ಬ್ರೇಕಿಂಗ್ ನ್ಯೂಸ್
14-09-22 09:43 pm Mangalore Correspondent ಕ್ರೈಂ
ಬಂಟ್ವಾಳ, ಸೆ.14: ಕುಡಿದ ಮತ್ತಿನಲ್ಲಿ ತಮ್ಮನೇ ಅಣ್ಣನನ್ನು ಹೊಡೆದು ಕೊಲೆಗೈದ ಘಟನೆ ವಿಟ್ಲ ಠಾಣೆ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಎಂಬಲ್ಲಿ ನಡೆದಿದೆ.
ಗಣೇಶ್ ಬಂಗೇರ (54) ಎಂಬವರು ಕೊಲೆಯಾದವರು. ತಾಯಿ ಕಮಲಾ ಅವರ ಜೊತೆ ಗಣೇಶ್ ಮತ್ತು ಅವರ ತಮ್ಮ ಪದ್ಮನಾಭ ವಾಸವಿದ್ದರು. ಆಸ್ತಿ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಜಗಳದ ವಿಚಾರದಲ್ಲಿ ವಿಟ್ಲ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಪ್ರತಿ ಬಾರಿ ತಮ್ಮ ಪದ್ಮನಾಭ ಬಂಗೇರ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ. ಒಂದೆರಡು ಬಾರಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಮಂಗಳವಾರ ರಾತ್ರಿ ಮಲಗಿದ್ದ ಗಣೇಶ್ ಬಂಗೇರ ಅವರನ್ನು ತಮ್ಮನೇ ತಲೆಗೆ ಹೊಡೆದು ಕೊಲೆ ಮಾಡಿದ್ದು, ಆನಂತರ ಏನೂ ಆಗಿರದಂತೆ ಮಲಗಿದ್ದ. ಬೆಳಗ್ಗೆ ತಾಯಿ ಹತ್ತಿರ ಬಂದು ಕರೆದಾಗ, ಮಗ ಏಳದೇ ಇರುವುದನ್ನು ಕಂಡು ಮಗಳಿಗೆ ಫೋನ್ ಮಾಡಿ ತಿಳಿಸಿದ್ದರು. ಮಗಳು, ಇತರ ಸಂಬಂಧಿಕರು ಬಂದು ನೋಡಿದಾಗ ಗಣೇಶ್ ಮಲಗಿದಲ್ಲೇ ಸಾವನ್ನಪ್ಪಿದ್ದರು. ಯಾವುದೋ ಆಯುಧದಿಂದ ಹೊಡೆದು ಕೊಲೆಗೈದಿದ್ದಾಗಿ ಮಗಳು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಗಣೇಶ್ ಬಂಗೇರ ಅವರನ್ನು ತಲೆ, ಎದೆಯ ಭಾಗಕ್ಕೆ ಹೊಡೆದು ಕೊಲೆಗೈದು ರಕ್ತವನ್ನು ಒರೆಸಿ ಮಂಚದಲ್ಲಿ ಮಲಗಿಸಲಾಗಿತ್ತು ಎಂದು ದೂರಲಾಗಿದೆ.
ಆರೋಪಿ ಪದ್ಮನಾಭ(47)ನನ್ನು ಪೊಲೀಸರು ಬಂಧಿಸಿದ್ದಾರೆ. ಅಣ್ಣ – ತಮ್ಮಂದಿರಿಗೆ ಮದುವೆಯಾಗಿದ್ದು, ಇಬ್ಬರ ಪತ್ನಿಯರು ಕೂಡ ಮನೆ ಬಿಟ್ಟು ಹೋಗಿದ್ದರು. ಆನಂತರ ಕುಡಿದು ಬಂದು ಗಲಾಟೆ ನಡೆಸುತ್ತಿದ್ದು, ಇದೀಗ ತಮ್ಮನೇ ಅಣ್ಣನನ್ನು ಕೊಲೆಗೈದು ಜೈಲು ಸೇರಿದ್ದಾನೆ.
A man has reportedly killed his elder brother at Kodange Banari, Padnur village, Vittal police station limits. The police have arrested the suspect.Ganesh Bangera (54) is the victim of murder. His younger brother Padmanabha Bangera (49) is the accused. Police said that the incident occurred between 8 PM on Tuesday and 9.30 AM on Wednesday, September 14.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
12-08-26 07:47 pm
HK News Staffer
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm