ಬ್ರೇಕಿಂಗ್ ನ್ಯೂಸ್
21-09-22 03:25 pm Mangalore Correspondent ಕ್ರೈಂ
ಪುತ್ತೂರು, ಸೆ.21: ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಇನ್ನೊಬ್ಬ ಮಹಿಳೆಯ ಪರ್ಸ್ ಕದ್ದಿರುವುದು ಬಸ್ ಒಳಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು ದೃಶ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುತ್ತೂರು ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಆಗಿರುವ ಸುಕನ್ಯಾ ಎಂಬ ಮಹಿಳೆ ಪರ್ಸ್ ಕಳೆದುಕೊಂಡವರಾಗಿದ್ದು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಸುಕನ್ಯಾ ಪ್ರತಿ ದಿನ ಮಂಗಳೂರಿನಿಂದ ಪುತ್ತೂರಿಗೆ ಬಸ್ನಲ್ಲಿ ತೆರಳುತ್ತಾರೆ. ಸೆ.20ರಂದು ಮಹೇಶ್ ಹೆಸರಿನ ಖಾಸಗಿ ಬಸ್ನಲ್ಲಿ ಸಂಚರಿಸುತ್ತಿದ್ದಾಗ ಕಲ್ಲಡ್ಕದಲ್ಲಿ ಬಸ್ ಹತ್ತಿದ ಓರ್ವ ಮಹಿಳೆ ಅವರ ಪಕ್ಕದಲ್ಲೇ ಕುಳಿತಿದ್ದರು. ಸುಕನ್ಯಾ ಬಳಿಕ ಪುತ್ತೂರು ಪೋಸ್ಟ್ ಆಫೀಸ್ ತಂಗುದಾಣದ ಬಳಿ ಬಸ್ ಇಳಿದು ಹೋಗಿದ್ದರು.
ಪುತ್ತೂರು ತಾ.ಪಂಗೆ ನಡೆದುಕೊಂಡು ಹೋಗುತ್ತಿದ್ದಾಗ ಪರ್ಸ್ ತಡಕಾಡುವಷ್ಟರಲ್ಲಿ ಬ್ಯಾಗ್ ಜಿಪ್ ಓಪನ್ ಆಗಿ ಪರ್ಸ್ ಕಳ್ಳತನ ಆಗಿದ್ದು ಗೊತ್ತಾಗಿತ್ತು. ಆನಂತರ ಪರಿಚಯದ ಬಸ್ ಚಾಲಕರೊಬ್ಬರಿಗೆ ಈ ಬಗ್ಗೆ ತಿಳಿಸಿದ್ದು ತಾನು ಬಂದಿದ್ದ ಮಹೇಶ್ ಬಸ್ ಕುರಿತಾಗಿಯೂ ಮಾಹಿತಿ ನೀಡಿದ್ದರು.

ಚಾಲಕನ ಸಲಹೆಯಂತೆ ಸುಕನ್ಯಾ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು. ಅಲ್ಲದೆ, ಬಸ್ಸಿನಲ್ಲಿ ಸಿಸಿಟಿವಿ ಇರುವ ಬಗ್ಗೆಯೂ ತಿಳಿಸಿದ್ದರು. ಪೊಲೀಸರು ಸಿಸಿಟಿವಿಯನ್ನು ಸಂಗ್ರಹಿಸಿದ್ದು ಚಾಲಾಕಿ ಮಹಿಳೆಯನ್ನು ಹುಡುಕಾಟ ನಡೆಸಿದ್ದಾರೆ.
ಚಾಲಾಕಿ ಮಹಿಳೆ ಮಂಗಳೂರಿನಲ್ಲಿ ಸೆರೆ
ಪರ್ಸ್ ಕಳ್ಳತನ ಮಾಡಿದ್ದ ಮಹಿಳೆ ಇಂದು ಬೆಳಗ್ಗೆ ಮಂಗಳೂರಿನಿಂದ ಉಪ್ಪಿನಂಗಡಿಗೆ ಹೊರಟಿದ್ದ ಬಸ್ ನಲ್ಲಿ ಇದ್ದರು. ಇದನ್ನು ಕಂಡ ಬಸ್ಸಿನ ನಿರ್ವಾಹಕ, ಮಹೇಶ್ ಬಸ್ಸಿನ ಚಾಲಕನಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ಬಿ.ಸಿ.ರೋಡಿನಲ್ಲಿ ಪೊಲೀಸರೂ ಸಿದ್ಧರಾಗಿದ್ದರು. ಈ ಬಗ್ಗೆ ಅರಿತ ವೃದ್ಧ ಮಹಿಳೆ, ಪಡೀಲ್ ನಲ್ಲಿ ಬಸ್ಸಿನಿಂದ ಇಳಿಯಲು ಯತ್ನಿಸಿದ್ದು, ನಿರ್ವಾಹಕ ಮತ್ತು ಚಾಲಕ ತಡೆದಿದ್ದಾರೆ. ನಂತರ ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ವೃದ್ಧೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
Police identified the elderly woman who had stolen a purse from the bag on a private bus (Mahesh) on Tuesday. She was detained and taken to Kankanady police station.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
12-08-26 07:47 pm
HK News Staffer
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm