ತಾಯಿಯ ವಾಟ್ಸಾಪ್ ಸ್ಟೇಟಸ್ ನಿಂದ ಸಿಕ್ಕಿಬಿದ್ದ ಮಗ !!

31-10-20 04:46 pm       Headline Karnataka News Network   ಕ್ರೈಂ

ವಾಟ್ಸ್​​​ ಆ್ಯಪ್ ಸ್ಟೇಟಸ್ ನಿಂದ 15 ತಿಂಗಳ ಹಿಂದೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಸಿಕ್ಕಿಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​, ಅಕ್ಟೋಬರ್ 31 : ಮಹಿಳೆಯೊಬ್ಬಳ ವಾಟ್ಸ್​​ಆ್ಯಪ್​ ಸ್ಟೇಟಸ್​ನಲ್ಲಿ ಹಾಕಿದ್ದ ಫೋಟೋ ಮೂಲಕ 15 ತಿಂಗಳ ಹಿಂದೆ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಸಿಕ್ಕಿಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​ನ ರಾಚಕೊಂಡ ಪೊಲೀಸ್​ ಠಾಣಾ ವ್ಯಾಪ್ತಿಯ ಸಾಯಿಪುರಿ ಕಾಲೊನಿಯಲ್ಲಿ ಕಳೆದ ವರ್ಷ ರವಿಕಿರಣ್​ ಎಂಬವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು.

2019 ಜು.12ರಂದು ರವಿಕಿರಣ್​ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯ ಬೀಗ ತೆಗೆದುಕೊಂಡಿತ್ತು, ಇದನ್ನು ಕಂಡು ಅವರಿಗೆ ಆಶ್ಚರ್ಯವಾದರೂ ತಾವೇ ಮರೆತು ಹೋಗಿದ್ದೆನೋ ಎಂದುಕೊಂಡಿದ್ದರು. ನಂತರದಲ್ಲಿ ಮನೆಯ ಆಭರಣ ಕಳವಾಗಿದ್ದು ಅವರ ಗಮನಕ್ಕೆ ಬಂದಿತ್ತು. ಕೂಡಲೇ ಪೊಲೀಸರಿಗೆ ದೂರು ನೀಡಿ ಕಳ್ಳತನದ ಪ್ರಕರಣವನ್ನು ದಾಖಲಿಸಿದ್ದರು. ಆದರೆ ಆರೋಪಿಯ ಪತ್ತೆ ಮಾತ್ರ ಆಗಿರಲಿಲ್ಲ.

ಇತ್ತೀಚೆಗೆ ರವಿಕಿರಣ್ ಅವರ ನೆರೆಮನೆಯ ಮಹಿಳೆ ಅದೇ ರೀತಿಯ ಚಿನ್ನಾಭರಣ ಧರಿಸಿ ವಾಟ್ಸ್​​​ ಆ್ಯಪ್ ಸ್ಟೇಟಸ್​ನಲ್ಲಿ ತನ್ನ ಫೋಟೋ ಹಾಕಿದ್ದರು. ಇದನ್ನ ನೋಡಿದ ರವಿಕಿರಣ್, ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ವಿಚಾರಣೆ ಮಾಡಿದಾಗ, ಆ ಮಹಿಳೆಯ ಮಗ ಜಿತೇಂದರ್​ ಆಭರಣ ಕದ್ದಿದ್ದನೆಂದು ಗೊತ್ತಾಗಿದೆ. ಆರೋಪಿ ಜಿತೇಂದರ್​ನನ್ನು ಅರೆಸ್ಟ್​ ಮಾಡಲಾಗಿದ್ದು, ಕೃತ್ಯದ ಬಗ್ಗೆ ಗೊತ್ತಿದ್ದರೂ ವಿಷಯ ಮುಚ್ಚಿಟ್ಟಿದ್ದ ತಾಯಿಗೆ ಪೊಲೀಸರು ನೋಟಿಸ್​ ನೀಡಿದ್ದಾರೆ.

A photograph posted as the WhatsApp status of a woman helped Rachakonda police detect a 15-month-old theft case reported at Malkajgiri and nab the accused Ponnugoti Jitender.