ಬ್ರೇಕಿಂಗ್ ನ್ಯೂಸ್
22-04-22 05:27 pm Mangalore Correspondent ಕರಾವಳಿ
ಮಂಗಳೂರು, ಎ.22: 16 ವರ್ಷದ ಸಣ್ಣ ಹುಡುಗನನ್ನು ಒಬ್ಬಂಟಿಯಾಗಿಯೇ ಅಜ್ಜಿ ಮನೆಗೆಂದು ತಂದೆ ರೈಲಿನಲ್ಲಿ ಕಳಿಸಿಕೊಟ್ಟಿದ್ದರು. ಜೊತೆಗೆ, ಅಗತ್ಯಕ್ಕೆ ಇರಲೆಂದು ಫೋನನ್ನೂ ಕೊಟ್ಟಿದ್ದರು. ಆದರೆ ಬೆಳಗ್ಗೆ 5 ಗಂಟೆಗೆ ರೈಲಿನಲ್ಲಿ ಹೊರಟಿದ್ದ ಮಗನನ್ನು ವಿಚಾರಿಸಲು ತಂದೆ ಹತ್ತು ಗಂಟೆ ವೇಳೆಗೆ ಕರೆ ಮಾಡಿದ್ರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಇನ್ನೇನು ಮಾಡೋದು ಅಂತ ತಂದೆ ಕಿಶನ್ ರಾವ್ ನೇರವಾಗಿ ರೈಲ್ವೇ ಸಚಿವರಿಗೆ ಟ್ವೀಟ್ ಮಾಡಿದ್ದರು. ಟ್ವೀಟ್ ನೋಡಿ ತುರ್ತಾಗಿ ರೈಲ್ವೇ ಅಧಿಕಾರಿಗಳು ಸ್ಪಂದಿಸಿದ್ದು ಜಾಲತಾಣದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಹೀಗೊಂದು ರೀತಿಯ ಅಚಾನಕ್ ಘಟನೆಯಿಂದಾಗಿ ತಂದೆ-ತಾಯಿ ಗಾಬರಿಗೊಳಗಾದ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ. ತಂದೆ ಕಿಶನ್ ರಾವ್ ಮಂಗಳೂರಿನಲ್ಲಿ ಆಟೊಮೊಬೈಲ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದು, ಮಗ ಶಂತನು ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರೈಸಿದ ಬಳಿಕ ಕೇರಳದ ಕೊಟ್ಟಾಯಂ ಬಳಿಯ ಅಜ್ಜಿ ಮನೆಗೆ ಹೋಗಲು ಇಚ್ಚೆಪಟ್ಟಿದ್ದ. ಅದರಂತೆ, ಮೊನ್ನೆ ಎ.19ರಂದು ಬೆಳಗ್ಗೆ 5 ಗಂಟೆಗೆ ಮಂಗಳೂರಿನಿಂದ ಕೊಟ್ಟಾಯಂ ಹೋಗುವ ಪರಶುರಾಮ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮಗನನ್ನು ತಂದೆ, ತಾಯಿ ಕಳಿಸಿಕೊಟ್ಟಿದ್ದರು.

ಹುಡುಗ ಒಬ್ಬಂಟಿಯಾಗಿಯೇ ಮೊದಲ ಬಾರಿಗೆ ಪ್ರಯಾಣಿಸ್ತಿದ್ದರಿಂದ ತಂದೆ-ತಾಯಿಗೆ ಆತಂಕವೂ ಇತ್ತು. ಬೆಳಗ್ಗೆ ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಬಂದು ಹತ್ತು ಗಂಟೆ ಹೊತ್ತಿಗೆ ಮಗನಿಗೆ ಕೊಟ್ಟಿದ್ದ ಮೊಬೈಲಿಗೆ ಫೋನ್ ಮಾಡಿದ್ದಾರೆ. ಆದರೆ ಫೋನ್ ಸ್ವಿಚ್ ಆಫ್ ಆಗಿದ್ದನ್ನು ನೋಡಿ ಗಾಬರಿಗೊಂಡಿದ್ದಾರೆ. ಮತ್ತೆ ಮತ್ತೆ ಫೋನ್ ಕರೆ ಮಾಡಿದರೂ, ಅತ್ತ ಕಡೆಯಿಂದ ಅಷ್ಟೇ ಉತ್ತರ ಬರುತ್ತಿತ್ತು. ರೈಲಿನ ಟಿಟಿಯ ನಂಬರ್ ಕೂಡ ಪಡೆದಿರಲಿಲ್ಲ, ಇನ್ನೇನು ಮಾಡೋದು ಅಂತ ತಂದೆ ಕಿಶನ್ ರಾವ್ ಗಾಬರಿಗೆ ಒಳಗಾದರು. ಥಟಕ್ಕನೇ ಏನಾದರೂ ಆಗಲಿ ಅಂತ, ಮಗನ ರೈಲ್ವೇ ಟಿಕೆಟ್ ಕಾದಿರಿಸಿದ್ದ ಕಾಪಿ ಮತ್ತು ಸೀಟು ನಂಬರನ್ನು ಲಗತ್ತಿಸಿ ನೇರವಾಗಿ ರೈಲ್ವೇ ಸಚಿವ ಅಶ್ವಿನಿ ಯಾದವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಮಗನ ಫೋನ್ ಸ್ವಿಚ್ ಆಫ್ ಆಗಿದೆ, ಕೂಡಲೇ ಆತನ ಇರವಿನ ಬಗ್ಗೆ ಖಚಿತಪಡಿಸಿ ಎಂದು ಕೇಳಿಕೊಂಡಿದ್ದರು.
ರೈಲ್ವೇ ಸಚಿವಾಲಯ ಮತ್ತು ಸಚಿವರಿಗೆ ಟ್ವೀಟ್ ಮಾಡಿದ್ದರಿಂದ ಅಧಿಕಾರಿಗಳು ಕೂಡಲೇ ಗಮನಿಸಿದ್ದು, ಸದ್ರಿ ರೈಲಿನ ಕಂಪಾರ್ಟ್ಮೆಂಟಿನ ಟಿಕೆಟ್ ಚಕ್ಕರ್ ಗೆ ಸುದ್ದಿ ಮುಟ್ಟಿಸಿದ್ದಾರೆ. ಬೆಳಗ್ಗೆ 10.34ಕ್ಕೆ ಕಿಶನ್ ರಾವ್ ಟ್ವೀಟ್ ಮಾಡಿದ್ದರೆ, ಅರ್ಧ ಗಂಟೆ ಕಳೆಯುವಷ್ಟರಲ್ಲಿ ಅತ್ತಲಿಂದ ಮಗನೇ ಫೋನ್ ಕರೆ ಮಾಡಿದ್ದ. ಏನೋ ಅಪಾಯವಾಗಿದೆ ಎಂದು ಗಾಬರಿಗೊಂಡಿದ್ದ ತಂದೆ- ತಾಯಿ ಮಗನ ಫೋನ್ ಬರುತ್ತಲೇ ನಿಟ್ಟುಸಿರು ಬಿಟ್ಟಿದ್ದರು. ತಾನು ಉಷಾರಾಗಿದ್ದೇನೆ, ಏನೋ ಫೋನ್ ಕನೆಕ್ಟ್ ಆಗಿಲ್ಲ. ಸ್ವಿಚ್ ಆಫ್ ಮಾಡಿಲ್ಲ ಎಂದು ಹೇಳಿದ್ದಾನೆ. ಬೆಳಗ್ಗೆ ಹೊರಟಿದ್ದ ಪರಶುರಾಮ್ ಎಕ್ಸ್ ಪ್ರೆಸ್ ರೈಲು ಮಧ್ಯಾಹ್ನ 2.30ಕ್ಕೆ ಕೊಟ್ಟಾಯಂ ತಲುಪಿದ್ದು, ಅದಕ್ಕೂ ಮೊದಲಿನ ಪಿರವಂ ಸ್ಟೇಶನ್ನಲ್ಲಿ ಶಂತನುವನ್ನು ಸ್ವೀಕರಿಸಲು ಅಲ್ಲಿನ ಕುಟುಂಬಸ್ಥರು ಬಂದಿದ್ದರು. ಗ್ರಾಹಕರು ಮಾಡಿದ್ದ ಟ್ವೀಟಿಗೆ ತುರ್ತಾಗಿ ಸ್ಪಂದಿಸಿದ್ದ ರೈಲ್ವೇ ಸಚಿವಾಲಯಕ್ಕೆ ಕಿಶನ್ ರಾವ್ ಅಭಿನಂದಿಸಿದ್ದಾರೆ.
What was to be a memorable first solo train journey turned out to be a tension-filled day for a 16-year-old boy, who hopped on to a Mangaluru-Kerala train on a nine-and-a-half-hour journey on Tuesday morning.When the boy’s father Kishan Rao could not reach his son on the phone after five hours of journey, he panicked and immediately shot off a tweet to railway minister Ashwini Vaishnaw seeking help to know his son’s whereabouts. In exactly 34 minutes, his son Shantanu called his dad back to say all’s well.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
13-11-25 10:56 pm
HK News Desk
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ಅತಿದೊಡ್ಡ ಪಾ...
12-11-25 02:54 pm
13-11-25 07:41 pm
Mangalore Correspondent
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
13-11-25 10:09 pm
Mangalore Correspondent
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm