ಬ್ರೇಕಿಂಗ್ ನ್ಯೂಸ್
24-08-22 03:18 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 24: ಅತ್ಯಾಚಾರಗೈದ ಯುವಕನನ್ನೆ ಸಂತ್ರಸ್ತೆ ಮದುವೆಯಾದ ಕಾರಣ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
17 ವರ್ಷದ ಸಂತ್ರಸ್ತ ಯುವತಿ 18 ವರ್ಷ ತುಂಬಿದ ನಂತರ ಆರೋಪಿಯನ್ನೇ ಮದುವೆಯಾಗಿದ್ದಳು. ಇದಲ್ಲದೆ, ಸೆಷನ್ಸ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ದಂಪತಿಗೆ ಮಗು ಆಗಿತ್ತು. ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಧೀಶರು, ಸಂತ್ರಸ್ತ ಯುವತಿ ವಿಚಾರಣೆ ಸಂದರ್ಭದಲ್ಲಿ ಪ್ರತಿಕೂಲವಾಗಿ ತಿರುಗಿದರೆ, ಅರ್ಜಿದಾರನು ಎಲ್ಲ ಅಪರಾಧಗಳಿಂದ ಮುಕ್ತಗೊಳ್ಳುತ್ತಾನೆ. ಇದು ನೋವಿನ ಅಂತಿಮ ಫಲಿತಾಂಶವಲ್ಲ. ಆದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಪ್ರಕ್ರಿಯೆ ಅಂತಹ ನೋವನ್ನು ಉಂಟು ಮಾಡುತ್ತದೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರಾಸಿಕ್ಯೂಷನ್ ಕಡೆಯಿಂದ ಎದುರಾದ ವಿರೋಧವನ್ನು ನಿರ್ಲಕ್ಷಿಸಿದ ಹೈಕೋರ್ಟ್, ಕಕ್ಷಿದಾರರ ಮತ್ತು ಸಂತ್ರಸ್ತೆಯ ನಡುವಿನ ಒಪ್ಪಂದವನ್ನು ಅಂಗೀಕರಿಸುವುದು ಮತ್ತು ಪ್ರಕ್ರಿಯೆಗಳನ್ನು ಕೊನೆಗೊಳಿಸುವುದು ಸೂಕ್ತ ಎಂದು ಹೇಳಿದೆ. ಮದುವೆಯಾಗಿ ಮಗುವನ್ನು ಬೆಳೆಸುತ್ತಿರುವ ದಂಪತಿಗಳಿಗೆ ನ್ಯಾಯಾಲಯವು ತನ್ನ ಬಾಗಿಲುಗಳನ್ನು ಮುಚ್ಚಿದರೆ, ಇಡೀ ಪ್ರಕ್ರಿಯೆಯು ನ್ಯಾಯಾಂಗ ವ್ಯವಸ್ಥೆಯ ತಪ್ಪಿಗೆ ಕಾರಣವಾಗುತ್ತದೆ" ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತೀರ್ಪಿನ ಸಂದರ್ಭ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ತಂದೆ ತನ್ನ ಅಪ್ರಾಪ್ತ ಮಗಳು ಕಾಣೆಯಾಗಿದ್ದಾಳೆ ಎಂದು ಮಾರ್ಚ್ 2019 ರಲ್ಲಿ ದೂರು ದಾಖಲಿಸಿದ್ದರು. ಆದರೆ, ಆರೋಪಿಯೊಂದಿಗೆ ಬಾಲಕಿ ಪತ್ತೆಯಾಗಿದ್ದು ಇಬ್ಬರೂ ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ, ಬಾಲಕಿಗೆ ಕೇವಲ 17 ವರ್ಷ ವಯಸ್ಸಾಗಿದ್ದರಿಂದ ಆರೋಪಿ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 18 ತಿಂಗಳ ಕಾಲ ಜೈಲಿನಲ್ಲಿದ್ದ ಆತನಿಗೆ ಬಳಿಕ ಜಾಮೀನು ನೀಡಲಾಗಿತ್ತು. ಆರೋಪಿ ಬಿಡುಗಡೆಯಾದ ನಂತರ, ದಂಪತಿ ನವೆಂಬರ್ 2020 ರಲ್ಲಿ ವಿವಾಹವಾಗಿದ್ದು ವರ್ಷದ ನಂತರ, ಅವರಿಗೆ ಹೆಣ್ಣು ಮಗುವಾಗಿತ್ತು.
The Karnataka High Court has quashed criminal proceedings against a 23-year-old man facing charges under the Protection of Children from Sexual Offences (POCSO) Act and rape charges under the Indian Penal Code (IPC). The 17-year-old victim had married him after reaching 18 and the couple even had a child while the case was pending in a Sessions Court.
22-03-26 11:44 am
HK News Staffer
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕನ ಕಿರುಕ...
21-03-26 05:32 pm
22-03-26 08:37 pm
HK News Staffer
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
22-03-26 07:30 pm
HK News Staffer
Russian oil Tanker, Mangalore: ರಷ್ಯಾದಿಂದ ಮಂಗಳ...
22-03-26 05:07 pm
ರಣಮಳೆಗೆ ಮನೆಯನ್ನ ಕಳಕೊಂಡಿದ್ದ ಕೊಲ್ಯದ ಬಡ ಕುಟುಂಬಕ್...
22-03-26 02:42 pm
Rape, Sandesh PG Inspector: ಇನ್ಸ್ ಪೆಕ್ಟರ್ ಸಂ...
22-03-26 12:10 pm
ಕಲ್ಲಡ್ಕದ ಫ್ಯಾಬ್ರಿಕೇಶನ್ ಉದ್ಯಮಿ ಸುಳ್ಯದ ಲಾಡ್ಜ್ ನ...
21-03-26 08:23 pm
22-03-26 09:44 pm
HK News Staffer
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm