ಬ್ರೇಕಿಂಗ್ ನ್ಯೂಸ್
15-01-21 03:32 pm Source: MYKHEL ಕ್ರೀಡೆ
ಗೋವಾ,ಜನವರಿ 15 : ಜಾರ್ಜ್ ಆರ್ಟಿಜ್ ಮೆಂಡೊನ್ಸಾ ( 19 ಮತ್ತು 52ನೇ ನಿಮಿಷ) ಮತ್ತು ಐವಾನ್ ಗ್ಯಾರಿಡೊ ಗೊನ್ಸಾಲೀಸ್ (89ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ಎಫ್ ಸಿ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಿತು. ಗೋವಾದ ಗೋಲ್ ಕೀಪರ್ ನವೀನ್ ಕುಮಾರ್ ಅವರು ಉತ್ತಮ ರೀತಿಯಲ್ಲಿ ಗೋಲ್ ಕೀಪಿಂಗ್ ಮಾಡಿದುದರ ಪರಿಣಾಮ ಜೆಮ್ಷೆಡ್ಪುರ ತಂಡ ಗೋಲು ಗೋಲಿನ ಖಾತೆ ತೆರೆಯುವಲ್ಲಿ ವಿಫಲವಾಯಿತು.
13 ಅಂಕಗಳನ್ನು ಗಳಿಸಿ ಜೆಮ್ಷೆಡ್ಪುರ ಏಳನೇ ಸ್ಥಾನಕ್ಕೆ ಕುಸಿಯಿತು. ದ್ವಿತಿಯಾರ್ಧದಲ್ಲೂ ಮೆಂಡೊನ್ಸಾ ಮಿಂಚು: 52ನೇ ನಿಮಿಷದಲ್ಲಿ ಜಾರ್ಜ್ ಮೆಂಡೊನ್ಸಾ ಗಳಿಸಿದ ವೈಯಕ್ತಿಕ ಎರಡನೇ ಗೋಲು ಗೋವಾ ತಂಡಕ್ಕೆ ಗೆಲ್ಲಲು ಅಗತ್ಯವಿರುವ ವೇದಿಕೆ ಸೃಷ್ಟಸಿತು. ಬ್ರೆಂಡಾನ್ ಫೆರ್ನಾಂಡೀಸ್ ನೀಡಿದ ಪಾಸ್ ಮೂಲಕ ಮೆಂಡೊನ್ಸಾ ಗಳಿಸಿದ ಈ ಗೋಲನ್ನು ತಡೆಯವಲ್ಲಿ ಟಾಟಾ ಪಡೆಯ ಗೋಲ್ ಕೀಪರ್ ಟಿಪಿ ರೆಹನೇಶ್ ವಿಫಲರಾದರು. ಆಟದ ಕಾವು ಏರುತ್ತಿದ್ದಂತೆ ಇತ್ತಂಡಗಳ ಆಟಗಾರರು ಕೆಲ ಹೊತ್ತು ಮಾತಿನ ಚಕಚಕಿಗೆ ಇಳಿದ ಪರಿಣಾಮ ಇಬ್ಬರು ಆಟಗಾರರು ಹಳದಿ ಕಾರ್ಡ್ ಗಳಿಸಬೇಕಾಯಿತು.
ಮೆಂಡೊನ್ಸಾ ನೀಡಿದ ಮುನ್ನಡೆ
ಮೂರನೇ ಸ್ಥಾನ ತಲುಪಲು ಇದು ಸೂಕ್ತ ಸಮಯ ಎಂದು ಅರಿತ ಗೋವಾದ ಆಟಗಾರರು ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮನಮಾಡಿದರು, ಪರಿಣಾಮ 19ನೇ ನಿಮಿಷದಲ್ಲಿ ಜಾರ್ಜ್ ಮೆಂಡೋನ್ಸಾ ಗಳಿಸಿದ ಗೋಲಿನಿಂದ ಗೋವಾಕ್ಕೆ ಅಮೂಲ್ಯ ಮುನ್ನಡೆ ಲಭಿಸಿತು. ಜಾರ್ಜ್ ಮೆಂಡೊನ್ಸಾ ಗಳಿಸಿದ ಗೋಲು ಗೋವಾದ ಪ್ರಥಮಾರ್ಧದ ಮುನ್ನಡೆಗೆ ಕಾರಣವಾಯಿತು.
ಮೂರನೇ ಸ್ಥಾನಕ್ಕಾಗಿ ಸೆಣಸು
ಫಟೋರ್ಡಾ ಅಂಗಣದಲ್ಲಿ ಎಫ್ ಸಿ ಗೋವಾ ಮತ್ತು ಜೆಮ್ಷೆಡ್ಪುರ ತಂಡಗಳು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಖಾಮುಖಿಯಾದವು. ನಾಲ್ಕನೇ ಸ್ಥಾನದಲ್ಲಿರುವ ಗೋವಾ ಇನ್ನೊಂದು ಅಂಕ ಗಳಿಸಿದರೆ ಮೂರನೇ ಸ್ಥಾನ ತಲುಪಲಿದೆ. ಜುವಾನ್ ಫೆರಾಂಡೋ ಪಡೆ ಹಿಂದಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಐಗರ್ ಆಂಗುಲೋ ದ್ವಿತಿಯಾರ್ಧದಲ್ಲಿ ಎರಡೂ ಗೋಲುಗಳನ್ನು ಗಳಿಸಿದ್ದರು. ಫೆರಾಂಡೋ ಪಡೆ ಹೆಚ್ಚಿನ ಪಂದ್ಯಗಳಲ್ಲಿ ದ್ವಿತಿಯಾರ್ಧದಲ್ಲಿ ಗೋಲು ಗಳಿಸಿ ಪಂದ್ಯವನ್ನು ಗೆದ್ದಿತ್ತು. 13 ಗೋಲುಗಳಲ್ಲಿ ತಂಡ 9 ಗೋಲುಗಳನ್ನು ದ್ವಿತಿಯಾರ್ಧದಲ್ಲಿ ಗಳಿಸಿತ್ತು.
ಜೆಮ್ಷೆಡ್ಪುರ ವಿರುದ್ಧ ಗೆದ್ದರೆ 3ನೇ ಸ್ಥಾನ
ಗೋವಾ 10 ಪಂದ್ಯಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಕ್ಲೀನ್ ಶೀಟ್ ಸಾಧನೆ ಮಾಡಿತ್ತು. ಜೆಮ್ಷೆಡ್ಪುರ ಎಫ್ ಸಿ ಜಯ ಗಳಿಸಿದರೆ ಮೂರನೇ ಸ್ಥಾನ ತಲುಪಲಿದೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ 2-3 ಅಂತರದಲ್ಲಿ ಸೋಲು ಅನುಭವಿಸಿತ್ತು. ದ್ವಿತಿಯಾರ್ಧದಲ್ಲಿ ರೆಡ್ ಮೈನರ್ಸ್ ಪಡೆ ಕೇರಳ 10 ಮಂದಿ ಆಟಗಾರರನ್ನೊಳಗೊಂಡಿದ್ದಾಗ 2 ಗೋಲುಗಳನ್ನು ಗಳಿಸಿತ್ತು. ಜೆಮ್ಷೆಡ್ಪುರ ಎಫ್ ಸಿ ತಂಡದ ಜೆರಿಜಸ್ ವಾಸ್ಕಿಸ್ ಹಾಗೂ ಗೋವಾದ ಐಗರ್ ಆಂಗುಲೊ ಗೋಲ್ಡನ್ ಪೂಟ್ ಸ್ಪರ್ಧೆಯಲ್ಲಿರುವ ಆಟಗಾರರು. ಇಬ್ಬರೂ ಅನುಕ್ರಮವಾಗಿ 8 ಮತ್ತು 9 ಗೋಲುಗಳನ್ನು ಗಳಿಸಿರುತ್ತಾರೆ. ಲೀಗ್ ನಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸುತ್ತಿರುವ ತಂಡಗಳು ಇಲ್ಲಿ ಜಯವನ್ನೇ ಗುರಿಯಾಗಿಸಿಕೊಂಡು ಅಂಗಣಕ್ಕಿಳಿದವು.
This News Article is a Copy of MYKHEL
14-10-25 11:24 am
HK News Desk
CM Siddaramaiah, DK Shivakumar:ಶಾಸಕರ ಬೆಂಬಲವಿಲ...
13-10-25 10:09 pm
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
14-10-25 11:22 am
HK News Desk
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
Ex-IAS Officer Kannan Gopinathan, Congress: ಜ...
13-10-25 10:37 pm
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
14-10-25 11:19 am
Mangalore Correspondent
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm