ಬ್ರೇಕಿಂಗ್ ನ್ಯೂಸ್
02-11-24 10:35 pm Udupi Correspondent ಕ್ರೈಂ
ಉಡುಪಿ, ನ.2: ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಮನೆ ಯಜಮಾನಿಯನ್ನು ಕೆಲಸದಾಕೆಯೇ ಯಾಮಾರಿಸಿ, 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ನಕ್ಲೇಸನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಶಿವಳ್ಳಿ ಗ್ರಾಮದ ನಿವಾಸಿ ಜ್ಯೂಲಿಯಟ್ ಎಂಬವರು 4 ತಿಂಗಳಿನಿಂದ ಪೆರಂಪಳ್ಳಿಯ ಸುನೀತಾ ಅವರನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ಕೆಲಸದಾಕೆ ಬಳಿ ಮನೆಯ ಯಜಮಾನಿ ತನ್ನ ಮತ್ತು ಗಂಡನ ನಡುವೆ ಇದ್ದ ಮನಸ್ತಾಪದ ಬಗ್ಗೆ ಹೇಳಿಕೊಂಡಿದ್ದರು. ಸುನೀತಾ ಅವರು ಜೂಲಿಯೆಟ್ಗೆ ಗಂಡನಿಗೆ ವಿಚ್ಛೇದನ ಕೊಡುವಂತೆ ಸಲಹೆ ನೀಡಿದ್ದರು. ಬೇಸರಗೊಂಡ ಜ್ಯೂಲಿಯೆಟ್ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದರು. ಈ ನಡುವೆ, ತಾಯಿಯನ್ನು ಮನೆಗೆ ಬರಲು ಹೇಳಿ ಅ.10ರಂದು ತಾಯಿಯಲ್ಲಿ ಬಟ್ಟೆಬರೆ ಹಾಗೂ ಸ್ವಲ್ಪ ಚಿನ್ನ ಹಾಗೂ ಗಂಡನ ಮನೆಯ ಲಾಕರ್ನಲ್ಲಿ ಇರಿಸಿದ್ದ 10 ಲಕ್ಷ ರೂಪಾಯಿಯಲ್ಲಿ 1 ಲಕ್ಷ ರೂ. ಹಣವನ್ನು ನೀಡಿದ್ದರು.
ಅ.29ರಂದು ಬೆಳಗ್ಗೆ ಜ್ಯೂಲಿಯೆಟ್ ಮನೆಯಲ್ಲಿದ್ದಾಗಲೇ ಸುನೀತಾ ಅವರು ಸ್ಟ್ಯಾನಿ ಎಂಬವರೊಂದಿಗೆ ಮನೆಗೆ ಬಂದು ಐ.ಟಿ. ಅಧಿಕಾರಿಗಳು ಬಂದಿದ್ದಾರೆ. ನಿಮ್ಮ ಮನೆಗೆ ರೈಡ್ ಮಾಡುತ್ತಾರೆ. ಲಾಕರ್ನಲ್ಲಿ ಇದ್ದ ಹಣ ಹಾಗೂ ಒಡವೆಯನ್ನು ತೆಗೆದುಕೊಡಿ, ಇಲ್ಲಾಂದ್ರೆ ಎತ್ಕೊಂಡು ಹೋಗುತ್ತಾರೆ ಎಂದು ಹೇಳಿ ಲಾಕರ್ ಕೀ ಪಡೆದಿದ್ದಾಳೆ. ಬಳಿಕ ಲಾಕರಿನಲ್ಲಿದ್ದ ಹಣದಲ್ಲಿ 1.50 ಲಕ್ಷ ರೂ.ಗಳನ್ನು ಜ್ಯೂಲಿಯೆಟ್ ಅವರ ಬ್ಯಾಗ್ ಗೆ ಹಾಕಿ ಉಳಿದ 7 ಲಕ್ಷ 50 ಸಾವಿರ ರೂ. ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ನೆಕ್ಲೆಸ್ ಅನ್ನು ತನ್ನ ಚೀಲದಲ್ಲಿ ಹಾಕಿಕೊಂಡು, ಸದ್ಯಕ್ಕೆ ಇದು ನನ್ನಲ್ಲಿ ಇರಲಿ, ಆನಂತರ ಕೊಡುತ್ತೇನೆ ಎಂದು ಹೇಳಿ ಒಯ್ದಿದ್ದರು.
ಐ.ಟಿ. ಅಧಿಕಾರಿಗಳು ದಾಳಿ ನಡೆಸುತ್ತಾರೆ ಎಂದು ನಂಬಿಸಿ ಸುನೀತಾ ಹಾಗೂ ಸ್ಟಾನಿ 7.50 ಲಕ್ಷ ರೂ. ನಗದು ಹಾಗೂ 3 ಲಕ್ಷ ಬೆಲೆಬಾಳುವ ಡೈಮಂಡ್ ಸರವನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವುದಾಗಿ ಜೂಲಿಯೆಟ್ ಪೊಲೀಸ್ ದೂರು ನೀಡಿದ್ದಾರೆ.
A housemaid allegedly made off with Rs 7.5 lac in cash and a diamond necklace valued at Rs 3 lac, deceiving her employer by claiming an impending IT raid at her residence under the jurisdiction of Manipal police station.
25-03-26 03:25 pm
HK News Staffer
ಹಿಂದು, ಸಿಖ್, ಬೌದ್ಧರಲ್ಲಿ ಮಾತ್ರ ಪರಿಶಿಷ್ಟ ಮೀಸಲು,...
24-03-26 02:55 pm
ಬಿಜೆಪಿ ಜೊತೆಗಿನ ಮೈತ್ರಿ ತಳ್ಳಿಹಾಕಿದ ನಟ ವಿಜಯ್ ; ಜ...
23-03-26 12:48 pm
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
24-03-26 04:43 pm
HK News Staffer
ಅಮೆರಿಕಾ ಜೊತೆ ಯಾವುದೇ ಮಾತುಕತೆ ನಡೆದಿಲ್ಲ , ನಮ್ಮ ವ...
24-03-26 12:10 pm
ಇರಾನ್ - ಅಮೆರಿಕ ಸಂಘರ್ಷ ; ದಿಢೀರ್ ಐದು ದಿನಗಳ ಕದನ...
23-03-26 09:46 pm
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
25-03-26 05:23 pm
HK News Staffer
ಟೋಲ್ ಪ್ಲಾಜಾಗಳ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಘಟಕ...
25-03-26 03:49 pm
ಗುಡ್ಡದಲ್ಲಿ ಹೊಳೆ ಬರುತ್ತಾ? ನಿವೇಶನ ರಹಿತರ ಜಮೀನು ಹ...
25-03-26 12:15 pm
ಹಣಕಾಸು ಮಸೂದೆ ಮೇಲಿನ ಚರ್ಚೆ ; ರಾಷ್ಟ್ರೀಯ ಭದ್ರತೆ,...
24-03-26 09:29 pm
ಟ್ಯಾಕ್ಸಿ ಕಾರುಗಳಿಗೆ ಪ್ಯಾನಿಕ್ ಬಟನ್ ಹಣ ಮಾಡುವ ದಂಧ...
24-03-26 08:29 pm
24-03-26 02:04 pm
HK News Staffer
ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಪ್ರಚೋದಿಸುವ ವಿಡಿ...
23-03-26 09:44 pm
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm