ಬ್ರೇಕಿಂಗ್ ನ್ಯೂಸ್
18-11-20 07:36 pm Mangalore Correspondent ಕ್ರೈಂ
ಸುರತ್ಕಲ್, ನವೆಂಬರ್ 18: ವಿವಾಹಿತ ಮಹಿಳೆಯನ್ನು ಕೊಲೆಗೈದು ಹೂವಿನ ವ್ಯಾಪಾರಿಯ ಆತ್ಮಹತ್ಯೆ ಪ್ರಕರಣ ಸುರತ್ಕಲ್ ಭಾಗದಲ್ಲಿ ಜನರ ಕುತೂಹಲಕ್ಕೆ ಕಾರಣವಾಗಿದೆ.
ಎಂಆರ್ ಪಿಎಲ್ ನಲ್ಲಿ ಕೆಲಸಕ್ಕಿದ್ದು, ಕಾಟಿಪಳ್ಳದ ಬಾಳ ನಿವಾಸಿಯಾಗಿರುವ ಅಶೋಕ್ ಭಂಡಾರಿಯವರ ಪತ್ನಿ ರೇಖಾ ಭಂಡಾರಿ(39) ಕೊಲೆಯಾದ ಮಹಿಳೆ. ಸುರತ್ಕಲ್ ಪೇಟೆಯಲ್ಲಿ ಹೂವಿನ ವ್ಯಾಪಾರಿಯಾಗಿರುವ ವಸಂತ (42) ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ರೇಖಾ ಭಂಡಾರಿ ನಿನ್ನೆ ಮಧ್ಯಾಹ್ನ ಮೂರು ಗಂಟೆಗೆ ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದು, ತನ್ನ ಪಿಯುಸಿ ಓದುತ್ತಿದ್ದ ಮಗಳನ್ನು ಮನೆಗೆ ಬಿಟ್ಟು ಮರಳಿ ಪೇಟೆಗೆಂದು ಹೋಗಿದ್ದರು. ಆದರೆ, ಎಲ್ಲಿ ಹೋಗಿದ್ದಾರೆಂದು ಮನೆಯವರಿಗೆ ತಿಳಿದಿರಲಿಲ್ಲ. ನಿನ್ನೆ ರಾತ್ರಿ ಮನೆಗೆ ಬರದಿದ್ದರಿಂದ ಗಾಬರಿಯಾಗಿ ಇಂದು ಬೆಳಗ್ಗೆ ಪತಿ ಅಶೋಕ್ ಭಂಡಾರಿ ಸುರತ್ಕಲ್ ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಇದೇ ವೇಳೆ, ಕುಳಾಯಿ ಬಳಿಯ ಮುಕ್ಕದ ಬಾಡಿಗೆ ಮನೆಯೊಂದರಲ್ಲಿ ಇಬ್ಬರ ಶವ ಪತ್ತೆಯಾದ ಬಗ್ಗೆ ಮಾಹಿತಿ ಬಂದಿತ್ತು. ಮನೆ ಮಾಲೀಕ ಭಾಸ್ಕರ ಸಾಲ್ಯಾನ್ ಮಾಹಿತಿ ನೀಡಿದ್ದು ಅಲ್ಲಿಗೆ ಅಶೋಕ್ ಭಂಡಾರಿಯವರ ಜೊತೆ ತೆರಳಿ ನೋಡಿದಾಗ ಮನೆಯ ಒಳಗಿನಿಂದ ಚಿಲಕ ಹಾಕಲಾಗಿತ್ತು.
ಮುಂದಿನ ಬಾಗಿಲನ್ನು ಒಳಗಿಂದ ಹಾಕಿದ್ದು, ಹಿಂಬಾಗಿಲನ್ನೂ ಒಳಗಿಂದ ಲಾಕ್ ಮಾಡಲಾಗಿತ್ತು. ಬಾಗಿಲು ಒಡೆದು ನೋಡಿದಾಗ, ಚೂರಿಯಿಂದ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹದಿನೈದಕ್ಕೂ ಹೆಚ್ಚು ಬಾರಿ ಇರಿದು ಕೊಲೆಗೈದ ಸ್ಥಿತಿಯಲ್ಲಿ ರೇಖಾ ಭಂಡಾರಿಯ ಶವ ಇತ್ತು. ರೇಖಾಳ ಶವವನ್ನು ಹಿಂಬಾಗಿಲ ವರೆಗೂ ಎಳೆದೊಯ್ದ ರೀತಿ ರಕ್ತ ನೆಲದಲ್ಲಿ ಮೆತ್ತಿಕೊಂಡಿತ್ತು. ಬಳಿಕ ಒಳಗಿನ ಕೋಣೆಯಲ್ಲಿ ವಸಂತ ಪಕ್ಕಾಸಿಗೆ ಸೀರೆಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಇವರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗುತ್ತಿದೆ. ಆದರೆ, ಅಶೋಕ್ ಭಂಡಾರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಸಂತ ಹತ್ತು ವರ್ಷಗಳಿಂದ ಪರಿಚಯ ಇದೆ. ತಿರುಪತಿ, ಮಂತ್ರಾಲಯ ಟೂರ್ ಹೋಗುತ್ತಿದ್ದಾಗ ವಸಂತನ ಕಾರಿನಲ್ಲೇ ಹೋಗುತ್ತಿದ್ದೆವು. ಹಾಗಾಗಿ ಪರಿಚಯ ಅಷ್ಟೇ.. ಆತನ ಜೊತೆ ಬೇರೆ ಯಾವುದೇ ಸಂಬಂಧ ಇಲ್ಲ ಎಂದು ಅಶೋಕ್ ಭಂಡಾರಿ ಪೊಲೀಸರಲ್ಲಿ ತಿಳಿಸಿದ್ದಾರೆ.
ವಸಂತ ಸುರತ್ಕಲ್ ನಲ್ಲಿ ಹೂವಿನ ವ್ಯಾಪಾರಿಯಾಗಿದ್ದು, ಜೊತೆಗೆ ಕಾರಿನಲ್ಲಿ ಡ್ರೈವರ್ ಆಗಿ ಹೋಗುತ್ತಿದ್ದ. ಬೇರೆಯವರ ಕಾರು ಪಡೆದು ಟೂರ್ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ಪ್ರಕಾರ, ವಸಂತ ಮತ್ತು ರೇಖಾ ಕೆಲವೊಮ್ಮೆ ಆ ಮನೆಗೆ ಬರುತ್ತಿದ್ದರಂತೆ. ವಸಂತನಿಗೆ ಮದುವೆಯಾಗಿಲ್ಲ. ಇಬ್ಬರು ಸೋದರಿಯರಿದ್ದು, ತಾಯಿ ಇದ್ದಾರೆ. ಕುಳಾಯಿ ಬಳಿ ಸ್ವಂತ ಮನೆ ಇದ್ದರೂ, ಮುಕ್ಕದಲ್ಲಿ ಬಾಡಿಗೆ ಮನೆ ಹೊಂದಿದ್ದ. ಬಾಡಿಗೆ ಮನೆಗೆ ವಸಂತ, ಯಾಕಾಗಿ ಇಟ್ಟುಕೊಂಡಿದ್ದ ಎನ್ನೋದು ಗೊತ್ತಿಲ್ಲ. ಬೇರೆ ಹುಡುಗಿಯರನ್ನೂ ಅಲ್ಲಿಗೆ ಕರೆದೊಯ್ಯುತ್ತಿದ್ದನೇ ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ ವಿವಾಹಿತ ಮಹಿಳೆ ಮತ್ತು ವಸಂತನ ಶವ ಒಂದೇ ಮನೆಯಲ್ಲಿ ಸಿಕ್ಕಿರುವುದರಿಂದ ಇಬ್ಬರ ನಡುವೆ ಸಂಬಂಧ ಇತ್ತೇ ಎನ್ನುವ ಅನುಮಾನ ಬಂದಿದೆ. ಆದರೆ, ಇವರ ನಡುವೆ ವೈಮನಸ್ಸು ಯಾಕಾಯ್ತು? ಯಾಕಾಗಿ ಕೊಲೆ ನಡೆಸಿದ್ದಾನೆ ಎನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Detailed Murder Report by Headline Karnataka, In a shocking incident reported from Mukka here on Wednesday, November 18, a man killed a housewife to whom he was acquainted with and later committed suicide by hanging. It is suspected that the incident took place at about 3 pm on Tuesday, November 17. The deceased have been identified as Vasanth Kumar (36) and Rekha (42).
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm