ಬ್ರೇಕಿಂಗ್ ನ್ಯೂಸ್
28-07-23 11:18 am Mangalore Correspondent ಕ್ರೈಂ
ಉಳ್ಳಾಲ, ಜು.28: ಒಂಬತ್ತನೇ ತರಗತಿ ಪಾಸಾಗಿದ್ದಕ್ಕೆ ಟ್ರೀಟ್ ಏನೂ ಇಲ್ವಾ..? ಚಾಕಲೇಟ್ ಇಲ್ಲದಿದ್ದರೆ ಬೇರೇನಾದರೂ ಕೊಡು ಎಂದು ಪೀಡಿಸಿ ಎಸ್ಸೆಸೆಲ್ಸಿ ವಿದ್ಯಾರ್ಥಿನಿಗೆ ಫ್ಲೈಯಿಂಗ್ ಕಿಸ್ ಕೊಟ್ಟು ಲೈಂಗಿಕ ಕೀಟಲೆ ಕೊಡುತ್ತಿದ್ದ ಅನ್ಯಮತೀಯ ಆಟೋ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಆರೋಪಿ ಆಟೋ ಚಾಲಕ ತಲೆಮರೆಸಿಕೊಂಡಿದ್ದಾನೆ.
ಅಂಬ್ಲಮೊಗರು ಗ್ರಾಮದ ಎಸ್ಸೆಸೆಲ್ಸಿಯ ಅಪ್ರಾಪ್ತ ವಿದ್ಯಾರ್ಥಿನಿಗೆ ಅದೇ ಗ್ರಾಮದ ಆಟೋ ರಿಕ್ಷಾ ಚಾಲಕ ಇಕ್ಬಾಲ್ ಎಂಬಾತ ಲೈಂಗಿಕ ಕಾಟ ಕೊಟ್ಟಿದ್ದು ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿಯು ಪೋಷಕರೊಂದಿಗೆ ಕೆಲ ತಿಂಗಳ ಹಿಂದೆ ಆಟೋದಲ್ಲಿ ಮನೆಗೆ ತೆರಳಿದ್ದು ಈ ವೇಳೆ ಆಟೋ ಚಾಲಕ ಇಕ್ಬಾಲ್ ವಿದ್ಯಾರ್ಥಿನಿಯನ್ನ ಮಾತನಾಡಿಸಿದ್ದ ಎನ್ನಲಾಗಿದೆ. ಆನಂತರ, ಇತ್ತೀಚೆಗೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿ ಬೆಳಗ್ಗೆ ಶಾಲೆಗೆ ತೆರಳಲು ನಿಂತಿದ್ದ ಸಂದರ್ಭದಲ್ಲಿ ಪಾಸಾಗಿದ್ದಕ್ಕೆ ಟ್ರೀಟ್ ಇಲ್ವಾ.. ಚಾಕಲೇಟ್ ಇಲ್ಲದಿದ್ದರೆ ಬೇರೇನಾದರೂ ಕೊಡು. ನಿನ್ನನ್ನ ನಾನು ಆಟೋದಲ್ಲಿ ಫ್ರೀಯಾಗಿ ಕರ್ಕೊಂಡು ಹೋಗ್ತೀನಿ ಎಂದು ಪೀಡಿಸಿ ಬಾಲಕಿಯ ಕೈ ಮತ್ತು ಎದೆ ಭಾಗವನ್ನ ಸ್ಪರ್ಶಿಸಿ ಅಶ್ಲೀಲವಾಗಿ ಫ್ಲೈಯಿಂಗ್ ಕಿಸ್ ಕೊಡುತ್ತಿದ್ದನಂತೆ. ನೊಂದ ಬಾಲಕಿ ರಿಕ್ಷಾ ಚಾಲಕ ಇಕ್ಬಾಲನ ಕಾಟ ತಾಳಲಾರದೆ ನಿನ್ನೆ ಮನೆಮಂದಿಗೆ ವಿಚಾರ ತಿಳಿಸಿದ್ದಾಳೆ.
ಮನೆಮಂದಿ ಈ ಬಗ್ಗೆ ಚಾಲಕನನ್ನ ಪ್ರಶ್ನಿಸಲು ಕುತ್ತಾರಿನ ಆಟೋ ರಿಕ್ಷಾ ಪಾರ್ಕ್ ಗೆ ತೆರಳಿದ್ದು ಆರೋಪಿ ಅದಾಗಲೇ ತಲೆಮರೆಸಿಕೊಂಡಿದ್ದಾನೆ. ವಿದ್ಯಾರ್ಥಿನಿ ಪೋಷಕರು ಕೊಣಾಜೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.
Auto driver gives flying kiss to school student, flees after police compliant at Konaje in Mangalore
13-08-26 01:00 pm
HK News Staffer
ಕೊನೆಗೂ ಖಾತೆ ಫೈನಲ್ ; ಜಮೀರ್ ಡೌನ್ ಗ್ರೇಡ್, ಖಾದರ್...
12-08-26 06:57 pm
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 11:06 pm
HK News Desk
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
13-08-26 01:17 pm
HK News Staffer
Mangalore crime, Arrest: ಕೈ ಕೋಳದಲ್ಲೇ ಪೊಲೀಸರನ್...
12-08-26 11:18 pm
Panambur Robbery, Update, Mangalore: ಪಣಂಬೂರು...
12-08-26 07:47 pm
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm