ಬ್ರೇಕಿಂಗ್ ನ್ಯೂಸ್
29-01-22 10:02 pm Mangalore Correspondent ಕರಾವಳಿ
ಮಂಗಳೂರು, ಜ.29 : ರಕ್ತದೊತ್ತಡ ಕಡಿಮೆಯಾಗಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಯೊಬ್ಬರನ್ನು ವೆನ್ಲಾಕ್ ಆಸ್ಪತ್ರೆಗೆ ತಂದಿದ್ದಾಗ, ಅಲ್ಲಿನ ಸಿಬಂದಿ ಕಂಪ್ಯೂಟರ್ ಗೇಮ್ ಆಡುತ್ತಾ ನಿರ್ಲಕ್ಷ್ಯ ವಹಿಸಿದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಜನವರಿ 23ರಂದು ರಾತ್ರಿ 11 ಗಂಟೆ ಸುಮಾರಿಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಮುಲ್ಕಾನೆ ಎಂಬಲ್ಲಿನ ನಿವಾಸಿ ವಿಜಯ ಆಚಾರ್ಯ (40) ಎಂಬವರನ್ನು ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಬರುವಾಗಲೇ ವ್ಯಕ್ತಿಗೆ ಪ್ರಜ್ಞೆ ತಪ್ಪಿದ್ದರಿಂದ ಆಸ್ಪತ್ರೆಯ ಸಿಬಂದಿ ಬಳಿಕ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಆನಂತರ ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಸ್ಟ್ರಚರ್ ನಲ್ಲಿ ಮಲಗಿಸಿದ್ದರೂ, ಅಲ್ಲಿಯೇ ಬಿಟ್ಟಿದ್ದಾರೆ ವಿನಾ ಆಸ್ಪತ್ರೆಗೆ ಸೇರಿಸಿಕೊಂಡಿಲ್ಲ.
ಈ ಬಗ್ಗೆ ರೋಗಿಯ ಸಂಬಂಧಿಕರು ಕೇಳಿದ್ದಕ್ಕೆ ಸೂಕ್ತ ಉತ್ತರ ನೀಡಿರಲಿಲ್ಲ. ಈ ವೇಳೆ, ರೋಗಿಯ ಸಂಬಂಧಿಕರು ಆತಂಕಗೊಂಡಿದ್ದು, ಒಂದೋ ನೀವು ಚಿಕಿತ್ಸೆ ನೀಡಿ. ಇಲ್ಲದಿದ್ದರೆ ನಾವು ಬೇರೆ ಕಡೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಅಲ್ಲಿನ ಸಿಬಂದಿ, ಅವರಿಗೆ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದ ರೀತಿ ಇದ್ದು, ಚಿಕಿತ್ಸೆ ನೀಡಲು ಇಲ್ಲಿ ಸೌಲಭ್ಯ ಇಲ್ಲ. ನೀವು ಬೇರೆ ಕಡೆಗೆ ಕೊಂಡೊಯ್ಯುವಂತೆ ಸಲಹೆ ಮಾಡಿದ್ದಾರೆ.
ರಾತ್ರಿ 11 ಗಂಟೆಗೆ ಬಂದಿದ್ದರೂ, ನಸುಕಿನ ಮೂರು ಗಂಟೆಗಳ ಕಾಲ ರೋಗಿಯನ್ನು ಸತಾಯಿಸಿದ್ದಾರೆ. ಇದಲ್ಲದೆ, ನೀವು ಹೋಗುವುದಿದ್ದರೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಹೋಗಿ. ಅಲ್ಲಿ ಐಸಿಯು ಇದೆ. ಬೇರೆ ಕಡೆಯಲ್ಲಿ ಐಸಿಯು ಇಲ್ಲ ಎಂದು ಪುಕ್ಕಟೆ ಸಲಹೆಯನ್ನೂ ನೀಡಿದ್ದಾರೆ. ಬೇಕಾದರೆ ನಾವೇ ಆಂಬುಲೆನ್ಸ್ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ರೋಗಿಯ ಸಂಬಂಧಿಕರು ಸಿಬಂದಿ ಮಾತು ಕೇಳದೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೋಗಲು ಮುಂದಾಗಿದ್ದಾರೆ. ಸಿಬಂದಿ ಮಾತ್ರ, ನೀವು ಅಲ್ಲಿ ಹೋಗಬೇಡಿ ಎಂದು ಹೆದರಿಸಿದ್ದಾರೆ.
ಆನಂತರ ರೋಗಿಯನ್ನು ರಾತ್ರಿಯೇ ಸಂಬಂಧಿಕರು ಸೇರಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದು, ಅಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ರೋಗಿಯನ್ನು ಸ್ಟ್ರಚರ್ ನಲ್ಲಿ ಮಲಗಿಸಿ, ಚಿಕಿತ್ಸೆ ನೀಡುವ ಬದಲು ಅಲ್ಲಿನ ಸಿಬಂದಿ ಕಂಪ್ಯೂಟರ್ ಗೇಮ್ ಆಡುತ್ತಿದ್ದುದನ್ನು ಸಂಬಂಧಿಕರು ಮೊಬೈಲಿನಲ್ಲಿ ಚಿತ್ರೀಕರಿಸಿದ್ದರು. ಅದನ್ನು ಹಿಂದು ಸಂಘಟನೆಯ ಕಾರ್ಯಕರ್ತರೊಬ್ಬರು ಫೇಸ್ಬುಕ್ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ವಿಜಯ ಆಚಾರ್ಯ ತೀರಾ ಬಡ ಕುಟುಂಬದ ವ್ಯಕ್ತಿಯಾಗಿದ್ದು ಮನೆಯಲ್ಲೇ ಬಂಗಾರದ ಕೆಲಸ ಮಾಡುತ್ತಿದ್ದರು. ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಮನೆಯಲ್ಲಿದ್ದಾಗಲೇ ಸಂಜೆ ಹೊತ್ತಿಗೆ ಕುಸಿದು ಬಿದ್ದಿದ್ದಾರೆ. ಬಿಪಿ ಲೋ ಆಗಿ ಸಮಸ್ಯೆ ಆಗಿದೆ ಎನ್ನುವ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.
A video has surfaced in the social media that shows Wenlock hospital ICU doctors and staff playing games on their computer instead of attending to the patient. It is said that Vijay (40) from Vagga had suffered head injuries after a fall due to high blood pressure. He was immediately shifted to Wenlock hospital on January 22. When the patient reached the hospital, instead of attending to him, the ICU doctor and other personnel, it is claimed, were playing games on their computer.
12-11-25 11:10 pm
Bangalore Correspondent
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
54 ಹೆಕ್ಟೇರ್ ಅರಣ್ಯ ನಾಶ ಭೀತಿ ; ಶರಾವತಿ ಪಂಪ್ಡ್ ಸ್...
10-11-25 02:58 pm
12-11-25 02:54 pm
HK News Desk
ದೆಹಲಿ ಘಟನೆ, ಆತ್ಮಹತ್ಯಾ ಬಾಂಬರ್ ಆಗಿರಲಿಲ್ಲ, ಆಕಸ್ಮ...
11-11-25 10:56 pm
Mangaluru Kasaragod Highway: ಮಂಗಳೂರು- ಕಾಸರಗೋಡ...
11-11-25 10:20 pm
ಕೆಂಪುಕೋಟೆ ಕಾರು ಬ್ಲಾಸ್ಟ್ ಪ್ರಕರಣ ; ಜೈಶ್ ಉಗ್ರರ ಲ...
11-11-25 03:28 pm
ಐ-20 ಕಾರು ಕೆಂಪುಕೋಟೆ ಸಿಗ್ನಲ್ ನಲ್ಲಿದ್ದಾಗ ಬ್ಲಾಸ್...
10-11-25 11:07 pm
13-11-25 01:44 pm
HK Staffer
Mangalore NMPT, Dinesh Gundu Rao, Congress, B...
12-11-25 06:56 pm
Ullal Dargah Committee: ಉಳ್ಳಾಲ ದರ್ಗಾ ಕಮಿಟಿಯಲ್...
11-11-25 10:42 pm
Bomb blast in New Delhi, High Alert in Dakshi...
11-11-25 10:15 pm
Bhagvati Prem Ship, Mangalore: ಸುರತ್ಕಲ್ ; ಮರಳ...
08-11-25 08:31 pm
12-11-25 12:32 pm
Mangalore Correspondent
ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಸೊಸೈಟಿಯಲ್ಲಿ ಭಾರೀ ಅ...
11-11-25 06:33 pm
Fraud Dream Deal Mangalore, KSRTC: ತಿಂಗಳಿಗೆ ಒ...
09-11-25 10:27 pm
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm