ಬ್ರೇಕಿಂಗ್ ನ್ಯೂಸ್
26-09-24 12:34 pm Bangalore Correspondent ಕ್ರೈಂ
ಬೆಂಗಳೂರು, ಸೆ.25: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ನೇಪಾಳಿ ಮೂಲದ ಯುವತಿ ಮಹಾಲಕ್ಷ್ಮಿಯನ್ನು ಕೊಲೆಗೈದು 50 ತುಂಡುಗಳನ್ನಾಗಿಸಿದ್ದ ಕೊಲೆಗಾರ ಮುಕ್ತಿರಂಜನ್ ರಾಯ್ ಒಡಿಶಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬೆಂಗಳೂರು ಪೊಲೀಸರು ಖಚಿತಪಡಿಸಿದ್ದಾರೆ.
ವಯ್ಯಾಲಿಕಾವಲ್ ಬಳಿಯ ಬಾಡಿಗೆ ಮನೆಯಲ್ಲಿದ್ದ ಮಹಾಲಕ್ಷ್ಮಿಯನ್ನು ಕೊಲೆಗೈದ ಬಳಿಕ ಆರೋಪಿ ತನ್ನ ಸ್ವಂತ ಊರು ಒಡಿಶಾದ ಭದ್ರಕ್ ಜಿಲ್ಲೆಯ ಗ್ರಾವಿಯಾರ್ಡ್ ಗ್ರಾಮಕ್ಕೆ ತೆರಳಿದ್ದ. ಅದಕ್ಕೂ ಮೊದಲು ಪಶ್ಚಿಮ ಬಂಗಾಳಕ್ಕೆ ತೆರಳಿ ಅಡಗಿಕೊಳ್ಳಲು ಪ್ಲಾನ್ ಮಾಡಿದ್ದ. ಆದರೆ ಸ್ವಂತ ಊರಿಗೆ ತೆರಳಿದ್ದರೂ ಪೊಲೀಸರು ಬೆನ್ನು ಬಿದ್ದಿದ್ದಾರೆಂಬ ಭಯದಲ್ಲಿ ಸ್ಮಶಾನದ ಬಳಿಯ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ನಿನ್ನೆ ಸಂಜೆ ಊರಿಗೆ ತಲುಪಿದ್ದ ಮುಕ್ತಿಗೆ ಪರಾರಿಯಾಗಲು ತಾಯಿಯೇ ಸಹಕರಿಸಿದ್ದರು. ಆದರೆ ಇನ್ನೊಬ್ಬ ಸೋದರನ ಮೂಲಕ ಟ್ರಾಪ್ ಮಾಡಿದ್ದ ಪೊಲೀಸರು ಅಲ್ಲಿಗೆ ಎಂಟ್ರಿ ಕೊಡಲು ಮುಂದಾಗಿದ್ದರು. ಆದರೆ ಅಷ್ಟರಲ್ಲಿ ಆರೋಪಿ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವದ ಪಕ್ಕದಲ್ಲಿ ಸ್ಕೂಟರ್, ಡೈರಿ, ಲ್ಯಾಪ್ಟಾಪ್ ಪತ್ತೆಯಾಗಿದೆ. ಮಹಾಲಕ್ಷ್ಮಿ ಮೊಬೈಲ್ ಕರೆ ಆಧರಿಸಿ ಅಶ್ರಫ್, ಮುಕ್ತಿ ಸೇರಿದಂತೆ ಮೂವರ ಬಗ್ಗೆ ಶೋಧ ನಡೆಸಲಾಗಿತ್ತು.
ಅಶ್ರಫ್ ವಶಕ್ಕೆ ಪಡೆದು ವಿಚಾರಿಸಿದಾಗ, ಸಂಬಂಧ ಇದ್ದುದು ನಿಜ. ಮನೆಯವರ ವಿರೋಧದಿಂದಾಗಿ ಆರು ತಿಂಗಳ ಹಿಂದೆಯೆ ಸಂಬಂಧ ಕಡಿದುಕೊಂಡಿದ್ದೆ. ಕೊಲೆ ಕೃತ್ಯ ನಾನು ಮಾಡಿಲ್ಲ ಎಂದು ತಿಳಿಸಿದ್ದ. ಹೀಗಾಗಿ ಮುಕ್ತಿರಂಜನ್ ಬಗ್ಗೆ ಮಾಹಿತಿ ಕೆದಕಿದಾಗ, ಆತ ಸೆಪ್ಟೆಂಬರ್ 2ರಿಂದಲೇ ಕೆಲಸಕ್ಕೆ ಬರುತ್ತಿಲ್ಲ ಎಂದು ತಿಳಿದುಬಂದಿತ್ತು. ಆತನ ಫೋನ್ ಟ್ರೇಸ್ ಮಾಡಿದಾಗ, ಪಶ್ಚಿಮ ಬಂಗಾಳದಲ್ಲಿ ತೋರಿಸಿತ್ತು. ಮಹಾಲಕ್ಷ್ಮಿ ಜೊತೆಗೆ ಮಾಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಮುಕ್ತಿರಂಜನ್ ಕೂಡ ಆಕೆಯನ್ನು ಪ್ರೀತಿಸುವ ನೆಪದಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಆದರೆ ಈಗ ಕೊಲೆ ಯಾಕೆ ನಡೆಸಿದ್ದಾನೆಂದು ಗೊತ್ತಾಗಿಲ್ಲ. ಈಕೆ ಮೂವರ ಜೊತೆಗೆ ಕನೆಕ್ಷನ್ ಇಟ್ಟುಕೊಂಡ ಕೋಪದಲ್ಲಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಮಹಾಲಕ್ಷ್ಮಿಯನ್ನು ಕೊಲೆಗೈದ ಬಳಿಕ ಆತ ಬೆಂಗಳೂರಿನಿಂದ ಎಸ್ಕೇಪ್ ಆಗಿದ್ದ ಆರೋಪಿ ತನ್ನ ಸಹೋದರಿಗೆ ಫೋನ್ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ನನ್ನನ್ನು ಬಂಧಿಸಬಹುದು. ಹಾಗಾಗಿ ನಾನು ಇಲ್ಲಿಂದ ಹೊರಡುತ್ತಿದ್ದೇನೆ ಎಂದು ಹೇಳಿಯೇ ನಾಪತ್ತೆಯಾಗಿದ್ದ. ಅಲ್ಲದೆ, ತಮ್ಮನ ಜೊತೆಗೂ ಮಹಾಲಕ್ಷ್ಮಿ ಬಗ್ಗೆ ಹೇಳಿಕೊಂಡಿದ್ದ ಎನ್ನುವ ಮಾತು ಕೇಳಿಬಂದಿದೆ. ಪೊಲೀಸರು ಎಲ್ಲ ಕೋನದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.
A 31-year-old man who was the prime suspect in the murder a 29-year-old woman in Bengaluru, whose body was chopped into pieces and stuffed in a fridge, was found dead in Odisha on Wednesday. Muktirajan Pratap Ray, the prime suspect in the murder of Mahalakshmi, was found dead near Bhuinpur village in Odisha’s Bhadrak district in the morning.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm