ಬ್ರೇಕಿಂಗ್ ನ್ಯೂಸ್
30-08-24 09:35 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 30: ನಗರದ ಲಾಲ್ ಬಾಗ್ ಬಳಿಯ ಬಾರ್ ಒಂದರಲ್ಲಿ ಇಬ್ಬರು ಸ್ನೇಹಿತರ ಜೊತೆಗೆ ಬಂದಿದ್ದ ಯುವತಿ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಕೈಮಾಡಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಕಾಳಿ ಪಡ್ಪು ನಿವಾಸಿಯಾದ 26 ವರ್ಷದ ಯುವತಿ ತನ್ನ ಸ್ನೇಹಿತರ ಜೊತೆಗೆ ಲಾಲ್ ಬಾಗ್ ಫುಡ್ ಲ್ಯಾಂಡ್ ಬಾರ್ ಗೆ ಬಂದಿದ್ದಳು. ರಾತ್ರಿ 11.30ರ ಸುಮಾರಿಗೆ ಈಕೆ ಅಲ್ಲಿನ ಲೇಡಿಸ್ ವಾಷ್ ರೂಮ್ ಹೋಗಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿರುವುದನ್ನು ನೋಡಿ, ಲೇಡಿಸ್ ಟಾಯ್ಲೆಟಲ್ಲಿ ಗಂಡಸರು ಏನು ಮಾಡ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾಳೆ. ಆನಂತರ, ಬಾರ್ ಕ್ಯಾಶಿಯರ್ ಬಳಿಯೂ ದೂರು ಹೇಳಿಕೊಂಡಿದ್ದಾಳೆ.
ಆಕೆಯ ಜೊತೆಗೆ ರಮಿತ್ ಪೂಜಾರಿ ಮತ್ತು ಹಮೀದ್ ಎಂಬ ಇಬ್ಬರು ಯುವಕರು ಇದ್ದರು. ಆನಂತರ, ಬಾರ್ ಹೊರಗಡೆ ಬಂದು ತಮ್ಮ ಕಾರಿನಲ್ಲಿ ಕುಳಿತು ಹಿಂದೆ ತೆಗೆಯುತ್ತಿದ್ದಾಗ, ಹಿಂಬದಿ ಬುಲೆಟ್ ಬೈಕಿನಲ್ಲಿ ಬಂದಿದ್ದ ವ್ಯಕ್ತಿಯ ಜೊತೆಗೂ ಕಿರಿಕ್ ಆಗಿದೆ. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಕೈಮಾಡಿದ್ದಾನೆಂದು ಆಕೆ ಬರ್ಕೆ ಠಾಣೆಗೆ ದೂರು ನೀಡಿದ್ದಾಳೆ. ಆಗಸ್ಟ್ 25ರಂದು ತಡರಾತ್ರಿ ಘಟನೆ ನಡೆದಿದ್ದು, ಯುವತಿ ದೂರಿನಂತೆ ಪೊಲೀಸರು ಮಾನಭಂಗ, ಜೀವ ಬೆದರಿಕೆ ಸೇರಿ ವಿವಿಧ ಸೆಕ್ಷನ್ ಆಧರಿಸಿ ಪ್ರಕರಣ ದಾಖಲಿಸಿದ್ದಾರೆ.
ಎರಡೂ ಕಡೆಯವರು ಕುಡಿದ ಮತ್ತಿನಲ್ಲಿದ್ದು, ಘಟನಾ ಸ್ಥಳದ ಸಿಸಿಟಿವಿ ದೃಶ್ಯ ನೋಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ತನ್ನ ಮೇಲೆ ಹಲ್ಲೆಯಾಗಿದೆ ಎಂದು ಯುವತಿ ಆರೋಪಿಸುತ್ತಿದ್ದು, ಘಟನೆ ಸಂದರ್ಭ ಕಾರಿನ ಹಿಂಬದಿ ನಿಂತಿದ್ದ ಯುವಕನೊಬ್ಬನ ಫೋಟೋ ತೆಗೆದು ಅದನ್ನು ಮಾಧ್ಯಮಕ್ಕೆ ನೀಡಲಾಗಿದೆ. ಯುವತಿಯೂ ಕುಡಿದ ಮತ್ತಿನಲ್ಲಿ ಕಿರಿಕ್ ಮಾಡಿದ್ದಾಳೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Young girl alleges of harassment by unknown person, case booked at barke police station in Mangalore. The incident allegedly occurred on August 25 when the girl visited the hotel with a close friend.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm