ಬ್ರೇಕಿಂಗ್ ನ್ಯೂಸ್
27-03-26 04:04 pm HK News Staffer ಕರ್ನಾಟಕ
ವಿಜಯಪುರ, ಮಾರ್ಚ್ 27: ಹತ್ತಿರದ ದಾರಿಯೆಂದು ಚಾಲಕನೊಬ್ಬ ಟ್ರ್ಯಾಕ್ಟರ್'ನ್ನು ತುಂಗಭದ್ರಾ ನದಿಗೆ ನುಗ್ಗಿಸಿದ್ದು, ಪರಿಣಾಮ ಅದರಲ್ಲಿದ್ದ 10ಕ್ಕೂ ಹೆಚ್ಚು ಮಂದಿ ನದಿ ಮಧ್ಯೆ ಸಿಲುಕಿ ಜೀವ ಭಯದಲ್ಲಿ ಪರದಾಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ವಿಜಯಪುರ ಮೂಲದ ಭಕ್ತರಿದ್ದ ವಾಹನ ತುಂಗಭದ್ರಾ ನದಿ ದಾಟಿ ಸಿಂಗಟಾಳೂರು ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹಡಗಲಿ ತಾಲ್ಲೂಕಿನ ನವಲಿ ಗ್ರಾಮದ ಭಕ್ತರು ಹೀಗೆ ಹೋದರೆ ತಡವಾಗುತ್ತೆ ಎಂದು ಶಾರ್ಟ್‌ಕಟ್ ಆಯ್ಕೆ ಮಾಡಿಕೊಂಡಿದ್ದಾರೆ. ಚಾಲಕನೂ ನೀರಿನ ಮಟ್ಟ ಕಡಿಮೆ ಇದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಎಲ್ಲರೂ ಟ್ರ್ಯಾಕ್ಟರ್ ಮೂಲಕ ನದಿಯನ್ನು ದಾಟಲು ಮುಂದಾಗಿದ್ದರು.

ಆದರೆ, ಟ್ರ್ಯಾಕ್ಟರ್ ನದಿ ಮಧ್ಯ ತಲುಪಿದಾಗ ಚಾಲಕ ಗಾಬರಿಗೊಂಡಿದ್ದಾನೆ. ಇದೇ ವೇಳೆ ನೀರಿನ ಮಟ್ಟ ಹೆಚ್ಚಾಗಿ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಮುಳುಗಲು ಆರಂಭಿಸಿತ್ತು. ನೀರು ಕುತ್ತಿಗೆಯ ಮಟ್ಟಕ್ಕೆ ತಲುಪುತ್ತಿದ್ದಂತೆ ಭಕ್ತರು ಭಯದಿಂದ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.
ಈ ಸಂದರ್ಭ ಸ್ಥಳದಲ್ಲಿದ್ದ ಮೀನುಗಾರರು ತಕ್ಷಣ ಧಾವಿಸಿ, ತಮ್ಮ ಜೀವದ ಹಂಗು ತೊರೆದು ಎಲ್ಲ ಭಕ್ತರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ನಂತರ ಕ್ರೇನ್ ಸಹಾಯದಿಂದ ಟ್ರ್ಯಾಕ್ಟರ್ ಅನ್ನು ನದಿಯಿಂದ ಹೊರಕ್ಕೆಳೆದಿದ್ದಾರೆ. ಘಟನೆ ಕುರಿತು ಟ್ರ್ಯಾಕ್ಟರ್ ನಲ್ಲಿದ್ದ ಭಕ್ತನೋರ್ವ ಪ್ರತಿಕ್ರಿಯಿಸಿ, ಚಾಲಕನ ಮಾತು ನಂಬಿ ನಾವು ಒಪ್ಪಿದ್ದೆವು. ನಮಗೆ ಅಪಾಯ ಇದೆ ಎಂದು ತಿಳಿದಿದ್ದರೂ ಹೋಗಿದ್ದೆವು. ದೇವರ ಕೃಪೆಯಿಂದ ಬದುಕಿದ್ದೇವೆ. ನಮ್ಮನ್ನು ರಕ್ಷಿಸಿದ ಮೀನುಗಾರರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm