ಬ್ರೇಕಿಂಗ್ ನ್ಯೂಸ್
02-08-23 08:35 pm HK News Desk ಕ್ರೈಂ
ಕೊಚ್ಚಿ, ಆಗಸ್ಟ್ 1: ಕೇರಳದ ಕೊಲ್ಲಂನಲ್ಲಿ 44 ವರ್ಷದ ಅಮೆರಿಕನ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬೀಚ್ನಲ್ಲಿ ಒಬ್ಬಂಟಿಯಾಗಿ ಕುಳಿತಿದ್ದ ಮಹಿಳೆಗೆ ಮದ್ಯ ಕುಡಿಸಿ ಪ್ರಜ್ಞೆ ತಪ್ಪಿಸಿ ನಂತರ, ಇಬ್ಬರು ಆರೋಪಿಗಳು ಆಕೆಯನ್ನ ತಮ್ಮೊಂದಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಂತ್ರಸ್ತೆ ಭಾರತಕ್ಕೆ ಪ್ರವಾಸ ಬಂದಿದ್ದು, ಕೊಲ್ಲಂನ ಆಶ್ರಮದಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಕ್ಯಾಲಿಫೋರ್ನಿಯಾದಿಂದ ಬಂದಿದ್ದ ಮಹಿಳೆ ;
44 ವರ್ಷದ ಅಮೆರಿಕ ಮಹಿಳೆ ಕೇರಳದ ಕೊಲ್ಲಂನಲ್ಲಿರುವ ಮಾತಾ ಅಮೃತಾನಂದ ಮಾಯಿ ಆಶ್ರಮಕ್ಕೆ ಬಂದಿದ್ದರು. ಅಮೆರಿಕದ ಕ್ಯಾಲಿಫೋರ್ನಿಯಾದ ಮಹಿಳೆ ಜುಲೈ 22 ರಂದು ಭಾರತಕ್ಕೆ ಬಂದಿದ್ದರು. ಅವರು ಆಗಸ್ಟ್ 5 ರಂದು ಯುಎಸ್ಗೆ ಮರಳುವವರಿದ್ದರು.
ಕೊಲ್ಲಂ ಪೊಲೀಸರ ಪ್ರಕಾರ, ಜುಲೈ 31ರಂದು ಬೆಳಿಗ್ಗೆ 10:30ರ ಸಂದರ್ಭದಲ್ಲಿ ಮಹಿಳೆ ಕೊಲ್ಲಂನ ಮಾತಾ ಅಮೃತಾನಂದ ಮಾಯಿ ಆಶ್ರಮದ ಬಳಿಯ ಸಮುದ್ರತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದರು. ಇಬ್ಬರು ಪುರುಷರು ಅವಳ ಬಳಿಗೆ ಬಂದರು, ಅವಳೊಂದಿಗೆ ಸ್ವಲ್ಪ ಸಮಯ ಮಾತನಾಡಿ, ಒಳ್ಳೆಯವರಂತೆ ನಟಿಸಿದ್ದಾರೆ. ಈ ವೇಳೆ ಆಕೆಗೆ ಸಿಗರೇಟ್ ಆಫರ್ ಮಾಡಿದ್ದಾರೆ. ಆಕೆ ನಿರಾಕರಿಸಿದಾಗ ಮದ್ಯವನ್ನು ಕೊಡಿಸುವುದಾಗಿ ಹೇಳಿದ್ದಾರೆ. ರಮ್ ಕುಡಿಸಿ ಅಮಲೇರಿದ ಮೇಲೆ ಆಕೆಯನ್ನ ಸಮೀಪದ ಖಾಲಿ ಮೆನಯೊಂದಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇಬ್ಬರು ಸ್ಥಳೀಯರ ಬಂಧನ ;
ಪೊಲೀಸರ ಪ್ರಕಾರ, ರಮ್ನಲ್ಲಿ ಕೆಲವು ಅಮಲು ಪದಾರ್ಥಗಳನ್ನು ಬೆರೆಸಲಾಗಿದೆ, ಇದರಿಂದಾಗಿ ಮಹಿಳೆ ಪ್ರಜ್ಞಾಹೀನಳಾಗಿದ್ದಾಳೆ. ಇದಾದ ಬಳಿಕ ಆರೋಪಿಗಳು ಸಂತ್ರಸ್ತೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದಾರೆ. ಪ್ರಜ್ಞೆ ಮರಳಿದ ನಂತರ, ಮಹಿಳೆ ಆಗಸ್ಟ್ 1ರಂದು ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ತನಿಖೆಯಲ್ಲಿ ಆರೋಪಿಗಳನ್ನು ಸ್ಥಳೀಯರು ಮತ್ತು ಅಪರಾಧ ಹಿನ್ನೆಲೆಯುಳ್ಳ ಜಯನ್ ಮತ್ತು ನಿಖಿಲ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
ಈ ಸಂಬಂಧ ಕರುನಾಗಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
An American woman, who had arrived in India recently and was staying at an ashram near here, was allegedly gangraped by two men. The accused men were caught on Tuesday and an FIR under various sections, including 376D (gangrape) and 376(2)(n) (repeatedly raping same woman), of the IPC, has been registered against them, police said.
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
24-03-26 12:10 pm
HK News Staffer
ಇರಾನ್ - ಅಮೆರಿಕ ಸಂಘರ್ಷ ; ದಿಢೀರ್ ಐದು ದಿನಗಳ ಕದನ...
23-03-26 09:46 pm
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
24-03-26 11:55 am
HK News Staffer
ಹರ್ಮುಜ್ ಜಲಸಂಧಿ ಬಂದ್ ; ಭಾರತದ 22 ಹಡಗು ಲಂಗರು, 20...
24-03-26 09:24 am
ಕಾಸರಗೋಡು ಅಖಾಡ ರೆಡಿ ; ಎಲ್ ಡಿಎಫ್ ನಿಂದ ಶಾನವಾಸ್ ಪ...
23-03-26 05:36 pm
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
23-03-26 09:44 pm
HK News Staffer
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm