ಬ್ರೇಕಿಂಗ್ ನ್ಯೂಸ್
08-11-23 01:17 pm HK News Desk ಕ್ರೈಂ
ಮೂಡುಬಿದ್ರೆ, ನ.8: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಸಮೀಪದ ಕೊಂಡೆಬೀದಿಯಲ್ಲಿ ಬಂಧಿಸಿದ್ದಾರೆ.
ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲು ನಿವಾಸಿ ಸೈಯದ್ ಜಾಕೀರ್ (20) ಮತ್ತು ಕೋಟೆಬಾಗಿಲು ಗ್ರಾಮದ ದರ್ಗಾ ರಸ್ತೆ ನಿವಾಸಿ ಮೊಹಮ್ಮದ್ ಶಹೀಂ (24) ಬಂಧಿತ ಕಳ್ಳರು. ಜೈನ ಪೇಟೆಯ ಬಡಗ ಬಸದಿಯ ಎದುರು ಇರುವ ದೇವಿ ಕೃಪಾ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ರಾಯಲ್ ಎನ್ ಫೀಲ್ಡ್ 350 ಬೈಕ್ ಕಳವು ಮಾಡಲಾಗಿತ್ತು. ಇನ್ನೊಂದು ಪ್ರಕರಣದಲ್ಲಿ ಮಾರ್ಪಾಡಿ ಗ್ರಾಮದ ಎವರ್ಪ್ರೈಸ್ ರೆಸಿಡೆನ್ಸಿ ಅಪಾರ್ಟ್ಮೆಂಟ್ನ ಪಾರ್ಕಿಂಗ್ ಸ್ಥಳದಿಂದ ಇನ್ನೊಂದು ಬೈಕ್ ಕಳವಾಗಿತ್ತು.
ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಜೈನ್ ಪೇಟೆಯಲ್ಲಿ ಕಳವಾಗಿದ್ದ ಬುಲೆಟ್ ಬೈಕನ್ನು ಆರೋಪಿಗಳು ಚಲಾಯಿಸುತ್ತಿದ್ದರು. ಇನ್ನೊಂದು ಬೈಕನ್ನು ಪೇಪರ್ ಮಿಲ್ ಬಳಿಯ ಕೀರ್ತಿನಗರ ಕ್ರಾಸ್ನಲ್ಲಿ ಪೊದೆಗಳಲ್ಲಿ ಬಚ್ಚಿಟ್ಟಿರುವುದಾಗಿ ಆರೋಪಿಗಳು ತಿಳಿಸಿದ್ದರು. ಪೊಲೀಸರು ಎರಡೂ ಬೈಕನ್ನು ವಶಪಡಿಸಿದ್ದಾರೆ. ಎರಡು ಬೈಕ್ಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮೂಡಬಿದ್ರೆ ಠಾಣೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೇನ್, ಅಕೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್ ಮತ್ತು ಚಂದ್ರಹಾಸ ರೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Mangalore Two bike thieves arrested by Moodbidri police, 2 Royal Enfield bikes recovered. The arrest took place at Konde Street, near Savira Kambada Basadi in Marpadi village on the morning of Tuesday, November 7.
20-03-25 10:48 pm
Bangalore Correspondent
Honey Trapped, Minister, Probe: ಅಧಿವೇಶನದಲ್ಲಿ...
20-03-25 09:52 pm
Bangalore Marriage case, Srikanth Bindushree:...
20-03-25 01:07 pm
Kalaburagi police suspended, playing cards: ಇ...
20-03-25 12:18 pm
Raichur Accident, Bike Lorry: ಬೈಕ್ಗೆ ಡಿಕ್ಕಿ...
19-03-25 04:42 pm
20-03-25 10:40 pm
HK News Desk
ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ...
20-03-25 07:19 pm
ಕೊಂಕಣ ರೈಲ್ವೇ ಭಾರತೀಯ ರೈಲ್ವೇಯಲ್ಲಿ ವಿಲೀನಕ್ಕೆ ಮಹಾ...
20-03-25 06:07 pm
Kollam Suicide: ಸಾಲಗಾರರ ಕಾಟ ; ಎರಡು ವರ್ಷದ ಮಗುವ...
19-03-25 07:39 pm
ಕೊನೆಗೂ ಭುವಿಗಿಳಿದ ಸುನಿತಾ ವಿಲಿಯಮ್ಸ್ ; 9 ತಿಂಗಳ ತ...
19-03-25 02:10 pm
20-03-25 02:05 pm
HK News Desk
ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥ...
19-03-25 10:13 pm
ಪವಾಡಕ್ಕೆ ಸಾಕ್ಷಿಯಾಗಿದೆ ತಲಪಾಡಿ ದುರ್ಗಾಪರಮೇಶ್ವರೀ...
18-03-25 10:09 pm
Electricity, Malekudiya Tribal, Belthangady:...
18-03-25 08:53 pm
Mangalore accident, Kinnigoli, Bike, Vidoe: ಕ...
18-03-25 03:15 pm
20-03-25 05:29 pm
HK News Staff
Mangalore crime, Kukkeshree PG, Kadri: ಪಿಜಿ ಚ...
20-03-25 04:13 pm
Bidadi pro Pak graffiti; ಬಿಡದಿ ಫ್ಯಾಕ್ಟರಿಯಲ್ಲಿ...
20-03-25 03:22 pm
Mangalore Crime, Pachanady, Compound wall: ರಸ...
19-03-25 08:27 pm
Mangalore drugs, NCB: ಅತಿ ದೊಡ್ಡ ಡ್ರಗ್ಸ್ ಬೇಟೆ...
18-03-25 06:31 pm