ಬ್ರೇಕಿಂಗ್ ನ್ಯೂಸ್
11-06-22 08:53 am Mangaluru Correspondent ಕ್ರೈಂ
ಮಂಗಳೂರು, ಜೂನ್ 11: ಆರೋಪಿಗಳ ಸೆರೆಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದಾಗ ಪಣಂಬೂರು ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ ಘಟನೆ ನಡೆದಿದ್ದು ಇಬ್ಬರು ಆರೋಪಿಗಳ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.










ಇತ್ತೀಚೆಗೆ ಬೈಕಂಪಾಡಿಯ ಮೀನಕಳಿಯದಲ್ಲಿ ರಾಜಾ ಅಲಿಯಾಸ್ ರಾಘವೇಂದ್ರ ಎಂಬಾತನ ಕೊಲೆ ನಡೆದಿತ್ತು. ಪ್ರಕರಣ ಸಂಬಂಧಿಸಿ ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಎಂಬುವರನ್ನು ವಶಕ್ಕೆ ಪಡೆದು ಅವರ ಮೂಲಕ ಇತರ ಆರೋಪಿಗಳ ಸೆರೆಗೆ ಪೊಲೀಸರು ಮುಂದಾಗಿದ್ದರು. ಇಂದು ನಸುಕಿನಲ್ಲಿ ಇವರನ್ನು ಕರೆದೊಯ್ದು ಆರೋಪಿಗಳ ಪತ್ತೆಗೆ ಹೊರಟಿದ್ದಾಗ ಕಿನ್ನಿಗೋಳಿ ಬಳಿಯ ಹೊಸಕಾಡಿನಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಪೊಲೀಸ್ ಜೀಪಿಗೆ ಕಲ್ಲು , ಬಾಟ್ಲಿಯಿಂದ ಹಾನಿ ಮಾಡಿದ್ದು ಮೂವರು ಸಿಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ, ಪೊಲೀಸ್ ಇನ್ಸ್ ಪೆಕ್ಟರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬಂದಿ ಮತ್ತು ಆರೋಪಿಗಳನ್ನು ಶ್ರೀನಿವಾಸ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರೂ, ಪರಾರಿಯಾಗಲು ನೋಡಿದ್ದಕ್ಕೆ ಕಾಲಿಗೆ ಗುಂಡು ಹಾರಿಸಲಾಗಿದೆ. ಅರ್ಜುನ್ ಮತ್ತು ಮನೋಜ್ ಕಾಲಿಗೆ ಗಾಯಗಳಾಗಿವೆ. ಪಣಂಬೂರು ಪಿಎಸ್ಐ ನಾಗೇಂದ್ರ, ಹೆಡ್ ಕಾನ್ಸ್ ಟೇಬಲ್ ಸಂತೋಷ್ ಪೂಜಾರಿ, ಎಎಸ್ಐ ಡೇವಿಡ್ ಗಾಯಗೊಂಡ ಪೊಲೀಸ್ ಸಿಬಂದಿ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
The police opened fire at the accused in the Panambur murder case after he assaulted the police personnel at the Global Heritage Layout, Mulki here on June 11. The two were said the be the Murder accused of Rowdy sheeter at Panambur Raja Raghavendra (29). CCB Police Inspector Mahesh Prasad opened fire at Arjun and Manoj who are injured in the legs. Two rounds out of the three were fired out at the accused. Both the injured have been shifted to Srinivas Medical College and Hospital for treatment. Police commissioner Shashi Kumar IPS arrived at the spot for further investigation.
03-02-26 08:17 pm
HK News Desk
ಸಿಜೆ ರಾಯ್ ಡೈರಿಯಲ್ಲಿತ್ತು ಒಂಬತ್ತು ಪುಟಗಳ ಡೆತ್ ನೋ...
03-02-26 05:34 pm
Kamalakar Bhat Guruji Affair: ಜ್ಯೋತಿಷಿ ಕಮಲಾಕರ...
03-02-26 05:03 pm
ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್...
03-02-26 11:53 am
Charmadi Ghat: ಚಾರ್ಮಾಡಿ ಘಾಟಿ ಅರಣ್ಯಕ್ಕೆ ಮತ್ತೆ...
02-02-26 11:02 pm
04-02-26 03:42 pm
HK News Desk
ಕೊರಿಯನ್ ಆನ್ಲೈನ್ ಗೇಮ್ ಗೀಳು ; 9ನೇ ಮಹಡಿಯಿಂದ ಕೆಳ...
04-02-26 02:02 pm
ನೆಲದ ಕಾನೂನು ಗೌರವಿಸಿ ಉಳಿದುಕೊಳ್ಳಿ, ಇಲ್ಲಾಂದ್ರೆ ದ...
03-02-26 09:06 pm
ಬಾಲಕನ ಮೊಮೋಸ್ ತಿನ್ನುವ ಆಸೆಗೆ ಮನೆಯಲ್ಲಿದ್ದ 85 ಲಕ್...
03-02-26 11:55 am
ಸುರಕ್ಷಿತ ಗ್ರೀನ್ ಎನರ್ಜಿ ; ಮಂಗಳೂರಿನಲ್ಲಿ ʼಕಡಲ ಪವ...
02-02-26 10:40 pm
04-02-26 10:15 pm
Mangalore Correspondent
MLA D. Vedavyasa Kamath: ಕಟ್ಟಡ ಪರವಾನಗಿ ನೀಡುವಲ...
04-02-26 09:34 pm
Mangalore, Lonavala Accident: ಲೋನಾವಾಲ ಘಾಟಿಯಲ್...
04-02-26 06:59 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ; ಎಸ್ಐಟಿ ತನಿಖಾ...
04-02-26 12:29 pm
ಕುಂಬಳೆ ಟೋಲ್ ಗೇಟ್ ರದ್ದು ; ವ್ಯಾಪಕ ಜನವಿರೋಧ ಹಿನ್ನ...
03-02-26 11:14 pm
03-02-26 01:05 pm
HK News Desk
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm