ಬ್ರೇಕಿಂಗ್ ನ್ಯೂಸ್
31-01-23 01:04 pm Source: news18 ಕ್ರೀಡೆ
ಭಾರತ ತಂಡದಿಂದ ಅವಕಾಶ ವಂಚಿತರಾಗಿದ್ದ ಆರಂಭಿಕ ಬ್ಯಾಟರ್ ಮುರಳಿ ವಿಜಯ್ ಸೋಮವಾರದಂದು ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷ ವಯಸ್ಸಿನ ವಿಜಯ್ 2008 ರಿಂದ 2015 ರವರೆಗೆ 7 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಸೀಮಿತ ಓವರ್ಗಳಲ್ಲಿ ಅಷ್ಟೇನು ಉತ್ತಮ ದಾಖಲೆ ಹೊಂದಿಲ್ಲದ ಮುರಳಿ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ. ವೃತ್ತಿಜೀವನದಲ್ಲಿ 61 ಟೆಸ್ಟ್, 17 ಏಕದಿನ ಮತ್ತು 9 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 12 ಶತಕ ಮತ್ತು 15 ಅರ್ಧಶತಕಗಳ ಸಹಿತ 3982 ರನ್ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್ 339 ರನ್ ಮತ್ತು ಒಂಬತ್ತು ಟಿ20 ಪಂದ್ಯಗಳಲ್ಲಿ 169 ರನ್ ಗಳಿಸಿದ್ದಾರೆ.
ತಮಿಳುನಾಡಿನ ವಿಜಯ್ 2018-19ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಲಯ ಕಳೆದುಕೊಂಡಿದ್ದ ವಿಜಯ್ ಮತ್ತೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈಗಾಗಲೇ 35 ವಯಸ್ಸು ದಾಟಿದ್ದರಿಂದ ಆಯ್ಕೆ ಸಮಿತಿ ಮುರಳಿ ವಿಜಯ್ಗೆ ಮತ್ತೆ ಅವಕಾಶವನ್ನು ನೀಡಲಿಲ್ಲ.
ಬಿಸಿಸಿಐ, ಟಿಎನ್ಸಿ, ಚೆನ್ನೈ ಸೂಪರ್ ಕಿಂಗ್ಸ್ ನನಗೆ ನೀಡಿದ ಅವಕಾಶಗಳಿಗೆ ನಾನು ಆಭಾರಿಯಾಗಿದ್ದೇನೆ. ನನ್ನೆಲ್ಲಾ ಸಹಾ ಆಟಗಾರರಿಗೆ, ಕೋಚ್ಗಳಿಗೆ ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದಗಳು. ನಿಮ್ಮೆಲ್ಲರ ಜೊತೆಗೆ ಆಡುವ ಅವಕಾಶ ಸಿಕ್ಕಿದ್ದು ನನಗೆ ಲಭ್ಯವಾದ ಬಹುದೊಡ್ಡ ಗೌರವ. ನನ್ನ ಕನಸನ್ನು ನನಸನ್ನಾಗಿಸಿಕೊಳ್ಳಲು ನೆರವಾದ ಪ್ರತಿಯೊಬ್ಬರಿಗೂ ಧನ್ಯವಾದ " ಎಂದು ಮುರಳಿ ವಿಜಯ್ ತಮ್ಮ ನಿವೃತ್ತಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಡೇರ್ಡೆವಿಲ್ಸ್ ಸೇರಿದಂತೆ ಹಲವು ತಂಡಗಳನ್ನು ಪ್ರತಿನಿಧಿಸಿರುವ ಮುರಳಿ 106 ಪಂದ್ಯಗಳಿಂದ 2 ಶತಕ ಹಾಗೂ 13 ಅರ್ಧಶತಕಗಳಿಂದ 121 ರ ಸ್ಟ್ರೈಕ್ ರೇಟ್ನಲ್ಲಿ 2619ರನ್ಗಳಿಸಿದ್ದಾರೆ. ಬಿಸಿಸಿಐನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಿಸಿರುವ ಮುರಳಿ ವಿಜಯ್ ಭವಿಷ್ಯದಲ್ಲಿ ವಿದೇಶಿ ಲೀಗ್ಗಳಲ್ಲಿ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಒಪ್ಪಂದ ಇರುವ ಯಾವುದೇ ಆಟಗಾರರಿಗೆ ವಿದೇಶಿ ಫ್ರಾಂಚೈಸಿ ಲೀಗ್ಗಳಲ್ಲಿ ಆಡುವುದನ್ನ ಬಿಸಿಸಿಐ ನಿಷೇಧಿಸಿದೆ. ಒಂದು ವೇಳೆ ವಿದೇಶಿ ಲೀಗ್ಗಳಲ್ಲಿ ಆಡಬೇಕೆಂದರೆ ಎಲ್ಲಾ ಮಾದರಿಗೂ ನಿವೃತ್ತಿ ಘೋಷಿಸಬೇಕು. ಅಂತಹ ಆಟಗಾರನಿಗೆ ಭವಿಷ್ಯದಲ್ಲಿ ಯಾವುದೇ ಹುದ್ದೆ ಕೂಡ ಸಿಗುವುದಿಲ್ಲ.
ಇತ್ತೀಚೆಗಷ್ಟೇ ಮುರಳಿ ವಿಜಯ್ ಭಾರತದಲ್ಲಿ 30 ವಯಸ್ಸು ದಾಟಿದವರನ್ನು 80 ವರ್ಷ ವಯಸ್ಸಾದವರಂತೆ ನೋಡುತ್ತಾರೆ. ನನಗೆ ಈ ವಯಸ್ಸಿನಲ್ಲೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಸಾಮರ್ಥ್ಯ ನನಗಿದೆ. ಆದರೆ ನನಗೆ ಅವಕಾಶ ಸಿಗುತ್ತಿಲ್ಲ ಎಂದು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು
Indian Batter Murali Vijay Announces Retirement from International Cricket.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm