ಬ್ರೇಕಿಂಗ್ ನ್ಯೂಸ್
16-01-23 01:06 pm Source: news18 ಕ್ರೀಡೆ
ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ತಿರುವನಂತಪುರಂ ಏಕದಿನ ಪಂದ್ಯದಲ್ಲಿ, ಅಭಿಮಾನಿಗಳು ಮತ್ತೊಮ್ಮೆ ಅದೇ ಆಕ್ರಮಣಕಾರಿ ಕೊಹ್ಲಿಯನ್ನು ನೋಡಿದರು, ಅವರ ಬ್ಯಾಟ್ನಲ್ಲಿ ರನ್ ಮಳೆಯೇ ಸುರಿಯಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ರನ್ ಗಳಿಸಿದ್ದು ವಿಶೇಷವಾಗಿತ್ತು.
ವಿರಾಟ್ ಕೊಹ್ಲಿ 110 ಎಸೆತಗಳಲ್ಲಿ 166 ರನ್ ಗಳಿಸಿದರು. ಈ ವೇಳೆ ವಿರಾಟ್ ಬ್ಯಾಟ್ನಿಂದ 13 ಬೌಂಡರಿ ಮತ್ತು 8 ಸಿಕ್ಸರ್ಗಳನ್ನು ಹೊರಬಂದಿವೆ. ಶತಕ ಪೂರೈಸಲು ವಿರಾಟ್ 85 ಎಸೆತಗಳನ್ನು ಎದುರಿಸಿದರು. ಇದರ ನಂತರ, ಅವರು ಉಳಿದ 25 ಎಸೆತಗಳಲ್ಲಿ 66 ರನ್ ಗಳಿಸಿದರು.
ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳುವುದರ ಹಿಂದೆ ಅವರ 15 ಸಂಖ್ಯೆಯ ಸಿಕ್ರೇಟ್ ವಿಶೇಷ ಕೊಡುಗೆಯನ್ನು ಹೊಂದಿದೆ. ಜನವರಿ 15ರ ದಿನಾಂಕ ವಿರಾಟ್ ಕೊಹ್ಲಿಗೆ ಬಹಳ ವಿಶೇಷ ದಿನ. ಶ್ರೀಲಂಕಾ ತಂಡಕ್ಕಿಂತ ಮೊದಲು, ವಿರಾಟ್ ಈ ದಿನಾಂಕದಂದು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧವೂ ಶತಕ ಗಳಿಸಿದ್ದಾರೆ. ಜನವರಿ 15 ರಂದು ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದು ಇದು ನಾಲ್ಕನೇ ಬಾರಿ.
2017ರಲ್ಲಿ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಜನವರಿ 15 ರಂದು ಶತಕ ಸಿಡಿಸಿದ್ದರು. ಈ ವೇಳೆ 122 ರನ್ಗಳ ಇನಿಂಗ್ಸ್ ಆಡಿದ್ದರು. ಈ ಪಂದ್ಯದಲ್ಲಿ ಭಾರತ 357 ರನ್ಗಳ ಗುರಿ ನೀಡಿತ್ತು. ಆದರೆ, ಇದರ ಹೊರತಾಗಿಯೂ ತಂಡ ಕೇವಲ ಮೂರು ರನ್ಗಳಿಂದ ಜಯಗಳಿಸಿತು.
ಇದಾದ ನಂತರ ಮುಂದಿನ ವರ್ಷ 2018ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿತ್ತು. ನಂತರ ಟೆಸ್ಟ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಈ ದಿನ ವಿರಾಟ್ ಕೊಹ್ಲಿ 153 ರನ್ ಗಳ ಇನ್ನಿಂಗ್ಸ್ ಆಡಿದ್ದರು. ವಿರಾಟ್ ಅದ್ಭುತ ಪ್ರದರ್ಶನದ ಹೊರತಾಗಿಯೂ ಈ ಪಂದ್ಯದಲ್ಲಿ ಟೀಂ ಇಂಡಿಯಾ 135 ರನ್ ಗಳಿಂದ ಸೋಲು ಕಂಡಿತ್ತು.
ಇದರ ನಂತರ ವಿರಾಟ್ 15 ಜನವರಿ 2019ರಂದು ಮತ್ತೊಂದು ದೊಡ್ಡ ದಾಖಲೆಯನ್ನು ಮಾಡಿದರು. ಆಗ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿತ್ತು. ವಿರಾಟ್ ಕೊಹ್ಲಿ ಅಡಿಲೇಡ್ ಮೈದಾನದಲ್ಲಿ ಆತಿಥೇಯರ ವಿರುದ್ಧ 104 ರನ್ಗಳ ಇನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ಗಳ ಜಯ ಸಾಧಿಸಿತ್ತು.
ಭಾರತ ತಂಡವು ಶ್ರೀಲಂಕಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 317 ರನ್ಗಳಿಂದ ದೊಡ್ಡ ಗೆಲುವು ದಾಖಲಿಸಿದೆ. 391 ರನ್ಗಳ ಬೃಹತ್ ಗುರಿಯ ಮುಂದೆ ಶ್ರೀಲಂಕಾ ತಂಡ ಸಂಪೂರ್ಣ ಛಿದ್ರವಾಯಿತು. ಈ ಪಂದ್ಯದಲ್ಲಿ ದಾಸುನ್ ಶನಕ ಬಳಗ 73 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್ ಗರಿಷ್ಠ 4 ವಿಕೆಟ್ ಪಡೆದರು.
ಅಲ್ಲದೇ ಲಂಕಾ ವಿರುದ್ಧ ಯುವ ಆಗಟಾರ ಶುಭ್ಮನ್ ಗಿಲ್ ಸಹ ಆಕರ್ಷಕ ಶತಕ ಸಿಡಿಸಿದರು. ಶ್ರೀಲಂಕಾ ವಿರುದ್ಧದ 317 ರನ್ಗಳ ದೊಡ್ಡ ಗೆಲುವಿನ ಮೂಲಕ ಟೀಂ ಇಂಡಿಯಾ ವಿಶ್ವ ಕ್ರಿಕೆಟ್ನಲ್ಲಿ ದೊಡ್ಡ ಮೊತ್ತದ ಗೆಲುವು ಸಾಧಿಸಿದ ಅಗ್ರ ತಂಡವಾಗಿ ಹೊರಹೊಮ್ಮಿದೆ.
IND vs SL 3rd odi Virat Kohli scored 4 centuries on 15 january.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm