೆಳಗ್ಗೆ ಕಳವುಗೈಯಲಾಗಿದೆ. ಸ್ಕೂಟರ್ ಒಂದರಲ್ಲಿ ಟಿಪ್ ಟಾಪ್ ಡ್ರೆಸ್ ಹಾಕ್ಕೊಂಡು ಬಂದ ಯುವಕನೋರ್ವ ತನ್ನ ಸ್ಕೂಟರ್ ನಿಲ್ಲಿಸಿ, ಓಡಿ ಬಂದು ಯುವತಿಯ ಸ್ಕೂಟರಿಂದ ಹೆಲ್ಮೆಟನ್ನ ಎಗರಿಸಿ ಪರಾರಿಯಾಗಿದ್ದಾನೆ. ಯುವಕನ ಹೆಲ್ಮೆಟ್ ಕಳ್ಳತನದ ಐನಾತಿ ಕೃತ್ಯ ಹೆದ್ದಾರಿ ಅಂಚಿನ ವಾಣಿಜ್ಯ ಕಟ್ಟಡದ ಮೇಲಂತಸ್ತಿನಲ್ಲಿರುವ ಅಂಚೆ ಕಚೇರಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಹೆಲ್ಮೆಟ್ ಕಳ್ಳತನವಾಗಿದ್ದು, ಸಿಬ್ಬಂದಿ ಯುವತಿ ಪೋಸ್ಟ್ ಗಳನ್ನ ವಿತರಿಸಲು ಸ್ಕೂಟರ್ ಬಳಿ ತೆರಳಿದಾಗ ಹೆಲ್ಮೆಟ್ ಇಲ್ಲದೆ ತೀವ್ರ ಹುಡುಕಾಟ ನಡೆಸಿದ್ದಾರೆ. ಬಳಿಕ ಅಂಚೆ ಕಚೇರಿಯ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳನ ಕೃತ್ಯ ಬೆಳಕಿಗೆ ಬಂದಿದೆ.
ದ್ವಿಚಕ್ರ ವಾಹನಗಳು ಕಳವಾದರೆ ಉಳ್ಳಾಲ ಠಾಣೆಗೆ ದೂರು ಕೊಟ್ಟರೆ ಪೊಲೀಸರು ಎಫ್ ಐಆರ್ ಬರೆಯುತ್ತಾರೆಯೇ ಹೊರತು ಕಳವಾದ ವಾಹನಗಳ ಬಗ್ಗೆ ಸುಳಿವು ನೀಡಿದರೂ ಶೋಧ ನಡೆಸುವ ಗೋಜಿಗೆ ಹೋಗೋದಿಲ್ಲವೆಂಬ ಆರೋಪಗಳಿವೆ. ಇಂತಹ ಪೊಲೀಸಿಂಗ್ ವ್ಯವಸ್ಥೆಯಿರುವಾಗ ಒಂದು, ಒಂದೂವರೆ ಸಾವಿರ ಬೆಲೆಬಾಳುವ ಹೆಲ್ಮೆಟ್ ಕಳವಿನ ಬಗ್ಗೆ ಯಾರಾದರೂ ಪೊಲೀಸ್ ದೂರು ನೀಡಲು ಸಾಧ್ಯವೇ? ಮನೆಗಳಲ್ಲಿ ನಗ, ನಗದು ಕಳವಾದರೂ ಕಡಿಮೆ ಲೆಕ್ಕ ತೋರಿಸಿ ಕದ್ದ ಮಾಲಲ್ಲೂ ಪಾಲು ಪಡೆಯುವ ಅಧಿಕಾರಿಗಳು ಉಳ್ಳಾಲ ಠಾಣೆಯಲ್ಲಿರಲು ಕಳ್ಳರಿಗೂ ಯಾರ ಭಯವೂ ಇಲ್ಲದಂತಾಗಿದೆ.
ಇನ್ನು ಉಳ್ಳಾಲದಾದ್ಯಂತ ರಾತ್ರಿಯಾಗುತ್ತಿದ್ದಂತೆ ಅಕ್ರಮ ಮರಳು ಧಂದೆ ಎಗ್ಗಿಲ್ಲದೆ ನಡೆಯುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತಿದ್ದಾರೆ. ಉಳ್ಳಾಲ ಮಾತ್ರವಲ್ಲದೆ ಕೊಣಾಜೆ ಠಾಣಾ ವ್ಯಾಪ್ತಿಯ ಹೂ ಹಾಕುವ ಕಲ್ಲಿನ ಕುಗ್ರಾಮಕ್ಕೂ ಮಟ್ಕಾ ಧಂದೆ ವ್ಯಾಪಿಸಿದ್ದರೂ ಅಕ್ರಮಗಳ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಯುತ್ತಿಲ್ಲ.
#Mangalore Post man helmet stolen in broad daylight near #Kolya, video goes viral. #LiveRobbery pic.twitter.com/j48UBzvl64
— Headline Karnataka (@hknewsonline) February 13, 2025
Mangalore Post man helmet stolen in broad daylight near Kolya, video goes viral.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am