ಬ್ರೇಕಿಂಗ್ ನ್ಯೂಸ್
13-09-24 09:08 pm Mangalore Correspondent ಕ್ರೈಂ
ಬಂಟ್ವಾಳ, ಸೆ.13: ನಿವೃತ್ತ ಸೈನಿಕರೊಬ್ಬರು ಕಾರ್ಯ ನಿಮಿತ್ತ ಬ್ಯಾಂಕಿನಿಂದ ಹಣ ಡ್ರಾ ಮಾಡಿ ನಗದು ಇದ್ದ ಬ್ಯಾಗನ್ನು ಇರಿಸಿ ಪಾಸ್ ಬುಕ್ ಎಂಟ್ರಿ ಮಾಡುತ್ತಿದ್ದಾಗಲೇ 1.30 ಲಕ್ಷ ರೂ. ಇದ್ದ ಬ್ಯಾಗನ್ನು ಕಳ್ಳರು ಎಗರಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಈ ಬಗ್ಗೆ ಹಣ ಕಳಕೊಂಡ ಅಡ್ಯಾರ್ ನಿವಾಸಿ ಅಂಬ್ರೋಸ್ ಡಿ’ಸೋಜ( 72) ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ. ಸೆ.4ರಂದು ಬೆಳಗ್ಗೆ 30,000 ನಗದು ಹಾಗೂ ರೂ. 20,000 ನಗದು ಹಣವಿದ್ದ ತನ್ನ ಪರ್ಸನ್ನು ಹ್ಯಾಂಡ್ ಬ್ಯಾಗ್ ನಲ್ಲಿರಿಸಿ ಮನೆಯಿಂದ ಹೊರಟಿದ್ದು, ಬಿ.ಸಿ ರೋಡ್ ನಲ್ಲಿ ಸದ್ರಿಯವರ ಖಾತೆಯಿರುವ ಬ್ಯಾಂಕ್ ಗೆ ತೆರಳಿ, ಬ್ಯಾಂಕ್ ನಿಂದ ರೂ. 80,000/- ಹಣವನ್ನು ಡ್ರಾ ಮಾಡಿದ್ದು, ಅದೇ ಹ್ಯಾಂಡ್ ಬ್ಯಾಗ್ ನಲ್ಲಿ ಇರಿಸಿದ್ದರು. ಬಳಿಕ ಸದ್ರಿ ಹ್ಯಾಂಡ್ ಬ್ಯಾಗ್ ಅನ್ನು ಬ್ಯಾಂಕಿನ ಟೇಬಲ್ ಮೇಲೆ ಇರಿಸಿ, ಪಾಸ್ ಬುಕ್ ಎಂಟ್ರಿ ಮಾಡಿಸಿ ಮರಳಿ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳಲು ಬಂದಾಗ, ಅವರು ಇರಿಸಿದ್ದ ಸ್ಥಳದಲ್ಲಿ ಹ್ಯಾಂಡ್ ಬ್ಯಾಗ್ ಕಾಣದಾಗಿತ್ತು.
ಬ್ಯಾಂಕ್ ಕಚೇರಿಯ ಒಳಗಡೆ ಎಲ್ಲ ಕಡೆ ಹುಡುಕಾಡಿ ವಿಚಾರಿಸಿದ್ದು ಬ್ಯಾಗ್ ಸಿಕ್ಕಿರುವುದಿಲ್ಲ. ಅವರ ಬಾಬ್ತು ಹಣ ಇದ್ದ ಹ್ಯಾಂಡ್ ಬ್ಯಾಗ್ ಅನ್ನು ಯಾರಾದರೂ ಕೈ ತಪ್ಪಿನಿಂದ ಹಿಡಿದುಕೊಂಡು ಹೋಗಿರಬಹುದು, ಅದನ್ನು ಮರಳಿ ಕೊಡಬಹುದೆಂದು ಭಾವಿಸಿ ಮನೆಗೆ ಹಿಂತಿರುಗಿದ್ದರು. ಈ ನಡುವೆ ಹಣ, ಪಾಸ್ ಬುಕ್ ಹಾಗೂ ಇತರೆ ದಾಖಲೆಗಳಿದ್ದ ಹ್ಯಾಂಡ್ ಬ್ಯಾಗ್ ಬಿ.ಸಿ ರೋಡು ಕೈಕುಂಜೆಗೆ ಹೋಗುವ ರಸ್ತೆ ಬದಿಯಲ್ಲಿ ಪತ್ತೆಯಾಗಿದೆ. ಆದರೆ ಅದರಲ್ಲಿದ್ದ ನಗದು ಹಣ ಸಿಕ್ಕಿರುವುದಿಲ್ಲ. ಪಿರ್ಯಾದಿದಾರರ ಬಾಬ್ತು ಒಟ್ಟು ರೂ. 1,30,000/- ನಗದು ಹಣವಿದ್ದ ಹ್ಯಾಂಡ್ ಬ್ಯಾಗ್ ಅನ್ನು ಯಾರೋ ಕಳ್ಳರು ಕಳವು ಮಾಡಿದ್ದು ಅದರಲ್ಲಿದ್ದ ಹಣವನ್ನು ಕಳವು ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Thieves flee with 1lakh 30 thousand bag from bank from customer at Bantwal in Mangalore.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
27-06-26 08:01 pm
HK News Staffer
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am
Mangalore, Police, criminial escapes: ಪಾಂಡೇಶ್...
27-06-26 10:54 am