ಬ್ರೇಕಿಂಗ್ ನ್ಯೂಸ್
13-02-21 02:47 pm Source: GIZBOT Manthesh ಕ್ರೀಡೆ
ಪ್ರೇಮಿಗಳ ಹಬ್ಬ ಎನಿಸಿಕೊಂಡಿರುವ ವ್ಯಾಲೆಂಟೆನ್ಸ್ ಡೇ ಬಂದೇ ಬಿಟ್ಟಿದೆ. ಪ್ರತಿ ಪ್ರೇಮಿಯ ಮನಸ್ಸು ತನ್ನ ಪ್ರೀತಿಪಾತ್ರರಿಗೆ ಸರ್ಪ್ರೈಸ್ ಆಗಿ ಒಂದೊಳ್ಳೆಯ ಉಡುಗೊರೆ ಕೊಡಲು ಕಾತರದಿಂದ ಮಿಡಿಯುತ್ತಿರುತ್ತದೆ. ಆದರೆ ಈ ಬಾರಿಯ ವ್ಯಾಲೆಂಟೆನ್ಸ್ ಡೇ ಏನಾದರೂ ವಿಶೇಷವಾಗ ಉಡುಗೊರೆ ನೀಡಬೇಕು ಎನ್ನುವ ಐಡಿಯಾಗಳು ಬಂದಿರುತ್ತವೆ. ದೈನಂದಿನ ಬಳಕೆಗೆ ಅಗತ್ಯ ಇರುವ ಟೆಕ್ ಉತ್ಪನ್ನಗಳನ್ನು ಪ್ರೀತಿಪಾತ್ರಿಗೆ ಉಡುಗೊರೆಯಾಗಿ ನೀಡಬಹುದು.
ಹೌದು, ಪ್ರೇಮಿಗಳ ಪಾಲಿಗೆ ವ್ಯಾಲೆಂಟೆನ್ಸ್ ಡೇ ಸಡಗರದ ದಿನ. ಈ ದಿನ ಪ್ರೇಮಿಗಳು ಒಲವಿನ ಉಡುಗೊರೆ ನೀಡುವ ಮೂಲಕ ಅವರ ಪ್ರೀತಿಯನ್ನು ವ್ಯಕ್ತಪಡಿಸಲು ಮುಂದಾಗುತ್ತಾರೆ. ಈ ನಿಟ್ಟಿನಲ್ಲಿ 'ವ್ಯಾಲೆಂಟೆನ್ಸ್ ಡೇ' ದಿನ ಪ್ರೇಮಿಗಳು ನೀಡುವ ಉಡುಗೊರೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಈ ದಿನದಂದು ಏನಾದರೂ ವಿಶೇಷ ಉಡುಗೊರೆ ನೀಡಬೇಕು ಎಂದು ಅಂದುಕೊಂಡಿರುವವರಿಗೆ ಇಲ್ಲಿವೆ ನೋಡಿ ಆಕರ್ಷಕ ಟೆಕ್ ಉಡುಗೊರೆಯ ಆಯ್ಕೆ.
ಸ್ಮಾರ್ಟ್ ಬ್ಯಾಂಡ್
ಇತ್ತೀಚಿಗೆ ಸ್ಮಾರ್ಟ್ ಬ್ಯಾಂಡ್ ಡಿವೈಸ್ಗಳು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತಿವೆ. ನಿಮ್ಮ ಪ್ರೀತಿ ಪಾತ್ರರಲ್ಲಿ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್ ಇಲ್ಲದಿದ್ದರೆ ವ್ಯಾಲೆಂಟೆನ್ಸ್ ಡೇ ಗೆ ಉಡುಗೊರೆಯಾಗಿ ಒಂದು ಅತ್ಯುತ್ತಮ ಬ್ಯಾಂಡ್ ನೀಡಿ. ಅಗ್ಗದ ಪ್ರೈಸ್ಟ್ಯಾಗ್ನಿಂದ ಕಾಸ್ಟಿ ಬೆಲೆಯ ವರೆಗೂ ಸದ್ಯ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್ಬ್ಯಾಂಡ್ಗಳು ಲಭ್ಯ ಇವೆ. ಶಿಯೋಮಿ ಮಿ, ಹಾನರ್, ರಿಯಲ್ಮಿ ಕಂಪನಿಗಳ ಬ್ಯಾಂಡ್ಗಳು ಅಗ್ಗದ ಬೆಲೆಯಲ್ಲಿ ಲಭ್ಯ.
ಟ್ರೆಂಡಿ ಇಯರ್ಬಡ್ಸ್
ಏಕಾಂತದಲ್ಲಿದ್ದಾಗ, ಜರ್ನಿ ಸಮಯದಲ್ಲಿ ಮ್ಯೂಸಿಕ್ ಕೇಳುವುದರಿಂದ ಮನಸಿಗೆ ಹಿತವೆನಿಸುತ್ತದೆ. ಹೀಗಾಗಿ ಬಹುತೇಕರು ಜೊತೆಗೊಂದು ಇಯರ್ಬಡ್ಸ್ ಇರಬೇಕು ಎಂದು ಬಯಸುತ್ತಾರೆ. ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಒಂದೊಳ್ಳೆಯ ಇಯರ್ಬಡ್ಸ್ ಅನ್ನು ಉಡುಗೊರೆಯಾಗಿ ನೀಡಿರಿ. ಸಾಕಷ್ಟು ಹೆಡ್ಫೋನ್ ಆಯ್ಕೆಗಳು ಲಭ್ಯ ಇವೆ. ಅವುಗಳಲ್ಲಿ ಸೋನಿ, ಜೆಬಿಎಲ್, ಬೋಟ್, ಶಿಯೋಮಿ, ರಿಯಲ್ ಮಿ, ಒನ್ಪ್ಲಸ್, ಸಂಸ್ಥೆಗಳ ಇಯರ್ಬಡ್ಸ್ ಆಕರ್ಷಕ ಅನಿಸಲಿವೆ.
ಆಕರ್ಷಕ ಪೆನ್ಡ್ರೈವ್ ಡಿವೈಸ್
ಪೆನ್ಡ್ರೈವ್ ನೋಡಲು ಅತೀ ಚಿಕ್ಕದಾಗಿದ್ದರು ಅತ್ಯಂತ ಮುಖ್ಯವಾದ ದತ್ತಾಂಶಗಳನ್ನು ತನ್ನಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತದೆ. ಫೋಟೋಗಳನ್ನು, ವಿಡಿಯೋಗಳನ್ನು, ನೋಟ್ಸ್, ಆಫೀಸ್ ಫೈಲ್ಸ್ ಹೀಗೆ ಹಲವು ದತ್ತಾಂಶಗಳನ್ನು ಇರಿಸಿಕೊಳ್ಳಲು ಇದು ನಿಮ್ಮ ಪ್ರೀತಿ ಪಾತ್ರರಿಗೆ ನೆರವಾಗುತ್ತದೆ. ಇದರಲ್ಲಿ 4GB, 8GB, 16GB, 32GB ಇನ್ನೂ ಹೆಚ್ಚಿನ ಸಂಗ್ರಹ ಸಾಮರ್ಥ್ಯದ ಪೆನ್ಡ್ರೈವ್ಗಳು ಸಿಗುತ್ತವೆ. ಮತ್ತು ವಿವಿಧ ಡಿಸೈನ್ಗಳಲ್ಲಿಯೂ ಲಭ್ಯ ಇವೆ.
ಸ್ಮಾರ್ಟ್ ವಾಚ್
ವ್ಯಾಲೆಂಟೆನ್ಸ್ ಡೇ ದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಸ್ಮಾರ್ಟ್ವಾಚ್ ಒಂದನ್ನು ಉಡುಗೊರೆಯಾಗಿ ನೀಡಬಹುದು. ಪ್ರಸ್ತುತ ಸ್ಮಾರ್ಟ್ವಾಚ್ಗಳಲ್ಲಿ ಹಲವು ಆಯ್ಕೆಗಳಿದ್ದು, ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೂ ಸ್ಮಾರ್ಟ್ವಾಚ್ ಸಿಗುತ್ತವೆ. ಬೆಲೆಯಲ್ಲಿ ಭಿನ್ನತೆ ಇರುವಂತೆ ಸ್ಮಾರ್ಟ್ವಾಚ್ಗಳ ಫೀಚರ್ಸ್ಗಳಲ್ಲಿಯೂ ಭಿನ್ನತೆಗಳಿವೆ.
ಪವರ್ ಬ್ಯಾಂಕ್
ನಿಮ್ಮ ಪ್ರೀತಿ ಪಾತ್ರರ ಬಳಿ ಈಗಾಗಲೇ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ, ಆದರೆ ಪವರ್ಬ್ಯಾಂಕ್ ಇಲ್ಲದಿದ್ದರೇ ಒಂದು ಉತ್ತಮ ಪವರ್ ಬ್ಯಾಂಕ್ ಉಡುಗೊರೆ ನೀಡಿರಿ. ಕೆಲವೊಂದು ಸಂದರ್ಭಗಳಲ್ಲಿ ಅವರ ಸ್ಮಾರ್ಟ್ಫೋನ್ ಚಾರ್ಜ್ ಖಾಲಿ ಆದಾಗ ನೀವು ಕೊಟ್ಟ ಪವರ್ಬ್ಯಾಂಕ್ ಅವರಿಗೆ ನೆರೆವಾಗಬಹುದು. ಶಿಯೋಮಿ, ರಿಯಲ್ ಮಿ, ಲೆನೊವೊ, ಸಿಸ್ಕಾ, ಸಂಸ್ಥೆಗಳ ಪವರ್ಬ್ಯಾಂಕ್ ಗಳು ಬಜೆಟ್ ಬೆಲೆಯಲ್ಲಿ ಸಿಗುತ್ತವೆ.
This News Article is a Copy of GIZBOT
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm