ಬ್ರೇಕಿಂಗ್ ನ್ಯೂಸ್
28-06-22 01:05 pm HK News Desk ಕ್ರೈಂ
ಮೈಸೂರು, ಜೂನ್ 28 : ಪತ್ನಿಯ ಬಗ್ಗೆ ಅನೈತಿಕ ಸಂಬಂಧ ಶಂಕೆಯಿಂದ ಆಕೆಯ ರುಂಡವನ್ನೇ ಕತ್ತರಿಸಿ ಭೀಕರವಾಗಿ ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆಟ್ಟನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಪುಟ್ಟಮ್ಮ(40) ಎಂಬ ಮಹಿಳೆ ಮೃತ ದುರ್ದೈವಿ. ಕೊಲೆಯ ಬಳಿಕ ಪತಿ ದೇವರಾಜ್ ತಪ್ಪಿಸಿಕೊಂಡಿದ್ದು ಬಂಧನಕ್ಕಾಗಿ ವರುಣಾ ಪೊಲೀಸರು ಬಲೆ ಬೀಸಿದ್ದಾರೆ.
ಈ ಹಿಂದೆ ಮೊದಲ ಹೆಂಡತಿಯನ್ನೂ ಶೀಲ ಶಂಕಿಸಿ ಕೊಲೆಗೆ ಯತ್ನಿಸಿದ್ದ ದೇವರಾಜ್, ಜೈಲು ವಾಸವನ್ನೂ ಅನುಭವಿಸಿದ್ದ. ಬಳಿಕ ಮೊದಲ ಹೆಂಡತಿಯಿಂದ ದೂರವಾಗಿ 21 ವರ್ಷಗಳ ಹಿಂದೆ ಪುಟ್ಟಮ್ಮಳನ್ನ ಎರಡನೇ ವಿವಾಹವಾಗಿದ್ದ. ಎರಡನೇ ಮದುವೆ ಆದರೂ ಆಕೆಯ ಬಗ್ಗೆಯೂ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ.
ಇವರಿಗೆ 20 ವರ್ಷದ ಮಗಳಿದ್ದರೂ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದ. ಇದೇ ಶಂಕೆಯಲ್ಲಿ ಕಳೆದ ಒಂದು ತಿಂಗಳಿಂದ ಪುಟ್ಟಮ್ಮಳಿಗೆ ಕಿರುಕುಳವನ್ನೂ ನೀಡುತ್ತಿದ್ದ. ಮಗಳು ಪವಿತ್ರ ಕಾಲೇಜಿಗೆ ಹೋಗುತ್ತಿದ್ದ ವೇಳೆ ಇದೇ ವಿಚಾರಕ್ಕೆ ಮನೆಯಲ್ಲಿ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಇದೀಗ ಮಗಳು ಮನೆಯಲ್ಲಿ ಇಲ್ಲದೇ ಇದ್ದಾಗ ಪತ್ನಿಯನ್ನ ಭೀಕರವಾಗಿ ಕೊಂದಿದ್ದಾನೆ. ರುಂಡ ಮುಂಡವನ್ನ ಬೇರೆ ಆಗುವಂತೆ ಭೀಕರವಾಗಿ ಕೊಲೆ ಮಾಡಿದ್ದು ಈ ಬಗ್ಗೆ ತಂದೆ ದೇವರಾಜ್ ವಿರುದ್ದ ಮಗಳು ಪವಿತ್ರ ದೂರು ನೀಡಿದ್ದಾಳೆ. ವರುಣಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ದೇವರಾಜ್ ಬಂಧನಕ್ಕೆ ಮುಂದಾಗಿದ್ದಾರೆ.
Mysuru husband suspects of extra martial affair beheads wife. The deceased has been identified as Puttamma (40).
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:23 am
HK News Desk
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
12-05-25 11:26 am
HK News Desk
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm