ಬ್ರೇಕಿಂಗ್ ನ್ಯೂಸ್
20-08-22 01:38 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 20: ಆಸ್ತಿಗಾಗಿ ಸ್ವಂತ ತಾತನನ್ನೇ ಹೊಡೆದು ಕೊಂದಿದ್ದ ಆರೋಪಿ ಮೊಮ್ಮಗನನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಮೊಮ್ಮಗ ಜಯಂತ್ (20) ಮತ್ತು ಕೊಲೆಗೆ ಸಹಕರಿಸಿದ ಯಾಸೀನ್ (22) ಬಂಧಿತ ಆರೋಪಿಗಳು. ಜಯಂತ್, ಸ್ನೇಹಿತನ ಜೊತೆ ಸೇರಿ ತಾತ ಪುಟ್ಟಯ್ಯ ಎಂಬವರನ್ನ ಕೊಂದಿದ್ದ. ಆಗಸ್ಟ್ 17ರಂದು ಕೊಲೆ ಮಾಡಿದ್ದು ಯಲಹಂಕ ಸಮೀಪದ ಸುರಭಿ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆಸ್ತಿ ವಿಚಾರದಲ್ಲಿ ತಾತನ ಜೊತೆ ಜಗಳವಾಡ್ತಿದ್ದ. ಅಲ್ಲದೆ, ವ್ಯವಹಾರಕ್ಕಾಗಿ ಆಸ್ತಿ ಮೇಲೆ ಲೋನ್ ಕೊಡಿಸುವಂತೆ ಪೀಡಿಸ್ತಿದ್ದ. ಆದ್ರೆ ಮೊಮ್ಮಗ ಹಠಕ್ಕೆ ಆಗಲ್ಲ ಎಂದಿದ್ದ ಪುಟ್ಟಯ್ಯರನ್ನು ಮೊಮ್ಮಗನೇ ಕೊಲೆ ಮಾಡಲು ಸಂಚು ರೂಪಿಸಿದ್ದ.
ಕೊಲೆ ಮಾಡಿಯಾದರೂ ಆಸ್ತಿ ಪಾಲು ಪಡೆದುಕೊಂಡರಾಯ್ತು ಎಂದು ಯೋಜನೆ ಹಾಕಿದ್ದ ಆರೋಪಿ, ಗೆಳೆಯ ಯಾಸೀನ್ಗೆ ಕರೆ ಮಾಡಿ ಕರೆಸಿಕೊಂಡು 17ರಂದು ಮನೆಗೆ ನುಗ್ಗಿ ಪುಟ್ಟಯ್ಯನನ್ನ ಕೊಲೆ ಮಾಡಿದ್ದಾರೆ. ಕೊಲೆಗೈದು ತಾತನ ಮೈಮೇಲಿದ್ದ ಚಿನ್ನಾಭರಣ ದೋಚಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆದರೆ ಕುಟುಂಬಸ್ಥರ ಮೂಲಕ ಮೊಮ್ಮಗ ಜಯಂತ್, ಜಗಳ ಮಾಡಿಕೊಂಡಿದ್ದ ವಿಚಾರ ಪೊಲೀಸರಿಗೆ ಲಭಿಸಿತ್ತು. ವಿಚಾರಣೆಗೆ ಯತ್ನಿಸಿದಾಗ ಆರೋಪಿ ಪರಾರಿಯಾಗಿದ್ದು ತಿಳಿದು ಸಂಶಯ ಪಕ್ಕಾ ಆಗಿತ್ತು. ಸದ್ಯ ಇಬ್ಬರೂ ಆರೋಪಿಗಳನ್ನ ಯಲಹಂಕ ಪೊಲೀಸರು ಬಂಧಿಸಿದ್ದು ಬೇರೆ ಯಾರಾದ್ರೂ ಕೊಲೆಗೆ ಸಹಕಾರ ನೀಡಿದ್ದರೇ ಅನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Grandfather murdered by grandson and his close friend for the sake of property in Bangalore. The arrested are identified as Jayanth grand son and friend Yasin.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm