ಬ್ರೇಕಿಂಗ್ ನ್ಯೂಸ್
29-10-23 10:38 pm Bangalore Correspondent ಕ್ರೈಂ
ಬೆಂಗಳೂರು, ಅ.29: ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿದ ವಂಚಕರು ಆಕೆಯಿಂದಲೇ 13 ಲಕ್ಷ ರೂ. ಪೀಕಿಸಿದ ಘಟನೆ ನಡೆದಿದೆ.
ಬೆಂಗಳೂರು ನಗರದ ವಿಕ್ಟೋರಿಯಾ ಲೇಔಟ್ ಪಾಮ್ಗ್ರೋವ್ ರಸ್ತೆಯ ನಿವಾಸಿ 62 ವರ್ಷದ ಪ್ರಿಯಾ (ಹೆಸರು ಬದಲಿಸಲಾಗಿದೆ) ವಂಚನೆಗೊಳಗಾದ ಮಹಿಳೆ. ಮಹಿಳೆ ಯಾವುದೇ ಪಾರ್ಸೆಲ್ ಕಳುಹಿಸದಿದ್ದರೂ, ನೀವು ಥಾಯ್ಲೆಂಡಿಗೆ ಪಾರ್ಸೆಲ್ ಮಾಡಿದ್ದೀರಿ ಎಂದು ಹೇಳಿ ಆಕೆಯ ಆಧಾರ್ ಕಾರ್ಡ್ ಸಂಖ್ಯೆ ತಿಳಿಸಿ ನಂಬಿಸಿ ಯಾಮಾರಿಸಿದ್ದಾರೆ.
ಮುಂಬೈನ ಕೊರಿಯರ್ ಕಂಪನಿಯ ಎಕ್ಸಿಕ್ಯೂಟಿವ್ ಎಂದು ಹೇಳಿ ಮಹಿಳೆಗೆ ದೂರವಾಣಿ ಕರೆ ಮಾಡಿದ್ದ ವಂಚಕರು, ಥಾಯ್ಲೆಂಡ್'ಗೆ ನೀವು ಕಳುಹಿಸಿರುವ ಪಾರ್ಸೆಲ್ ನಲ್ಲಿ 140 ಗ್ರಾಂ ಎಂಡಿಎಂ ಡ್ರಗ್ಸ್, ಎಂಟು ಪಾಸ್ಪೋರ್ಟ್ಗಳು ಮತ್ತು ಐದು ಕ್ರೆಡಿಟ್ ಕಾರ್ಡ್ಗಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಮಹಿಳೆ ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದಿದ್ದಾರೆ. ಆದರೆ, ವಂಚಕರು ಆಕೆಯನ್ನು ನಂಬಿಸಲು ಆಕೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ಹೇಳಿದ್ದು ನಂಬಿಕೆ ಬರುವಂತೆ ಮಾಡಿದ್ದಾರೆ.
ಮುಂಬೈ ಕಸ್ಟಮ್ಸ್ ಅಧಿಕಾರಿಗಳು ಪಾರ್ಸೆಲ್ ಅನ್ನು ವಶಪಡಿಸಿದ್ದಾರೆ. ನಾವು ಕೂಡ ಮುಂಬೈ ಸೈಬರ್ ಕ್ರೈಮ್ ಪೊಲೀಸರನ್ನು ಸಂಪರ್ಕಿಸಿದ್ದೇವೆ ಎಂದು ಹೇಳಿ, ಆಕೆಯಲ್ಲಿ ಆತಂಕ ಹೆಚ್ಚಿಸಿದ್ದಾರೆ. ಅಲ್ಲದೆ, ಮಹಿಳೆಗೆ ಸ್ಕೈಪ್ ಡೌನ್ ಲೋಡ್ ಮಾಡುವಂತೆ ತಿಳಿಸಿ, ಕಸ್ಟಮ್ಸ್ ಕೇಸಿನಿಂದ ಪಾರಾಗಲು ವ್ಯವಸ್ಥೆ ಮಾಡುತ್ತೇವೆಂದು ಹೇಳಿ ವೈಯಕ್ತಿಕ ಮಾಹಿತಿಗಳನ್ನು ತಿಳಿಸುವಂತೆ ಲಿಂಕ್ ಕಳುಹಿಸಿದ್ದಾರೆ. ಬಳಿಕ ಬ್ಯಾಂಕ್ ಖಾತೆಯ ಸಂಖ್ಯೆ ನೀಡಿ, ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದಾರೆ.
ಇದನ್ನು ನಂಬಿದ ಮಹಿಳೆ ಮರುದಿನ ಬ್ಯಾಂಕ್'ಗೆ ಹೋಗಿ ವಂಚಕರು ನೀಡಿದ್ದ ಬ್ಯಾಂಕ್ ಖಾತೆಯ ಸಂಖ್ಯೆಗೆ 13 ಲಕ್ಷ ರೂ. ಹಣ ವರ್ಗಾಯಿಸಿದ್ದಾರೆ. ಖಾತೆಗೆ ಹಣ ಬರುತ್ತಿದ್ದಂತೆಯೇ ವಂಚಕರು ತಮಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ನಾಶಪಡಿಸಿ ಸಂಪರ್ಕ ಕಡಿತಗೊಳಿಸಿದ್ದಾರೆ. ವಂಚನೆ ತಿಳಿದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
A woman was duped of Rs 13 lakh by fraudsters who threatened her that her parcel contained drugs. The incident took place. The victim has been identified as 62-year-old Priya (name changed), a resident of Palm Grove Road, Victoria Layout, Bengaluru city. Though the woman did not send any parcel, they told her that she had sent the parcel to Thailand and gave her Aadhaar card number.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm