ಬ್ರೇಕಿಂಗ್ ನ್ಯೂಸ್
26-03-26 09:44 pm HK News Staffer ದೇಶ - ವಿದೇಶ
ಶಾರ್ಜಾ, ಮಾರ್ಚ್ 26: ಯುದ್ಧ ವಿರಾಮಕ್ಕಾಗಿ ಅಮೆರಿಕ ಮುಂದಿಟ್ಟಿದ್ದ 15 ಅಂಶಗಳ ಷರತ್ತನ್ನು ಇರಾನ್ ನಿರಾಕರಿಸಿದ್ದು ಗಲ್ಫ್ ದೇಶಗಳನ್ನು ಮತ್ತಷ್ಟು ಆತಂಕಕ್ಕೆ ನೂಕಿದೆ. ಇದರ ಪರಿಣಾಮ ಇರಾನ್ ಒಂದನ್ನು ಬಿಟ್ಟು ಉಳಿದೆಲ್ಲ ಗಲ್ಫ್ ದೇಶಗಳು ಒಂದಾಗಿದ್ದು, ವಾಯುಪ್ರದೇಶ ನಿರ್ಬಂಧ ಕಾರಣ ಸಿಕ್ಕಿಬಿದ್ದಿರುವ ವಿದೇಶಿ ಪ್ರವಾಸಿಗರಿಗೆ ತಮ್ಮ ನಾಡಿಗೆ ತೆರಳಲು ವ್ಯವಸ್ಥೆ ಕಲ್ಪಿಸಲು ತುರ್ತು ಒಪ್ಪಂದಕ್ಕೆ ಬಂದಿವೆ.
ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಒಮಾನ್, ಬಹ್ರೈನ್, ಕತಾರ್, ಕುವೈತ್ ಮತ್ತು ಇರಾಕ್ ದೇಶಗಳು ತುರ್ತಾಗಿ ಒಪ್ಪಂದಕ್ಕೆ ಬಂದಿದ್ದು, ಸಿಕ್ಕಿಬಿದ್ದ ಪ್ರವಾಸಿಗರನ್ನು ಕಳುಹಿಸುವುದಕ್ಕಾಗಿ ವ್ಯವಸ್ಥೆ ಮಾಡಲು ಮುಂದಾಗಿದೆ. ವಾಯುಪ್ರದೇಶ ನಿರ್ಬಂಧ ಕಾರಣ ವಿಮಾನಗಳು ತೆರಳದೆ ಬೇರೆ ಬೇರೆ ದೇಶಗಳಿಂದ ಬಂದಿರುವ ಜನರು ಆಯಾ ಭಾಗದಲ್ಲೇ ಸಿಕ್ಕಿಬಿದ್ದಿದ್ದಾರೆ. ಅವರನ್ನು ಆಯಾ ದೇಶಗಳಿಗೆ ಕಳುಹಿಸಲು ತುರ್ತು ವ್ಯವಸ್ಥೆ ಮಾಡುವುದಕ್ಕಾಗಿ ಎಲ್ಲ ದೇಶಗಳು ಒಪ್ಪಂದಕ್ಕೆ ಬಂದಿವೆ.
ಅಮೆರಿಕ- ಇರಾನ್ ನಡುವಿನ ಉಲ್ಬಣಿಸುತ್ತಿರುವ ಬಿಕ್ಕಟ್ಟಿನಿಂದ ಪಾರಾಗಲು ವ್ಯವಸ್ಥೆ ಕಂಡುಕೊಳ್ಳುವುದು, ಪರಸ್ಪರ ಸಹಕಾರದ ಭರವಸೆಯೊಂದಿಗೆ ಪ್ರಾದೇಶಿಕ ಉಲ್ಬಣ ಸ್ಥಿತಿ ಹೋಗಲಾಡಿಸಲು ಒಪ್ಪಂದಕ್ಕೆ ಬರಲಾಗಿದೆ. ಮಾನವೀಯ ನೆಲೆಯಲ್ಲಿ ಬೇರೆ ಬೇರೆ ದೇಶಗಳಿಂದ ಬಂದು ಗಲ್ಫ್ ರಾಷ್ಟ್ರಗಳಲ್ಲಿ ಸಿಕ್ಕಿಬಿದ್ದಿರುವ ಪ್ರವಾಸಿಗರನ್ನು ಕಳುಹಿಸಲು ವ್ಯವಸ್ಥೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ದುಬೈನಲ್ಲಿ ಸಾವಿರಾರು ಜನರು ಪ್ರವಾಸಿಗರಾಗಿ ಬಂದು ಸಿಕ್ಕಿಬಿದ್ದು ಅತಂತ್ರರಾಗಿರುವುದರಿಂದ ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ವಿಮಾನ ವ್ಯವಸ್ಥೆ ಸರಿಹೋಗುವಲ್ಲಿ ವರೆಗೆ ಉಳಿದುಕೊಳ್ಳಲು ಜೋರ್ಡಾನ್ ಮತ್ತು ಒಮಾನ್ ನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡುವುದು, ಒಪ್ಪಂದಕ್ಕೆ ಬಂದಿರುವ ಗಲ್ಫ್ ದೇಶಗಳು ಈ ಎರಡು ದೇಶಗಳಿಗೆ ಪ್ರವಾಸಿಗರನ್ನು ಕಳುಹಿಸಿ ಕೊಡುವುದು, ಅಮ್ಮನ್ ಮತ್ತು ಮಸ್ಕತ್ ನಡುವೆ ವಿಮಾನ ಸಂಚಾರಕ್ಕೆ ವ್ಯವಸ್ಥೆ ಮಾಡುವುದು, ಅಗತ್ಯ ಇರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಊಟ, ವಸತಿ ಸಹಿತ ಜೋರ್ಡಾನ್, ಒಮಾನಲ್ಲಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಕ್ಕೆ ನಿರ್ಣಯಿಸಲಾಗಿದೆ. ಕುವೈತ್ ಏರ್ಪೋರ್ಟ್ ಮತ್ತು ಬಹ್ರೇನ್ ಏರ್ಪೋರ್ಟ್ ಸ್ಥಗಿತ ಆಗಿರುವುದರಿಂದ ಅಲ್ಲಿಂದ ದಮ್ಮಾಮ್ ಮತ್ತು ಸೌದಿ ಅರೇಬಿಯಾಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ. ಕತಾರ್ ಒಂದರಲ್ಲೇ ಎಂಟು ಸಾವಿರದಷ್ಟು ಪ್ರವಾಸಿಗರು ಸಿಕ್ಕಿಬಿದ್ದಿದ್ದು ಯಾವ ಕಡೆಗೂ ಹೋಗಲಾಗದೆ ಆತಂಕದಲ್ಲಿದ್ದಾರೆ.
ಗಲ್ಫ್ ದೇಶಗಳ ಪೈಕಿ ಅತಿ ದೊಡ್ಡದಾಗಿರುವ ಸೌದಿ ಅರೇಬಿಯಾ ಈ ತುರ್ತು ಒಪ್ಪಂದಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದು, ತನ್ನ ದೇಶದಲ್ಲಿ ವಾಯು ಪ್ರದೇಶವನ್ನು ಆಂಶಿಕವಾಗಿ ತೆರೆದಿಟ್ಟಿದೆ. ಹೊರ ದೇಶಗಳಿಗೆ ವಿಮಾನ ಸಂಚಾರಕ್ಕೂ ಅವಕಾಶ ನೀಡಿದೆ. ಹೀಗಾಗಿ ಪಕ್ಕದ ದೇಶಗಳಿಂದ ಬರುವ ಪ್ರಯಾಣಿಕರಿಗೆ ತನ್ನ ಏರ್ಪೋರ್ಟ್ ನಿಂದ ತೆರಳಲು ವೀಸಾ ಒದಗಿಸಿಕೊಟ್ಟು ವ್ಯವಸ್ಥೆಯನ್ನೂ ಮಾಡುತ್ತಿದೆ. ಯುಎಇ ಕೂಡ ತನ್ನ ವಾಯು ಪ್ರದೇಶವನ್ನು ಆಂಶಿಕವಾಗಿ ತೆರೆದಿಟ್ಟಿದ್ದು, ಕೆಲವು ದೇಶಗಳಿಗೆ ಮಾತ್ರ ವಿಮಾನ ಸಂಚಾರಕ್ಕೆ ಅವಕಾಶ ನೀಡಿದೆ. ಗಲ್ಫ್ ಯುದ್ಧದ ಪರಿಣಾಮ ದುಬೈನಂತಹ ಪ್ರವಾಸಿಗರನ್ನೇ ನೆಚ್ಚಿಕೊಂಡ ದೇಶಗಳು ದೊಡ್ಡ ಮಟ್ಟದ ನಷ್ಟಕ್ಕೆ ಸಿಲುಕಿದೆ.
14-10-26 10:35 am
HK News Staffer
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
DK Shivakumar: ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್...
08-10-26 08:00 pm
14-10-26 10:57 am
HK News Staffer
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
ರಿಯಾದ್ ಏರ್ಪೋರ್ಟ್ ಮೇಲೆ ಹೌತಿಗಳಿಂದ ಬಾಂಬ್ ದಾಳಿ ;...
11-10-26 02:34 pm
13-10-26 11:10 pm
HK News Desk
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
Sullia News: ಸುಳ್ಯ ; ತಡರಾತ್ರಿ ಮೀನು ಹಿಡಿಯಲು ಹ...
13-10-26 02:54 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm