ಬ್ರೇಕಿಂಗ್ ನ್ಯೂಸ್
11-09-22 07:23 pm HK News Desk ಕ್ರೈಂ
ಚೆನ್ನೈ, ಸೆ.11: ಬೆಕ್ಕಿನ ಮರಿಗಳಿಗೆ ಹುಲಿಯ ಬಣ್ಣ ಬಳಿದು, ಹುಲಿ ಮರಿಗಳು ಮಾರಾಟಕ್ಕಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಯುವಕನನ್ನು ತಮಿಳುನಾಡಿನ ವೆಲ್ಲೂರು ಪೊಲೀಸರು ಬಂಧಿಸಿದ್ದಾರೆ.
ತಿರುವಣ್ಣಾಮಲೈ ಮೂಲದ ಪಾರ್ಥಿಪನ್ (24) ಎಂಬಾತ ತನ್ನಲ್ಲಿ ಮೂರು ತಿಂಗಳ ಹುಲಿ ಮರಿಗಳಿವೆ. ಮಾರಾಟಕ್ಕಿದ್ದು, 25 ಲಕ್ಷ ರೂ.ಗೆ ಯಾರಿಗಾದರೂ ಬೇಕಾದರೆ ತಿಳಿಸಿ, 10 ದಿನಗಳ ಒಳಗೆ ನಿಮ್ಮ ವಿಳಾಸಕ್ಕೆ ಹುಲಿ ಮರಿಗಳನ್ನು ತಲುಪಿಸಲಾಗುವುದು ಎಂದು ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದ.
ಈ ವಿಷಯ ಅರಣ್ಯಾಧಿಕಾರಿಗಳಿಗೆ ತಲುಪಿದ್ದು, ಕೂಡಲೇ ಸ್ಟೇಟಸ್ ಹಾಕಿದವನನ್ನು ಹುಡುಕಲು ಆರಂಭಿಸಿದ್ದಾರೆ. ಇದನ್ನು ತಿಳಿದ ಪಾರ್ಥಿಪನ್ ಪರಾರಿ ಆಗಲು ಯತ್ನಿಸಿದ್ದ. ಕೊನೆಗೂ ಅರಣ್ಯಾಧಿಕಾರಿಗಳು ವೆಲ್ಲೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿಸಿದ ಬಳಿಕ, ಪಾರ್ಥಿಪನ್ ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ, ಅಲ್ಲಿ ಯಾವುದೇ ಹುಲಿ ಮರಿ ಇರಲಿಲ್ಲ. ವಿಚಾರಣೆ ನಡೆಸಿದಾಗ, ಬೆಕ್ಕಿನ ಮರಿಗಳಿಗೆ ಹುಲಿಯ ಬಣ್ಣ ಬಳಿದು ಅವುಗಳನ್ನು ಮಾರಾಟ ಮಾಡಲು ಯತ್ನಿಸಿದ್ದಾನೆ ಎನ್ನುವ ವಿಷಯ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ ಅಂಬತ್ತೂರಿನ ಸ್ನೇಹಿತ ತಮಿಜ್ ಈ ರೀತಿ ಮಾಡುವ ಯೋಜನೆಯನ್ನು ಕೊಟ್ಟಿದ್ದ. ಆತನೇ ಈ ಫೋಟೋವನ್ನು ಪಾರ್ಥಿಪನ್ ಗೆ ನೀಡಿದ್ದ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿ ತಮಿಜ್ ನನ್ನು ಕೂಡ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
In Idukki, a young man was arrested for trying to extort money by painting a kitten as a tiger. Parthipan (24), a native of Tiruvannamala Arani, was arrested by the forest department. The forest department picked up the young man who advertised tiger cubs for sale through WhatsApp. The incident took place in Tamil Nadu border village near Marayur.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am