ಬ್ರೇಕಿಂಗ್ ನ್ಯೂಸ್
13-06-22 10:47 am HK News Desk ಕ್ರೈಂ
ಬೆಂಗಳೂರು, ಜೂನ್ 13 : ಹಲಸೂರು ಬಳಿಯ ಫೈವ್ ಸ್ಟಾರ್ ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ತಡರಾತ್ರಿ ರೇವ್ ಪಾರ್ಟಿ ನಡೆಸುತ್ತಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಸಿದ್ಧಾಂತ ಕಪೂರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪಾರ್ಟಿಯಲ್ಲಿ ರಾಜಕೀಯ ನಾಯಕರ ಮಕ್ಕಳು ಕೂಡ ಪಾಲ್ಗೊಂಡಿದ್ದರು ಎನ್ನುವ ಮಾಹಿತಿಯಿದೆ.
ಹಲಸೂರು ಬಳಿಯ "ದಿ ಪಾರ್ಕ್" ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿಯಾಗಿದೆ. ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಅನುಮಾನ ಹಿನ್ನಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ 25ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಯವಕ ಮತ್ತು ಯುವತಿಯರನ್ನು ವಶಕ್ಕೆ ಪಡೆದು ಮೆಡಿಕಲ್ ಪರೀಕ್ಷೆಗೆ ರವಾನಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಹಲವರು ಡ್ರಗ್ ಸೇವನೆ ಮಾಡಿರೋದು ಧೃಡಪಟ್ಟಿದೆ ಎನ್ನುವ ಮಾಹಿತಿಗಳಿವೆ.



ರೇವ್ ಪಾರ್ಟಿಯಿಂದ ಬಾಲಿವುಡ್ ಹಿರಿಯ ನಟರೊಬ್ಬರ ಪುತ್ರ ಸಿದ್ಧಾಂತ ಕಪೂರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಆತ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಆತನನ್ನು ಹಲಸೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ.

ಬಾಲಿವುಟ್ ನಟನೂ ಆಗಿರುವ ಸಿದ್ಧಾಂತ ಕಪೂರ್, ಮುಂಬೈ ಮೂಲದ ಡಿಜೆಯೊಂದಿಗೆ ಪಾರ್ಟಿಗೆ ಬಂದಿದ್ದ ಎನ್ನಲಾಗುತ್ತಿದೆ. ಸಿದ್ಧಾಂತ್, ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರನಾಗಿದ್ದು ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿ ಸಿಕ್ಕಿಬಿದ್ದಿದ್ದಾನೆ.
Actor Siddhanth Kapoor's brother Siddhanth Kapoor tested positive for drug usage in Bengaluru on Sunday night.He was one of the six people who consumed drugs at a rave party, the city police found during its raid.While new developments are still awaited, Kapoor now becomes the latest celebrity to be mired in a drug controversy.His father veteran actor Shakti Kapoor has reacted.
12-05-26 02:26 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
12-05-26 08:15 pm
HK News Desk
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
ಅಧಿಕಾರಕ್ಕೆ ಬರುತ್ತಿದ್ದಂತೆ ‘ಎಣ್ಣೆ ಸಾಮ್ರಾಜ್ಯ’ ಕ್...
12-05-26 11:34 am
ಒಂದು ವರ್ಷ ಚಿನ್ನ ಖರೀದಿಸ್ಬೇಡಿ...ಇಂಧನ ಉಳಿಸಿ, ವಿದ...
11-05-26 08:05 pm
12-05-26 06:26 pm
HK News Staffer
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
12-05-26 01:54 pm
HK News Staffer
ಧರ್ಮಸ್ಥಳ ಬುರುಡೆ ಅಗೆದಿದ್ದೇ ಬಂತು..! ಹತ್ತು ತಿಂಗಳ...
12-05-26 01:11 pm
ಬೈಕಂಪಾಡಿಯಲ್ಲಿ ಮೊಬೈಲ್ ಅಂಗಡಿಗೆ ಕನ್ನ; 6 ವರ್ಷದಿಂದ...
12-05-26 11:19 am
ಮದುವೆ ನಿಶ್ಚಯವಾಗಿದ್ದ ಯುವಕ ಅಪಘಾತದಲ್ಲಿ ಸಾವು ; ಮನ...
11-05-26 04:58 pm
ಉಪ್ಪಿನಂಗಡಿಯಲ್ಲಿ ಭೀಕರ ಅಪಘಾತ; ಕಾರು-ಬೈಕ್ ಡಿಕ್ಕಿ,...
11-05-26 01:08 pm