ಬ್ರೇಕಿಂಗ್ ನ್ಯೂಸ್
21-11-20 12:54 pm Mangalore Correspondent ಕ್ರೈಂ
ಮಂಗಳೂರು, ನವೆಂಬರ್ 21: ‘ಬಂಟಿ ಔರ್ ಬಬ್ಲೀ’ 2005ರಲ್ಲಿ ಬಾಲಿವುಡ್ಡಿನಲ್ಲಿ ಸದ್ದು ಮಾಡಿದ್ದ ಹಿಂದಿ ಸಿನಿಮಾ. ಗಂಡ- ಹೆಂಡತಿ ಸೇರಿ ಸಮಾಜದಲ್ಲಿ ಪ್ರತಿಷ್ಠಿತ ಎನ್ನಿಸಿಕೊಂಡವರನ್ನೇ ಲೂಟಿ ಹೊಡೆಯುವ ಕಥೆಯುಳ್ಳ ಚಿತ್ರವದು. ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಬಂಟಿ – ಬಬ್ಲಿಯಾಗಿ ನಟಿಸಿದ್ದ ಚಿತ್ರ ಬಾಲಿವುಡ್ಡಿನಲ್ಲಿ ಬಾಕ್ಸಾಫೀಸ್ ಚಿಂದಿ ಉಡಾಯಿಸಿತ್ತು. ಭಾರತ ಮಾತ್ರವಲ್ಲದೆ ಹೊರ ದೇಶಗಳಲ್ಲಿಯೂ ಭಾರೀ ಜನಮನ್ನಣೆ ಗಳಿಸಿತ್ತು. ಕೊನೆಗೆ, ಡಿಸಿಪಿ ದಶರಥ್ ಆಗಿ ಎಂಟ್ರಿ ಕೊಡುವ ಅಮಿತಾಭ್ ಬಚ್ಚನ್, ಲೂಟಿಕೋರ ದಂಪತಿಯನ್ನು ಬಂಧಿಸುತ್ತಾರೆ. ಸಂಭಾವಿತರಂತೆ ಪೋಸು ಕೊಡುವ ದಂಪತಿಯ ನಿಜಬಣ್ಣವನ್ನು ಹೊರಗೆಳೆಯುತ್ತಾರೆ.
ಚಿತ್ರದಲ್ಲಿ ಲೋಕಲ್ ಗೈಡ್ ಆಗಿ, ದೇವಸ್ಥಾನದ ಅರ್ಚಕರಾಗಿ, ಹೆಲ್ತ್ ಇನ್ಸ್ ಪೆಕ್ಟರ್ ಆಗಿ, ಬಿಸಿನೆಸ್ ಪಾರ್ಟ್ನರ್ ಆಗಿ ನಾನಾ ವೇಷಗಳಲ್ಲಿ ಸಮಾಜದ ಗಣ್ಯರ ಜೊತೆ ನಂಟು ಬೆಳೆಸ್ಕೊಂಡು ವಂಚಿಸುವ ಗಂಡ – ಹೆಂಡತಿಯರು ಐಷಾರಾಮಿಯಾಗಿ ಜೀವಿಸಬೇಕೆಂದೇ ಜಾಲ ಹೆಣೆಯುತ್ತಾ ಹೋಗುತ್ತಾರೆ. 15 ವರ್ಷಗಳ ಹಿಂದೆ ಜನರನ್ನು ರಂಜಿಸಿದ್ದ ಬಂಟಿ ಔರ್ ಬಬ್ಲಿ ಚಿತ್ರದ ಕಥೆಯನ್ನೇ ಹೋಲುವ ನಿಜರೂಪ ಈಗ ಬೆಳಕಿಗೆ ಬಂದಿರುವ ಮಲೈಕಾ ಸೊಸೈಟಿ ಹಗರಣದಲ್ಲಿದೆ. ವಂಚನೆಗೊಳಗಾಗಿ ಹಣ ಕಳಕೊಂಡವರು ಈಗ ತಲೆಮರೆಸಿಕೊಂಡಿರೋ ವಂಚಕ ದಂಪತಿಯನ್ನು ಬಂಟಿ – ಬಬ್ಲಿ ಅಂತಲೇ ಬಿಂಬಿಸಿ ಜಾಲತಾಣದಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮಲೈಕಾ ಕೋಆಪರೇಟಿವ್ ಸೊಸೈಟಿ ಹಗರಣದಲ್ಲಿಯೂ ಗಿಲ್ಬರ್ಟ್ ಬ್ಯಾಪ್ಟಿಸ್ಟ್ ಮತ್ತು ಆತನ ಪತ್ನಿ ಮರ್ಸಿಲಿನ್ ಮುಖ್ಯ ರೂವಾರಿಗಳು. ಚರ್ಚ್ ಪಾದ್ರಿಗಳು, ಸಮಾಜದ ಅತಿ ಗಣ್ಯರ ಜೊತೆ ಹತ್ತಿರದ ನಂಟು ಹೊಂದಿದ್ದ ಈ ದಂಪತಿಯರು ಕ್ರೈಸ್ತ ಸಮಾಜಕ್ಕೇ ಟೋಪಿ ಹಾಕಿದ್ದಾರೆ. ಕ್ರಿಶ್ಚಿಯನ್ನರು ಹೆಚ್ಚಿರುವ ಮಂಗಳೂರು, ಉಡುಪಿ, ಗೋವಾ, ಮುಂಬೈನಲ್ಲಿ ಈ ದಂಪತಿಯ ಗಣ್ಯರ ಜೊತೆಗಿನ ನಂಟು, ಐಷಾರಾಮಿ ಜೀವನ, ಸಂಭಾವಿತರ ರೀತಿಯ ಪೋಸನ್ನು ನಂಬಿಯೇ ಅಮಾಯಕರು ಹಣ ಹೂಡಿದ್ದರು. ಬಂಟ್ವಾಳ, ಬೆಳ್ತಂಗಡಿ ಭಾಗದಲ್ಲಿ ಮಲೈಕಾದಲ್ಲಿ ಹಣ ಹೂಡುವಂತೆ ಚರ್ಚ್ಗಳಲ್ಲೇ ಹೇಳುತ್ತಿದ್ದರಂತೆ. ಗಿಲ್ಬರ್ಟ್ ಜೊತೆಗೆ ಮರ್ಸಿಲಿನ್ ಇಡೀ ದೋಖಾದ ಕಿಂಗ್ ಪಿನ್ ಆಗಿದ್ದಳು ಎನ್ನುತ್ತಾರೆ, ಅಲ್ಲಿನ ಮಂದಿ. ಅದನ್ನು ನಂಬಿ ಕಷ್ಟಪಟ್ಟು ಗಳಿಸಿದ ಹಣವನ್ನು ಮಲೈಕಾಗೆ ಹಾಕಿದ್ದಾಗಿ ಹಣ ಕಳಕೊಂಡಿರುವ ಮಂದಿ ಗೋಳಿಡುತ್ತಾರೆ.
ಸಾಮಾನ್ಯವಾಗಿ ಕ್ರಿಶ್ಚಿಯನ್ನರು ಹಣ ಜೋಪಾನ ಮಾಡುವುದರಲ್ಲಿ ನಿಸ್ಸೀಮರು. ಬಡ್ಡಿ ಆಸೆ ಮತ್ತು ಕೊನೆಗಾಲಕ್ಕೆ ಇರಲಿ ಎಂದು ಹಣವನ್ನು ನಿವೃತ್ತಿ ಬಳಿಕವೂ ಬ್ಯಾಂಕಿನಲ್ಲಿ ಹಾಕಿಡುತ್ತಾರೆ. ನಿವೃತ್ತಿ ಸಂದರ್ಭದಲ್ಲಿ ಪಿಎಫ್, ಸರ್ವಿಸ್ ಅಂತ ಕೈಗೆ ಬಂದ ಲಕ್ಷಾಂತರ ಹಣವನ್ನು ಮಲೈಕಾದಲ್ಲಿ ಹಾಕಿದ್ದರು. ಹಿರಿಯ ನಾಗರಿಕರಿಗೆ ಯಾವುದೇ ಬ್ಯಾಂಕ್ ಕೊಡದ ಬಡ್ಡಿಯನ್ನು ಕೊಡುವುದಾಗಿ ಗಿಲ್ಬರ್ಟ್ ದಂಪತಿ ನಂಬಿಸಿದ್ದರು. 12 ಪರ್ಸೆಂಟ್ ಬಡ್ಡಿ ಆಸೆಯಲ್ಲಿ ಕಷ್ಟದಿಂದ ಗಳಿಸಿದ ದುಡ್ಡನ್ನೂ ಮಲೈಕಾದಲ್ಲಿ ಕೂಡಿಹಾಕಿದ್ದರು. ಆದರೆ, ಹೀಗೆ ಠೇವಣಿ ಇಟ್ಟು ಮೋಸ ಹೋದವರಲ್ಲಿ 99 ಶೇಕಡಾ ಕ್ರೈಸ್ತರೇ ಎನ್ನುತ್ತಾರೆ, ಹಣ ಕಳಕೊಂಡವರು.
ಒಂದಷ್ಟು ಮಂದಿ ಹಿಂದುಗಳು ಕೂಡ ಹಣ ಕಳಕೊಂಡವರಿದ್ದಾರೆ. ಕೋಟೆಕಾರಿನ ನಿವೃತ್ತ ಶಿಕ್ಷಕ ಪ್ರಕಾಶ್ ನಾಯಕ್, ಏಳು ಲಕ್ಷ ರೂ. ಡಿಪಾಸಿಟ್ ಮಾಡಿದ್ದರಂತೆ. ಇಬ್ಬರೂ ಶಿಕ್ಷಕ ದಂಪತಿಯಾಗಿದ್ದರಿಂದ ನಿವೃತ್ತಿ ಸಂದರ್ಭದಲ್ಲಿ ಬಂದ ಹಣವನ್ನು ಹೆಚ್ಚು ಬಡ್ಡಿ ಸಿಗುವುದೆಂದು ಡಿಪಾಸಿಟ್ ಮಾಡಿದ್ದರು. ಪರಿಸರದ ಕೆಲವರು 12 ಪರ್ಸೆಂಟ್ ಬಡ್ಡಿ ಸಿಗುವುದೆಂದು ಒತ್ತಾಯ ಮಾಡಿದ್ದಕ್ಕೆ ಹಣ ಹಾಕಿದ್ದೆ ಎನ್ನುವ ಆ ವೃದ್ಧ ಶಿಕ್ಷಕರು, ಅದೇ ಹಣವನ್ನು ನಂಬಿ ಜೀವನ ನಡೆಸುತ್ತಿದ್ದಾರಂತೆ. ಅದೃಷ್ಟಕ್ಕೆ ಐದು ಲಕ್ಷ ರೂಪಾಯಿ ಕಳೆದ ವರ್ಷ ತೆಗೆದಿದ್ದೆ. ಇನ್ನು ಬಡ್ಡಿ ಸೇರಿ ಮೂರುವರೆ ಲಕ್ಷ ಬರಬೇಕು ಎನ್ನುತ್ತಾರೆ.
ಮತ್ತೊಬ್ಬರು, ಎನ್ಎಂಪಿಟಿಯಲ್ಲಿ ಉದ್ಯೋಗಿಯಾಗಿ ನಿವೃತ್ತಿ ಅಂಚಿನಲ್ಲಿರುವ ವ್ಯಕ್ತಿಗೆ 64 ಲಕ್ಷ ರೂ. ಹಣ ಆಗಬೇಕಂತೆ. ಠಾಣೆಗೆ ತೆರಳಿ ದೂರು ದಾಖಲಿಸಿರುವ ಅವರು, ಈ ವಿಚಾರವನ್ನು ಹೇಳಿಕೊಳ್ಳುವುದಕ್ಕೇ ಭಯ ಪಡುತ್ತಾರೆ. ಮತ್ತೊಬ್ಬ ಕ್ರಿಶ್ಚಿಯನ್ ವೃದ್ಧ ಮಹಿಳೆ ಪಾಂಡೇಶ್ವರ ಠಾಣೆಗೆ ಬಂದಿದ್ದರು. ಅವರು ಮನೆಯವರಿಗೆ ತಿಳಿಯದಂತೆ ಏಳು ಲಕ್ಷ ಹಣ ಇಟ್ಟಿದ್ದರಂತೆ. ಮರಿ ಮಗನ ಜೊತೆ ಕಷ್ಟದಲ್ಲಿ ಠಾಣೆ ಮೆಟ್ಟಿಲೇರುತ್ತಿದ್ದ ಮುದುಕಿಗೆ ಮನೆಯವರದ್ದೇ ಭಯ. ಹಣ ಇಟ್ಟಿದ್ದು ಮನೆಯವರಿಗೆ ಗೊತ್ತಾದರೆ ಬೈದು ಹೊರಗೆ ಹಾಕುತ್ತಾರೆ, ಯಾರಿಗೂ ಹೇಳ್ಬೇಡಿ ಅನ್ನುತ್ತಾರೆ.
ಕರ್ನಾಟಕದಲ್ಲಿ ರಿಜಿಸ್ಟರ್ ಆಗಿಲ್ವಂತೆ..!
ಇನ್ನೊಬ್ಬರು, ಸೊಸೈಟಿಯವರ ವಿರುದ್ಧ ದೂರು ನೀಡಲು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಸಂಘಗಳ ನಿಬಂಧಕರ ಬಳಿ ತೆರಳಿದ್ದರಂತೆ. ಮಲೈಕಾ ಸೊಸೈಟಿ ನಮ್ಮಲ್ಲಿ ರಿಜಿಸ್ಟರ್ ಆಗಿಲ್ಲ. ಅದು ಮಹಾರಾಷ್ಟ್ರದಲ್ಲಿ ರಿಜಿಸ್ಟರ್ ಆಗಿದ್ದು. ಇಲ್ಲಿ ದೂರು ಕೊಡಲು ಬರುವುದಿಲ್ಲ ಎಂದು ಅಲ್ಲಿನ ಅಧಿಕಾರಿ ನಿರಾಕರಿಸಿದರು ಎನ್ನುತ್ತಾರೆ. ಅವರಿಗೆ ಮೂರು ಲಕ್ಷ ಆಗಬೇಕಂತೆ. ಆರು ತಿಂಗಳಿಂದ ಬರುತ್ತಿದ್ದೇನೆ. ಇಲ್ಲಿ ಮ್ಯಾನೇಜರ್ ಆಗಿದ್ದ ಮರ್ಲಿನ್ ಸುಳ್ಳು ಹೇಳಿ ವಂಚಿಸುತ್ತಿದ್ದರು. ನಾಲ್ಕು ತಿಂಗಳಿಂದ ಅಲ್ಲಿನ ಸಿಬಂದಿಯೇ ನಾಪತ್ತೆಯಾಗಿದ್ದಾರೆ ಎಂದು ಅಲವತ್ತುಕೊಂಡರು.
‘ನಮ್ಗೆ ನಿಮ್ದೇ ಕೇಸ್ ಇರೋದಾ..?’
ಮಂಗಳೂರಿನಲ್ಲಿ ಪ್ರಕರಣ ದಾಖಲಾಗಿ ತಿಂಗಳು ಕಳೆಯಿತು. 150ಕ್ಕೂ ಹೆಚ್ಚು ಮಂದಿ ದೂರು ಕೊಟ್ಟಿದ್ದಾರೆ. ಪಾಂಡೇಶ್ವರದ ಎನ್ ಸಿಇಪಿಎಸ್ ಠಾಣೆಯವರು ಫೈಲ್ ಮುಚ್ಚಿಟ್ಟು ಕೂತಿದ್ದಾರೆ. ದೂರುದಾರರು ಠಾಣೆಗೆ ತೆರಳಿ ಕೇಳಿದರೆ, ನಮ್ಗೆ ನಿಮ್ದೊಬ್ಬರದ್ದೇ ಕೇಸ್ ಇರೋದಾ.. ಡ್ರಗ್, ಗಾಂಜಾ ಅದು ಇದು ಎಲ್ಲ ಇದೆ. ಕೋರ್ಟಿಗೂ ಹೋಗಬೇಕು, ನಾವು ಮೂರು ಜನ ಸ್ಟಾಫ್ ಇರುವುದು ಎಂದು ರೆಡಿ ಉತ್ತರ ಕೊಡುತ್ತಾರಂತೆ.. ಪ್ರಕರಣ ಈಗ ಮಂಗಳೂರಿನ ಡಿಸಿಪಿ ವಿನಯ ಗಾಂವ್ಕರ್ ಗಮನಕ್ಕೆ ಬಂದಿದೆ. ಬಂಟಿ ಬಬ್ಲಿ ಚಿತ್ರದಲ್ಲಿ ಡಿಸಿಪಿ ದಶರಥ್ ಆಗಿ ಅಮಿತಾಭ್ ಮಾಡಿದ್ದ ಪಾತ್ರವನ್ನು ವಿನಯ್ ಗಾಂವ್ಕರ್ ಮಾಡುತ್ತಾರೆಯೇ ಕಾದು ನೋಡಬೇಕು. ಎನ್ ಸಿಇಪಿಎಸ್ ಠಾಣೆಯಲ್ಲಿ ಈಗ, ಹಿಂದೆ ಸಿಸಿಬಿಯಲ್ಲಿದ್ದ ಫುಲ್ ಸ್ಕ್ವಾಡ್ ಇದ್ದಾರೆ. ಹಿರಿಯಧಿಕಾರಿಗಳು, ಆರೋಪಿಗಳನ್ನು ಹಿಡಿಯಬೇಕೆಂದು ಮನಸ್ಸು ಮಾಡಿದರೆ ಹೆಚ್ಚು ದಿನ ಬೇಕಿಲ್ಲ ಮಾರ್ರೇ...
Video :
Malaika appliances which also runs credit state society is accused of fraud case of about 350 crores in Mumbai, Mangalore, Udupi and Goa. The Mangalorean based couple Gilbert Baptist and Marceline Baptist are said to be absconding.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 10:47 pm
Mangalore Correspondent
Mangalore Suhas Shetty Murder, Shobha Karandl...
02-05-25 09:26 pm
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm