ಬ್ರೇಕಿಂಗ್ ನ್ಯೂಸ್
01-08-23 04:12 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 1: ರಾಜಧಾನಿಯಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆ ಮೇಲೆ ಕಳೆದ ಒಂದು ವರ್ಷದಿಂದ ಅತ್ಯಾಚಾರ ನಡೆಸಲಾಗಿತ್ತು. ಸಂತ್ರಸ್ತೆ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಆ್ಯಂಡಿ ಜಾರ್ಜ್, ಸಂತೋಷ್, ಶಶಿ ಬಂಧಿತ ಆರೋಪಿಗಳು. ಎ1 ಆರೋಪಿ ಆ್ಯಂಡಿ ಜಾರ್ಜ್ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್ ಟೀಚರ್ ಆಗಿ ಕೆಲಸ ಮಾಡಿಕೊಂಡಿದ್ದನು. ಬಂಧಿತರಿಂದ ಮೊಬೈಲ್, ಪೆನ್ ಡ್ರೈವ್ ಹಾಗೂ ಲ್ಯಾಪ್ಟ್ಯಾಪ್ ವಶಕ್ಕೆ ಪಡೆಯಲಾಗಿದೆ.
ಎರಡು ವರ್ಷಗಳ ಹಿಂದೆ ಎ1 ಆರೋಪಿ ಆ್ಯಂಡಿ ಜಾರ್ಜ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿನಿಯ ಪರಿಚಯ ಆಗಿತ್ತು. ನಂತರ ಪ್ರೀತಿಸುವುದಾಗಿ ಹೇಳಿ ಹಲವು ಕಡೆಗಳಲ್ಲಿ ಸಂತ್ರಸ್ತೆ ಜೊತೆ ಸುತ್ತಾಡಿದ್ದಾನೆ. ಈ ವೇಳೆ ಕೆಲವು ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದುಕೊಂಡಿದ್ದನು.
ವಿಡಿಯೋ, ಫೋಟೋ ತೋರಿಸಿ ಬ್ಲ್ಯಾಕ್ಮೇಲ್ ;
ನಂತರ ಅದೇ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ. ತನ್ನ ಇಬ್ಬರು ಸ್ನೇಹಿತರ ಜೊತೆಗೂಡಿ ನಿರಂತರವಾಗಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮೂವರ ಚಿತ್ರಹಿಂಸೆ ತಾಳಲಾರದೇ ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲವರಿಗೆ ವಂಚನೆ ಮಾಡಿರುವ ಆರೋಪಿಗಳು ;
ದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕೊಡಿಗೇಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಮೊಬೈಲ್ ಹಾಗೂ ಲ್ಯಾಪ್ಟಾಪ್ನಲ್ಲಿ ಹಲವು ಫೋಟೋ ಮತ್ತು ವಿಡಿಯೋಗಳು ಲಭ್ಯವಾಗಿವೆ. ಇದೇ ರೀತಿ ಹಲವರಿಗೆ ವಂಚನೆ ಮಾಡಿರೋದು ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೊಂದ ಮಹಿಳೆ ಮತ್ತು ಆರೋಪಿ ಆ್ಯಂಡಿ ಜಾರ್ಜ್ ಇಬ್ಬರಿಗೂ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿತ್ತು. ಎ1 ಆರೋಪಿ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್ ಟೀಚರ್ ಆಗಿದ್ದಾನೆ. ಕಾಲೇಜಿನಲ್ಲಿ ಇದೇ ರೀತಿ ವಿದ್ಯಾರ್ಥಿನಿಯರಿಗೆ ಮೋಸ ಮಾಡಿದ್ದನಾ ಎಂಬುದರ ಬಗ್ಗೆಯೂ ತನಿಖೆ ನಡೆಲಾಗುತ್ತಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ.
The Bengaluru police Monday arrested a 28- year-old dance teacher for allegedly blackmailing his 23-year-old ex-girlfriend and raping her several times over the last six months along with two of his friends. The arrested have been identified as Andy George, the dance teacher, Santosh, 28, and Shashi Kumar, 30.
15-04-25 08:44 pm
Bangalore Correspondent
Kannada Journalist S K Shyamsundar Death: ಹಿರ...
15-04-25 12:51 pm
Hubballi encounter, PSI Annapurna: ಹುಬ್ಬಳ್ಳಿ...
14-04-25 09:48 pm
Bangalore Suicide: ಅಪಾರ್ಟ್ಮೆಂಟ್ನ ನಾಲ್ಕನೇ ಮಹ...
14-04-25 07:51 pm
Kannada comedy actor Bank Janardhan, Death: ಕ...
14-04-25 03:09 pm
15-04-25 04:40 pm
HK News Desk
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
ಕುರಾನ್ ಪ್ರತಿ, ಪೆನ್- ಪೇಪರ್ ಪಡೆದ ತಹಾವ್ವುರ್ ರಾಣಾ...
13-04-25 06:15 pm
Waqf clashes: ವಕ್ಫ್ ವಿರುದ್ಧ ಬೀದಿಗಿಳಿದ ಜನರು ;...
12-04-25 09:01 pm
15-04-25 09:57 pm
Mangalore Correspondent
Drowning, Surathkal Beach, Mangalore, News: ಮ...
15-04-25 09:21 pm
ಹರಿದ್ವಾರದಲ್ಲಿ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ...
14-04-25 09:20 pm
Drowning Ullal, Mangalore: ಉಳ್ಳಾಲದಲ್ಲಿ ಸಮುದ್ರ...
13-04-25 05:20 pm
ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ; ಪ್ರತ್ಯೇಕ...
13-04-25 01:27 pm
15-04-25 10:24 pm
HK News Desk
Pastor John Jebraj Arrest: ಇಬ್ಬರು ಹೆಣ್ಮಕ್ಕಳಿಗ...
15-04-25 06:17 pm
Mangalore Crime, Fire: ಕುಡಿದ ಮತ್ತಿನಲ್ಲಿ ಏಸಿಡ್...
15-04-25 05:13 pm
Mangalore CCB, Drugs, Crime: ಮಂಗಳೂರು ಸಿಸಿಬಿ ಪ...
12-04-25 10:52 pm
ಸರ್ಕಾರಿ ಅಧಿಕಾರಿ ಸೋಗಿನಲ್ಲಿ ನಕಲಿ ಕೋರ್ಟ್ ಆದೇಶ ಸೃ...
12-04-25 01:53 pm