ಬ್ರೇಕಿಂಗ್ ನ್ಯೂಸ್
09-06-22 09:20 pm HK News Desk ಕ್ರೈಂ
ಕಾರವಾರ, ಜೂನ್ 9: ಮುಂಬೈನಿಂದ ಮಂಗಳೂರಿಗೆ ರೈಲಿನಲ್ಲಿ ಹವಾಲಾ ರೂಪದಲ್ಲಿ ತರುತ್ತಿದ್ದ ಎರಡು ಕೋಟಿ ರೂ. ನಗದನ್ನು ರೈಲ್ವೇ ಪೊಲೀಸರು ಕಾರವಾರದಲ್ಲಿ ಪತ್ತೆ ಮಾಡಿದ್ದಾರೆ.
ರೈಲು ಸಂಖ್ಯೆ - 12133 ಮುಂಬೈ ಛತ್ರಪತಿ ಶಿವಾಜಿ ಟರ್ಮಿನಲ್- ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಕಾರಣಕ್ಕೆ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ರೈಲ್ವೇ ಟಿಕೆಟ್ ಪರೀಕ್ಷಕರು ವಿಚಾರಿಸಿದರೂ ಸರಿಯಾಗಿ ಉತ್ತರಿಸದೇ ಇದ್ದಾಗ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲು ಕಾರವಾರ ನಿಲ್ದಾಣಕ್ಕೆ ಬಂದಾಗ ವ್ಯಕ್ತಿಯ ಜೊತೆಗಿದ್ದ ಬ್ಯಾಗ್ ತಪಾಸಣೆ ನಡೆಸಿದ್ದು, ಅದರಲ್ಲಿ ಬರೋಬ್ಬರಿ 2 ಕೋಟಿ ರೂ. ಭಾರತೀಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿ 22 ವರ್ಷದ ಚೇನ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ರಾಜಸ್ಥಾನದ ಜಲೋರ್ ನಗರದ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ. ಬ್ಯಾಗ್ ತೆರೆಯಲು ಹೇಳಿದಾಗ, ಮೊದಲು ನಿರಾಕರಿಸಿದ್ದು ನಂತರ ಬ್ಯಾಗಿನಲ್ಲಿ ದುಡ್ಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ, ಮುಂಬೈನ ಭರತ್ ಭಾಯ್ ಅಲಿಯಾಸ್ ಪಿಂಟು ಎಂಬಾತನ ಬಳಿ ರೂ.15,000 ಮಾಸಿಕ ವೇತನಕ್ಕೆ ಕೆಲಸ ಮಾಡುತ್ತಿದ್ದು, ಹಣವನ್ನು ಮಂಗಳೂರಿನ ರಾಜ್ ಎನ್ನುವವರಿಗೆ ತಲುಪಿಸಲು ಒಯ್ಯುತ್ತಿದ್ದೇನೆ ಎಂದು ತಿಳಿಸಿದ್ದಾನೆ.
ಜಪ್ತಿಪಡಿಸಿದ ರೂ. 2 ಕೋಟಿ ರೂಪಾಯಿ ನಗದನ್ನು ಅಗತ್ಯ ಕ್ರಮಕ್ಕಾಗಿ ಆದಾಯ ತೆರಿಗೆ ಇಲಾಖೆಯ ನಿರ್ದೇಶನದಂತೆ ಕಾರವಾರ ಗ್ರಾಮೀಣ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಅದೇ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಆರೋಪಿಯನ್ನು ಅದೇ ಠಾಣೆಗೆ ಹಸ್ತಾಂತರ ಮಾಡಲಾಗಿದೆ.
Karwar Hawala via train from Mumbai to Mangalore, two crores money seized, youth arrested. The arrested has been identified as Chin Sing (22).
22-03-26 11:44 am
HK News Staffer
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
ಪಾವಗಡ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕನ ಕಿರುಕ...
21-03-26 05:32 pm
22-03-26 03:14 pm
HK News Staffer
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
ಪ್ಯಾಲೆಸ್ತೀನಿಗರಿಗೆ ಈ ಬಾರಿ ಕಹಿಯಾಯ್ತು ಈದ್ ; ಜೆರು...
20-03-26 05:32 pm
ಲಂಡನ್ ರಸ್ತೆಯಲ್ಲಿ ಪಾನ್ ಉಗುಳಿದ ಭಾರತ ಮೂಲದ ಇಬ್ಬರ...
19-03-26 04:51 pm
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
22-03-26 05:07 pm
HK News Staffer
ರಣಮಳೆಗೆ ಮನೆಯನ್ನ ಕಳಕೊಂಡಿದ್ದ ಕೊಲ್ಯದ ಬಡ ಕುಟುಂಬಕ್...
22-03-26 02:42 pm
Rape, Sandesh PG Inspector: ಇನ್ಸ್ ಪೆಕ್ಟರ್ ಸಂ...
22-03-26 12:10 pm
ಕಲ್ಲಡ್ಕದ ಫ್ಯಾಬ್ರಿಕೇಶನ್ ಉದ್ಯಮಿ ಸುಳ್ಯದ ಲಾಡ್ಜ್ ನ...
21-03-26 08:23 pm
ಮೆಲ್ಕಾರ್ ಪೆಟ್ರೋಲ್ ಪಂಪ್ ನಲ್ಲಿ ಪಾನಮತ್ತ ಯುವಕನ ರಂ...
21-03-26 06:31 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm