ಬ್ರೇಕಿಂಗ್ ನ್ಯೂಸ್
30-05-26 09:52 pm HK News Desk ಕರಾವಳಿ
ಮಂಗಳೂರು, ಮೇ 30: ಮಂಗಳೂರು ಬಂದರು ಪ್ರಾಧಿಕಾರದ ಆಶ್ರಯಲ್ಲಿ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನ ಏಳನೇ ಆವೃತ್ತಿ ಶುಕ್ರವಾರ ಮಂಗಳೂರಿನ ಬ್ಲೂ ಬೇ ತಣ್ಣೀರುಬಾವಿ ಇಕೋ ಬೀಚ್ನಲ್ಲಿ ಆರಂಭವಾಯಿತು. ಜಪಾನ್ ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ ಆಯ್ಕೆಯ ಪೂರ್ವಭಾವಿಯಾಗಿ ನಡೆದ ಈ ಪಂದ್ಯಾಟದಲ್ಲಿ ಉತ್ತಮ ಸಾಧನೆ ತೋರಿದ ಸರ್ಫರ್ ಗಳು ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಲಿದ್ದಾರೆ.
ಮುಂದಿನ ಸೆಪ್ಟೆಂಬರ್ ತಿಂಗಳು ಜಪಾನ್ ನಲ್ಲಿ ನಡೆಯುವ ಏಷ್ಯನ್ ಗೇಮ್ಸ್ ನಲ್ಲಿ ಸರ್ಫರ್ ಗಳಿಗೆ ಅನುಕೂಲವಾಗಿಸಲು ಮಂಗಳೂರಿನ ತಣ್ಣೀರುಬಾವಿ ಬ್ಲೂ ಬೇ ಬೀಚ್ ನಲ್ಲಿ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಮೇ 29 ರಂದು ಆರಂಭಗೊಂಡಿದ್ದು 31 ರ ವರೆಗೆ ನಡೆಯಲಿದ್ದು, ದೇಶದ 80 ಕ್ಕೂ ಮಿಕ್ಕಿದ ಸರ್ಫರ್ ಗಳು ಪಂದ್ಯಾಟದಲ್ಲಿ ಭಾಗಿಯಾಗಿದ್ದಾರೆ. ನವ ಮಂಗಳೂರು ಬಂದರು ಪ್ರಾಧಿಕಾರ, ರಾಷ್ಟ್ರೀಯ ಸರ್ಫಿಂಗ್ ಸಂಸ್ಥೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಹಲವು ಸಂಘ- ಸಂಸ್ಥೆಗಳ ಆಶ್ರಯಲ್ಲಿ ಸರ್ಫಿಂಗ್ ನಡೆಯುತ್ತಿದ್ದು, ರಾಷ್ಟ್ರೀಯ ಮಟ್ಟದ ಪ್ರಮುಖ 20 ಸರ್ಫರ್ ಗಳು ಭಾಗವಹಿಸುತ್ತಿದ್ದಾರೆ. 18 ವರ್ಷ ಕೆಳಗಿನ ಬಾಲಕಿಯರ, ಬಾಲಕರ, 18 ವರ್ಷ ವಯೋಮಾನದ ಮೇಲಿನ ಮಹಿಳೆ ಮತ್ತು ಪುರುಷ ಹಾಗು ಮಹಿಳಾ ಮತ್ತು ಪುರುಷರ ಓಪನ್ ವಿಭಾಗಗಳು ಈ ಪಂದ್ಯಾಟದಲ್ಲಿದೆ.




ಮಹಿಳಾ ಓಪನ್ ವಿಭಾಗದಲ್ಲಿ, ಕಮಲಿ ಮೂರ್ತಿ, ಶುಗರ್ ಶಾಂತಿ ಬನಾರ್ಸೆ, ಇಶಿತಾ ಮಾಳವಿಯಾ, ದೇವಿ ರಾಮನಾಥನ್, ಸಾನ್ವಿ ಹೆಗ್ಡೆ ಮತ್ತು ಸೃಷ್ಟಿ ಸೆಲ್ವಂ ಅವರು ಮೇ 31ರಂದು ನಡೆಯಲಿರುವ ಸೆಮಿಫೈನಲ್ಗೆ ಮುನ್ನಡೆದಿದ್ದಾರೆ. ಪುರುಷರ ಓಪನ್ ವಿಭಾಗವು 12 ಹೀಟ್ಗಳಲ್ಲಿ ತನ್ನ ಆರಂಭಿಕ ಸುತ್ತನ್ನು ಪೂರ್ಣಗೊಳಿಸಿದರೆ, ಮಹಿಳಾ ಓಪನ್ ಸ್ಪರ್ಧೆ ಕ್ವಾರ್ಟರ್-ಫೈನಲ್ ಹಂತವನ್ನು ದಾಟಿದೆ. ಜೂನಿಯರ್ ವಿಭಾಗಗಳು ಸಹ ತೀವ್ರ ಸ್ಪರ್ಧೆಗೆ ಸಾಕ್ಷಿಯಾಗಿತ್ತು. 18 ವರ್ಷದೊಳಗಿನ ಬಾಲಕರ ವಿಭಾಗವು ತನ್ನ ಆರಂಭಿಕ ಸುತ್ತಿನ ಹೀಟ್ಗಳಲ್ಲಿ ಸ್ಪರ್ಧಿಸಿದ್ದು, ಹೊಸದಾಗಿ ಪರಿಚಯಿಸಲಾದ 14 ವರ್ಷದೊಳಗಿನ ಬಾಲಕರ ವಿಭಾಗವು ಕ್ವಾರ್ಟರ್ ಫೈನಲ್ ಗೆ ಮುನ್ನಡೆದಿದೆ.
ಪುರುಷರ ಓಪನ್ ವಿಭಾಗದಲ್ಲಿ 45 ಸರ್ಫರ್ಗಳು ಅರ್ಹತೆಗಾಗಿ ನಡೆದ 12 ಹೀಟ್ಗಳಲ್ಲಿ ಸ್ಪರ್ಧಿಸಿದರು. ಪ್ರತಿ ಹೀಟ್ನಿಂದ ಅಗ್ರ ಎರಡು ಸರ್ಫರ್ಗಳು ನಿಗದಿಯಾಗಿದ್ದ 2 ನೇ ಸುತ್ತಿಗೆ ಮುನ್ನಡೆದಿದ್ದಾರೆ. ಮಹಿಳಾ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ತಮಿಳುನಾಡಿನ ಕಮಲಿ ಮೂರ್ತಿ 13.83 ಸ್ಕೋರ್ನೊಂದಿಗೆ ದಿನದ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದರು. ಗೋವಾದ ಶುಗರ್ ಶಾಂತಿ ಬನಾರ್ಸೆ 11.00 ಸ್ಕೋರ್ನೊಂದಿಗೆ ಉತ್ತಮ ಸ್ಪರ್ಧೆ ನೀಡಿದ್ದಾರೆ. ಇಬ್ಬರೂ ಸರ್ಫರ್ಗಳು ಸವಾಲಿನ ಪರಿಸ್ಥಿತಿಗಳಲ್ಲಿ ತಮ್ಮ ಪ್ರದರ್ಶನ ಮತ್ತು ಕುಶಲ ಕೌಶಲ್ಯದಿಂದ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನಗಳನ್ನು ಖಚಿತಪಡಿಸಿಕೊಂಡಿದ್ಧಾರೆ.
ಸೆಮಿಫೈನಲ್ನಲ್ಲಿ ಇಶಿತಾ ಮಾಳವೀಯ (6.40), ದೇವಿ ರಾಮನಾಥನ್ (5.90), ಸಾನ್ವಿ ಹೆಗ್ಡೆ (5.37) ಮತ್ತು ಸೃಷ್ಟಿ ಸೆಲ್ವಂ (5.33) ಭಾಗವಹಿಸಿದ್ದರು. ಸರ್ಫಿಂಗ್ ಜೂನಿಯರ್ಸ್ ಅಂಡರ್-18 ಬಾಲಕರ ವಿಭಾಗದಲ್ಲಿಯೂ ಅತ್ಯಾಕರ್ಷಕ ಪ್ರದರ್ಶನ ಕಂಡುಬಂದಿದ್ದು, ಕ್ವಾರ್ಟರ್ ಫೈನಲ್ಗೆ ತಲುಪಲು ಆರು ಹೀಟ್ಗಳಲ್ಲಿ 19 ಸರ್ಫರ್ಗಳು ಸ್ಪರ್ಧಿಸಿದ್ದರು. ಅರ್ಹತೆ ಪಡೆದ ಸರ್ಫರ್ಗಳಲ್ಲಿ ಹರೀಶ್ ಪಿ (12.67), ತಯಿನ್ ಅರುಣ್ (10.33), ಸೋಮ್ ಸೇಥಿ (9.93), ಪ್ರದೀಪ್ ಪೂಜಾರ್ (9.07), ಪ್ರಹ್ಲಾದ್ ಶ್ರೀರಾಮ್ (8.60), ಶೇಕ್ ದಾವೂದ್ ಎಸ್ (6.93), ಯೋಗೇಶ್ ಎ (6.33), ರಾಜು ಸುರೇಶ್ ಪೂಜಾರ್ (5.63), ಪ್ರವೀಣ್ ಪೂಜಾರ್ (4.40), ಹರುಸ್ ಮೊಹೈಯದೀನ್ (3.63), ಸಂಕು ಕಾರ್ತೇಕ್ (3.07) ಮತ್ತು ಆಕಾಶ್ ಪೂಜಾರ್ (2.57) ಸೇರಿದ್ದಾರೆ.
ಹೊಸದಾಗಿ ಪರಿಚಯಿಸಲಾದ ಸರ್ಫಿಂಗ್ ಜೂನಿಯರ್ಸ್ ಅಂಡರ್-14 ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಹರೀಶ್ ಪಿ (11.33), ಶೇಕ್ ದಾವೂದ್ ಎಸ್ (6.67), ಯೋಗೇಶ್ ಎ (6.50), ಪ್ರಹ್ಲಾದ್ ಶ್ರೀರಾಮ್ (5.43), ಪ್ರಶಾಂತ್ (4.53), ಮುಖೇಶ್ (3.70), ಲಿಖಿತ್ ಸಾಲಿಯನ್ (2.67) ಮತ್ತು ಇಶಾಂತ್ ಕೆ. ಸತೀಶ್ (2.07) ಭಾಗವಹಿಸಿದ್ದಾರೆ.
The seventh edition of the Indian Open of Surfing commenced on Friday at Blue Bay, Tannirbhavi Eco Beach in Mangaluru under the aegis of the New Mangalore Port Authority (NMPA). The championship serves as a key selection event for surfers aspiring to represent India at the upcoming Asian Games in Japan.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am