ಬ್ರೇಕಿಂಗ್ ನ್ಯೂಸ್
22-09-24 02:37 pm HK News Desk ಕ್ರೈಂ
ಕಾರವಾರ, ಸೆ 22: ತಾಲ್ಲೂಕಿನ ಹಣಕೋಣ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು ನಾಯ್ಕ (58) ಎಂಬುವವರನ್ನು ದುಷ್ಕರ್ಮಿಗಳ ಗುಂಪೊಂದು ತಲ್ವಾರ್ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು, ರಫ್ತು ವಹಿವಾಟು ನಡೆಸುತ್ತಿರುವ ಉದ್ಯಮಿ ತನ್ನ ಊರಾದ ಹಣಕೋಣಕ್ಕೆ ವಾರದ ಹಿಂದೆ ಬಂದಿದ್ದರು. ಭಾನುವಾರ ಪುಣೆಗೆ ಹೊರಡಲು ಸಿದ್ದರಾಗಿದ್ದರು. ನಸುಕಿನ ಜಾವ 5.30ರ ಸುಮಾರಿಗೆ ಅವರ ಹತ್ಯೆ ಮಾಡಲಾಗಿದೆ.
ನಾಲ್ಕರಿಂದ ಐದು ಜನರಿದ್ದ ಗುಂಪೊಂದು ಮನೆಗೆ ನುಗ್ಗಿ ಕೃತ್ಯ ನಡೆಸಿದೆ. ವಿನಾಯಕ ಅವರ ಪತ್ನಿ ವೃಶಾಲಿ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇವರಿಬ್ಬರೇ ಮನೆಯಲ್ಲಿದ್ದರು ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.
ಸಾತೇರಿ ಜಾತ್ರೆಗೆ ಬಂದ ಇವರು ಭಾನುವಾರ ಬೆಳಗ್ಗೆ ಮರಳಿ ಹೊರಡಲು ಸಿದ್ದರಾಗಿದ್ದರು. ಈ ವೇಳೆ ಬೆಳಗಿನಜಾವ 5.30ರ ಸುಮಾರಿಗೆ ಐದು ಜನ ಅಪರಿಚಿತರು ಮನಗೆ ನುಗ್ಗಿ ಅಡುಗೆ ಮನೆಯಲ್ಲಿದ್ದ ವಿನಾಯಕನನ್ನು ಮನ ಬಂದಂತೆ ಚಾಕು ಹಾಗೂ ತಲ್ವಾರ್ನಿಂದ ಕಡಿದು ಹತ್ಯೆ ಮಾಡಲಾಗಿದೆ. ಮನೆಯಲ್ಲಿ ಆತನ ಪತ್ನಿ ಕೂಡ ಇದ್ದು ಅವರಿಗೂ ತಲೆಗೆ ಹೊಡೆಯಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆಯಂಗಳದಲ್ಲಿ ಚಾಕು ಹಾಗೂ ರಾಡ್ ಬಿದ್ದಿದ್ದು, ತನಿಖೆಯ ಬಳಿಕವೇ ನಿಜಾಂಶ ಹೊರಬರಬೇಕಿದೆ. ಸದ್ಯ ವಿನಾಯಕ ಅವರ ಪತ್ನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ 10 ದಿನಗಳಿಂದ ಹಣಕೋಣ ಗ್ರಾಮದಲ್ಲಿ ಉದ್ಯಮಿ ಕುಟುಂಬ ಉಳಿದುಕೊಂಡಿತ್ತು. ಗ್ರಾಮದ ಸಾತೇರಿದೇವಿ ಜಾತ್ರೆಗೆಂದು ಪತ್ನಿಯೊಂದಿಗೆ ಉದ್ಯಮಿ ವಿನಾಯಕ ಊರಿಗೆ ಬಂದಿದ್ದರು. ಜಾತ್ರೆ ಮುಗಿಸಿ ಭಾನುವಾರ ಬೆಳಗ್ಗೆ ಪುಣೆಗೆ ವಾಪಸ್ಸಾಗಲು ಸಿದ್ಧವಾಗಿದ್ದರು. ಉದ್ಯಮಿ ವಿನಾಯಕ ನಾಯ್ಕ ಕಾರಿನಲ್ಲಿ ಬ್ಯಾಗ್ ಇರಿಸಲು ಬಾಗಿಲು ತೆರೆದಿದ್ದರು. ಈ ವೇಳೆ ಏಕಾಏಕಿ ರಾಡ್ನಿಂದ ಹಲ್ಲೆ ನಡೆಸಿ ಐವರು ಆಗಂತುಕರು ಒಳನುಗ್ಗಿದ್ದರು.
ರಾಡ್ ಸೇರಿ ಮಾರಕಾಸ್ತ್ರಗಳಿಂದ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಉದ್ಯಮಿ ವಿನಾಯಕ ಭುಜಕ್ಕೆ ತೀವ್ರ ಹಲ್ಲೆ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ವೇಳೆ ತಪ್ಪಿಸಲು ಅಡ್ಡಬಂದ ಪತ್ನಿ ವೃಷಾಲಿ ಮೇಲೂ ಹಲ್ಲೆ ಮಾಡಿದ್ದಾರೆ. ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಿನ ಜಾವ 5:30 ರಿಂದ 6 ಗಂಟೆ ವೇಳೆಗೆ ಘಟನೆ ನಡೆದಿದೆ. ಪೂಣಾದಲ್ಲಿ ಆಮದು ರಫ್ತು ಉದ್ಯಮ ನಡೆಸುತ್ತಿದ್ದರು. ತನಿಖೆ ಬಳಿಕ ಹಲ್ಲೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಹತ್ಯೆ, ಹತ್ಯೆ ಯತ್ನ ಪ್ರಕರಣ ದಾಖಲಾಗಿದೆ ಎಂದು ಉತ್ತರಕನ್ನಡ ಎಸ್ಪಿ ಎಂ.ನಾರಾಯಣ ತಿಳಿಸಿದರು.
Karwar Pune based businessman brutal murder, wife too attacked. The deceased has been identified as Raju Naik. He had come to Karwar to attend som religious program in the temple.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm