ಬ್ರೇಕಿಂಗ್ ನ್ಯೂಸ್
05-09-22 10:45 pm Mangalore Correspondent ಕ್ರೈಂ
ಮಂಗಳೂರು, ಸೆ.5 : ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಮಹಿಳೆಯರ ಸರ ಸುಲಿಗೆ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ 90 ಗ್ರಾಂ ತೂಕದ ಚಿನ್ನಾಭರಣ, 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್ ಸಹಿತ ಒಟ್ಟು 5 ಲಕ್ಷ ಮೌಲ್ಯ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಕ್ತಿನಗರ ನಿವಾಸಿ ಜಗದೀಶ್ ಶೆಟ್ಟಿ(39), ಉರ್ವಾ ನಿವಾಸಿ ಸುಜಿತ್ ಶೆಟ್ಟಿ (40), ಪದವಿನಂಗಡಿ ನಿವಾಸಿ ಸುರೇಶ್ ರೈ(39) ಬಂಧಿತರು. ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರ ಸುಲಿಗೆ ಪ್ರಕರಣ, ಕಂಕನಾಡಿ ಠಾಣೆ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು.
ಆ.14ರಂದು ಮಂಗಳೂರು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಪುಣೆ ಮೂಲದ ಮಹಿಳೆಯ ಸರ ಕಳ್ಳತನ ಆಗಿತ್ತು. ಅನಂತರ ಆ.24 ರಂದು ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಫ್ಯಾಕ್ಟರಿಯ ರಸ್ತೆಯಲ್ಲಿ ಮಹಿಳೆಯ ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ಆ.25 ರಂದು ಮಂಗಳೂರು ನಗರ ಕಂಕನಾಡಿ ಪೊಲೀಸ್ ಠಾಣೆಯ ಶಕ್ತಿನಗರದ ರಾಜೀವ ನಗರದಲ್ಲಿ ಮಹಿಳೆ ಸರವನ್ನು ಸುಲಿಗೆ ಮಾಡಲಾಗಿತ್ತು.
ಕೃತ್ಯದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದರು. ಮಹಿಳೆಯರ ಸರ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದಿದ್ದರು. ಜುವೆಲ್ಲರಿಗೆ ಬಂದಿದ್ದ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ, ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಗಳ ಪೈಕಿ ಜಗದೀಶ್ ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಸುರೇಶ್ ರೈ ಟೆಂಪೋ ಚಾಲಕನಾಗಿರುತ್ತಾನೆ. ಸುಜಿತ್ ಶೆಟ್ಟಿ ಮಂಗಳೂರಿನಲ್ಲಿ 2002ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ.
Mangalore Three robbers held for snatching gold and selling it to gold smith.
12-08-26 06:57 pm
HK News Staffer
ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪನ್ನಗಳಿಗೆ ನಿ...
12-08-26 06:06 pm
13 ಸಚಿವರಿಗೆ ಖಾತೆ ಹಂಚಿಕೆ; ಮುನಿಯಪ್ಪ ಸಮಾಜ ಕಲ್ಯಾಣ...
12-08-26 02:58 pm
ಜೈಲಿನಲ್ಲಿ ವಿಐಪಿ ಖೈದಿಗಳ ಬ್ಯಾರಕ್ ಗೆ ಸಿಸಿಬಿ ದಾಳ...
12-08-26 11:37 am
ಹೋಟೆಲ್ ಅಡುಗೆ ಮನೆಯಲ್ಲೂ ಕ್ಯಾಮೆರಾ ಕಡ್ಡಾಯ ; ಹೊಸ ಕ...
10-08-26 07:54 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
12-08-26 02:08 pm
HK News Staffer
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
ಮೂಡುಬಿದಿರೆಯಲ್ಲಿ ಸಿಲಿಂಡರ್ ಸ್ಫೋಟ ; ಆರು ವರ್ಷದ ಬಾ...
11-08-26 10:03 pm
ಕಡಬ ; ಮನೆಯಲ್ಲಿಟ್ಟ ಫ್ರಿಡ್ಜ್ ದಿಢೀರ್ ಸ್ಫೋಟ, ಬೆಂಕ...
11-08-26 06:33 pm
12-08-26 07:47 pm
HK News Staffer
ಉಡುಪಿಯಲ್ಲಿ ಶಿಕ್ಷಕಿಯ ಮನೆಯ ಟೆರೇಸ್ ಬಾಗಿಲು ಮುರಿದ...
11-08-26 05:34 pm
ಫೇಸ್ಬುಕ್ ಜಾಹೀರಾತು ನಂಬಿ ಷೇರು ಮಾರ್ಕೆಟ್ ಹೂಡಿಕೆ...
11-08-26 05:28 pm
ಸುರತ್ಕಲ್ ನಲ್ಲಿ ಹೈಟೆನ್ಷನ್ ತಂತಿಗೆ ಕಬ್ಬಿಣದ ರಾಡ್...
11-08-26 01:04 pm
ಮಣಿಪಾಲದಲ್ಲಿ ಭೀಕರ ಅಪಘಾತ ; ಮರಕ್ಕೆ ಬುಲೆಟ್ ಡಿಕ್ಕ...
11-08-26 12:38 pm