ಬ್ರೇಕಿಂಗ್ ನ್ಯೂಸ್
05-07-22 10:32 am Mangalore Correspondent ಕ್ರೈಂ
ಬಂಟ್ವಾಳ, ಜುಲೈ 5: ಕ್ಷುಲ್ಲಕ ಕಾರಣಕ್ಕೆ ದ್ವೇಷ ಕಟ್ಟಿಕೊಂಡು ಜಗಳವಾಡಿ ಯುವಕನನ್ನು ಚೂರಿಯಿಂದ ಇರಿದು ಕೊಲೆಗೈದ ಘಟನೆ ಬಿ.ಸಿ. ರೋಡ್ ಬಳಿಯ ಶಾಂತಿಯಂಗಡಿ ಬಳಿ ನಡೆದಿದೆ.
ಶಾಂತಿಯಂಗಡಿ ಬಿ ಮೂಡ ಗ್ರಾಮದ ನಿವಾಸಿ ಆಸಿಫ್ (27) ಮೃತ ಯುವಕ. ಸೋಮವಾರ ರಾತ್ರಿ 10.30ರ ಸುಮಾರಿಗೆ ಆಸಿಫ್, ಶಾಂತಿಯಂಗಡಿ ಸ್ಟೋರ್ ಬಳಿ ಇದ್ದೇನೆ. ಕೂಡಲೇ ಬನ್ನಿ. ಇಲ್ಲಿ ಮಾರಿಪಳ್ಳ ಮಹಮ್ಮದ್ ನೌಫಾಲ್ ಮತ್ತು ಮಹಮ್ಮದ್ ನೌಸೀರ್ ಸ್ಕೂಟರ್ ತಡೆದು ಧಮ್ಕಿ ಹಾಕುತ್ತಿದ್ದಾರೆಂದು ಹೇಳಿ, ಕೂಡಲೇ ಬರುವಂತೆ ತನ್ನ ಗೆಳೆಯರಿಗೆ ಫೋನಾಯಿಸಿದ್ದ. ಗೆಳೆಯರಾದ ಮಹಮ್ಮದ್, ಅನ್ಸಾರ್, ಕೌಶಿಕ್, ನಿಜಾಮುದ್ದೀನ್ ಸೇರಿಕೊಂಡು ಸ್ಥಳಕ್ಕೆ ತೆರಳಿದ್ದರು.
ಈ ವೇಳೆ, ಪೊನ್ನೋಡಿಯ ಲಗೂನ್ ಕೊಕೊನಟ್ ಹೊಟೇಲ್ ಬಳಿಗೆ ತೆರಳಿದ್ದು ಅಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ ಆಗಿದೆ. ಆಸಿಫ್ ಜೊತೆಗೆ ಬಂದಿದ್ದ ಮಹಮ್ಮದ್ ನೌಫಾಲ್ ಮೇಲೆ ಆರೋಪಿಗಳು ಮರದ ಸೋಂಟೆಯಲ್ಲಿ ಹಲ್ಲೆ ನಡೆಸಿದ್ದಾರೆ. ಎರಡೂ ತಂಡಗಳ ಮಧ್ಯೆ ಹೊಡೆದಾಟ ನಡೆದಿದ್ದು ಈ ವೇಳೆ ಅರೋಪಿ ನೌಫಾಲ್ ತನ್ನ ಕೈಲಿದ್ದ ಚೂರಿಯನ್ನು ತೆಗೆದು ಆಸಿಫ್ ಹೊಟ್ಟೆಯ ಬಲಬದಿಗೆ ತಿವಿದಿದ್ದಾನೆ. ಆಸಿಫ್ ಬೊಬ್ಬೆ ಹೊಡೆದು ನೆಲಕ್ಕೆ ಬಿದ್ದಿದ್ದು ಕೂಡಲೇ ಇತರ ಗೆಳೆಯರು ಸೇರಿ ಆತನನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದಾರೆ. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಒಯ್ದಾಗ ಆಸಿಫ್ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.
ಈ ಬಗ್ಗೆ ಆಸಿಫ್ ಸ್ನೇಹಿತ ಮಹಮ್ಮದ್ ನೌಫಾಲ್ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು ಪ್ರತಿ ದಿನ ಆಸಿಫ್ ಲಗೂನ್ ಹೊಟೇಲ್ ಬಳಿಯಿಂದ ತೆರಳುವಾಗ ಆರೋಪಿತ ಮಾರಿಪಳ್ಳದ ಮಹಮ್ಮದ್ ನೌಫಾಲ್, ನೌಸೀರ್ ಅವರನ್ನು ನೋಡಿ ಸುಖಾಸುಮ್ಮನೆ ಹಾರ್ನ್ ಮಾಡುತ್ತಾನೆಂದು ದ್ವೇಷ ಕಟ್ಟಿಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ, ವಿಚಾರಿಸಲು ಹೋದಾಗ ಚೂರಿಯಿಂದ ತಿವಿದು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
A youth was murdered by two others over the issue of honking and staring while passing by. A complaint in this regard is filed in city police station by friend of the deceased Mohammed Naufal (28), a resident of Shantiangadi. The victim of stabbing incident is Mohammed Asif, a resident of Shantiangadi of B Mooda village. The accused are Mohammed Naufal and Mohammed Nasir, residents of Maripalla.
22-03-26 11:44 am
HK News Staffer
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕನ ಕಿರುಕ...
21-03-26 05:32 pm
22-03-26 03:14 pm
HK News Staffer
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
22-03-26 07:30 pm
HK News Staffer
Russian oil Tanker, Mangalore: ರಷ್ಯಾದಿಂದ ಮಂಗಳ...
22-03-26 05:07 pm
ರಣಮಳೆಗೆ ಮನೆಯನ್ನ ಕಳಕೊಂಡಿದ್ದ ಕೊಲ್ಯದ ಬಡ ಕುಟುಂಬಕ್...
22-03-26 02:42 pm
Rape, Sandesh PG Inspector: ಇನ್ಸ್ ಪೆಕ್ಟರ್ ಸಂ...
22-03-26 12:10 pm
ಕಲ್ಲಡ್ಕದ ಫ್ಯಾಬ್ರಿಕೇಶನ್ ಉದ್ಯಮಿ ಸುಳ್ಯದ ಲಾಡ್ಜ್ ನ...
21-03-26 08:23 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm