ಬ್ರೇಕಿಂಗ್ ನ್ಯೂಸ್
25-09-21 10:55 pm Mangaluru Correspondent ಕರಾವಳಿ
ಮಂಗಳೂರು, ಸೆ.25: ಮಂಗಳೂರಿನ ಜನರಿಗೆ ಪಚ್ಚನಾಡಿಯಿಂದ ಹರಿಯುವ ವಿಷಯುಕ್ತ ನೀರನ್ನು ಕುಡಿಯಲು ಕೊಡುತ್ತಿರುವ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಕ್ಕೆ ಹೈಕೋರ್ಟ್ ಮತ್ತೆ ಛೀಮಾರಿ ಹಾಕಿದೆ. ಕರ್ನಾಟಕ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಮರವೂರು ಡ್ಯಾಮಿನಲ್ಲಿ ಕಲುಷಿತ ಮತ್ತು ವಿಷಯುಕ್ತ ನೀರು ಸೇರುತ್ತಿದೆ ಎಂದು ವರದಿ ನೀಡಿದ್ದರೂ, ಪಾಲಿಕೆಯ ಅಧಿಕಾರಿಗಳು ಖಾಸಗಿ ಲ್ಯಾಬ್ ನಲ್ಲಿ ವರದಿ ರೆಡಿ ಮಾಡಿಸಿ ಕೋರ್ಟಿಗೆ ಸಲ್ಲಿಸಿರುವುದನ್ನು ತೀವ್ರವಾಗಿ ಆಕ್ಷೇಪಿಸಿದೆ.
ಪಚ್ಚನಾಡಿ ತ್ಯಾಜ್ಯ ಘಟಕದಲ್ಲಿ ಕುಸಿತವಾಗಿರುವ ಪ್ರದೇಶದಿಂದ ವಿಷಕಾರಿ ನೀರು ಹರಿದು ಫಲ್ಗುಣಿ ನದಿ ಸೇರುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಸಾರ್ವಜನಿಕ ಹಿತಾಸಕ್ತಿಯಡಿ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ಮೂರು ತಿಂಗಳಿಂದ ಈ ಬಗ್ಗೆ ಹೈಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು, ಹೈಕೋರ್ಟ್ ಸೂಚನೆಯಂತೆ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳು ನೀರನ್ನು ಪ್ರಯೋಗಕ್ಕೆ ಒಳಪಡಿಸಿ ಇತ್ತೀಚೆಗೆ ವರದಿ ನೀಡಿದ್ದರು. ನೀರಿನಲ್ಲಿ ವಿಷಕಾರಿ ಅಂಶಗಳು ಇರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.
ಸೆ.24ರಂದು ಮತ್ತೆ ವಿಚಾರಣೆಗೆ ಬಂದ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪರ ವಕೀಲರು, ಮಂಗಳೂರು ಪಾಲಿಕೆಯ ವತಿಯಿಂದ ನೀಡಲಾಗಿದ್ದ ಹೆಚ್ಚುವರಿ ರಿಪೋರ್ಟ್ ಬಗ್ಗೆಯೇ ಆಕ್ಷೇಪಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಖಾಸಗಿ ಪ್ರಯೋಗಾಲಯದಲ್ಲಿ ನೀರನ್ನು ಪರೀಕ್ಷೆಗೆ ಒಳಪಡಿಸಿದ ಉದ್ದೇಶವೇ ಅರ್ಥವಾಗುತ್ತಿಲ್ಲ. ಯಾಕೆ ಈ ರೀತಿಯ ಕೆಲಸ ಮಾಡಿದೆ ಎಂದು ಪ್ರಶ್ನಿಸಿದ್ದಲ್ಲದೆ, ಯಾವ ಕಾನೂನಿನಡಿ ಖಾಸಗಿ ಸಂಸ್ಥೆಯಿಂದ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆತ್ತಿಕೊಂಡು ಆ ವರದಿಯನ್ನು ತಿರಸ್ಕರಿಸಿದೆ.
ಪಾಲಿಕೆಯ ಆಡಳಿತದ ನಡೆಯನ್ನು ನೋಡಿದರೆ, ಮಂಗಳೂರಿನ ಜನರಿಗೆ ಪಾಲಿಕೆಯವರು ಬಲವಂತದಿಂದ ತ್ಯಾಜ್ಯ ನೀರನ್ನು ಕುಡಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಬರುವಂತಿದೆ. ಹಲವಾರು ವರ್ಷಗಳಿಂದ ಬಿದ್ದಿರುವ ಕಸ ತ್ಯಾಜ್ಯವನ್ನು ವಿಲೇವಾರಿ ಮಾಡುವುದು, ಅಲ್ಲಿನ ನೀರು ಅಣೆಕಟ್ಟು ಸೇರದಂತೆ ತಡೆಯುವುದು ಪಾಲಿಕೆಯ ಜವಾಬ್ದಾರಿ. ಇದಕ್ಕಾಗಿ ಸರಕಾರದಿಂದ 72 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೂ, ಅದನ್ನು ಬಳಕೆ ಮಾಡಿಲ್ಲ. ಆದಷ್ಟು ಬೇಗ ಅಲ್ಲಿನ ತ್ಯಾಜ್ಯವನ್ನು ತೆರವು ಮಾಡಬೇಕು. ಖಾಸಗಿ ಲ್ಯಾಬ್ ವರದಿ ಕೊಟ್ಟು ಕೋರ್ಟ್ ದಾರಿ ತಪ್ಪಿಸುವ ಮತ್ತು ತ್ಯಾಜ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಈ ಬಗ್ಗೆ ಪಾಲಿಕೆ ಪರ ವಕೀಲರು ಪ್ರತಿಕ್ರಿಯಿಸಿ, ಘನತ್ಯಾಜ್ಯ ತೆರವು ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಶುದ್ಧೀಕರಣವಾಗದ ಪ್ರದೇಶದ ನೀರನ್ನು ಪರೀಕ್ಷಿಸಿ, ವರದಿ ಕೊಟ್ಟಿದೆ. ಇದರಿಂದ ವ್ಯತ್ಯಾಸ ಕಂಡುಬರುತ್ತಿದ್ದು, ನೀರನ್ನು ಶುದ್ಧೀಕರಣಗೊಳಿಸಿದ ಪ್ರದೇಶದಿಂದಲೇ ಪರೀಕ್ಷೆಗೊಳಪಡಿಸಲಿ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ವಕೀಲರು, ಈ ವಿಚಾರವಾಗಿ ಮಂಡಳಿಯಿಂದ ಆಗಸ್ಟ್ 28ರಂದು ಕೋರ್ಟಿಗೆ ವರದಿ ಸಲ್ಲಿಸಿದೆ. ಆದರೆ, ಪಾಲಿಕೆಯವರು ಈಗ ಮತ್ತೆ ಖಾಸಗಿಯವರಿಂದ ವರದಿ ತಯಾರಿಸಿ ಕೋರ್ಟಿಗೆ ಸಲ್ಲಿಸುವ ಔಚಿತ್ಯ ಏನಿದೆ ಎಂದು ಪ್ರಶ್ನಿಸಿದರು. ಇದಕ್ಕೆ ನಮ್ಮ ಆಕ್ಷೇಪವಿದೆ. ಅಲ್ಲದೆ, ಹಿಂದೆ ಘನತ್ಯಾಜ್ಯ ಕುಸಿದು ಅನೇಕ ಜನ ಸತ್ತಿದ್ದಾರೆ. ಪಾಲಿಕೆ ಇನ್ನೂ ಕೂಡ ಜನ ಸಾಯಲಿ ಎಂದು ಬಯಸಿದಂತಿದೆ ಎಂದು ಹೇಳಿದರು.
ಎರಡೂ ಕಡೆಯ ವಾದ ಆಲಿಸಿದ ನ್ಯಾಯಪೀಠ, ಮರವೂರು ಅಣೆಕಟ್ಟಿಗೆ ಆಗಮನ ಮತ್ತು ನಿರ್ಗಮನ ಎರಡೂ ಪ್ರದೇಶಗಳ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆ ನಡೆಸಿ ವರದಿ ನೀಡಬೇಕು. ಸರಕಾರ, ಪಾಲಿಕೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯವರು ವಸ್ತುಸ್ಥಿತಿ ವರದಿಯನ್ನು ಪ್ರತಿ ತಿಂಗಳು ಸಲ್ಲಿಕೆ ಮಾಡಬೇಕು ನಿರ್ದೇಶನ ನೀಡಿ, ಮುಂದಿನ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿದೆ.
ಮಂಗಳೂರಿಗೆ ಕೆಟ್ಟ ಹೆಸರು – ಮೇಯರ್
ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಬಳಿ ಕೇಳಿದರೆ, ಈ ರೀತಿ ಖಾಸಗಿ ಲ್ಯಾಬ್ ನಿಂದ ರಿಪೋರ್ಟ್ ಯಾಕೆ ಕೊಡಿಸಿದ್ದಾರೆ ಗೊತ್ತಿಲ್ಲ. ಅಧಿಕಾರಿಗಳು ಇದನ್ನು ಮಾಡಿದ್ದಾರೆ. ಪತ್ರಿಕೆ ನೋಡಿ ವಿಷಯ ಗೊತ್ತಾಯಿತು. ಒಟ್ಟು ಪ್ರಕರಣದಿಂದ ನಮ್ಮ ಜಿಲ್ಲೆಗೆ ಮತ್ತು ಮಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಈ ಬಗ್ಗೆ ಸೋಮವಾರ ಅಧಿಕಾರಿಗಳನ್ನು ಕರೆದು ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಸರಕಾರಿ ವರದಿಯೂ ನಮ್ಮಲ್ಲಿತ್ತು – ಕಮಿಷನರ್
ಇದೇ ವಿಚಾರದ ಬಗ್ಗೆ ಪಾಲಿಕೆಯ ಕಮಿಷನರ್ ಅಕ್ಷಯ್ ಶ್ರೀಧರ್ ಬಳಿ ಕೇಳಿದರೆ, ನಾವು ಖಾಸಗಿ ಲ್ಯಾಬ್ ಮತ್ತು ಫಿಶರೀಸ್ ಕಾಲೇಜಿನ ಕಡೆಯಿಂದಲೂ ಪರೀಕ್ಷೆ ಮಾಡಿಸಿದ್ದೇವೆ. ಅದರ ರಿಪೋರ್ಟನ್ನು ಕೊಟ್ಟಿದ್ದೆವು. ಆದರೆ, ನಿನ್ನೆ ಫಿಶರೀಸ್ ಕಾಲೇಜಿನ ವರದಿಯನ್ನು ನ್ಯಾಯಾಲಯಕ್ಕೆ ಕೊಡಲು ಸಾಧ್ಯವಾಗಲಿಲ್ಲ. ಮುಂದಿನ ವಿಚಾರಣೆಯಲ್ಲಿ ಅದನ್ನು ಕೊಡುತ್ತೇವೆ. ಅಲ್ಲದೆ, ಮಾಲಿನ್ಯ ನಿಯಂತ್ರಣ ಮಂಡಳಿಯವರು ಮಲಿನ ನೀರು ಹರಿದು ಬರುವ ಜಾಗದಿಂದಲೇ ನೀರನ್ನು ಸಂಗ್ರಹಿಸಿದ್ದಾರೆ. ಅದರಿಂದಾಗಿ ವಿಷಯುಕ್ತ ಅನ್ನುವ ವರದಿ ಬಂದಿದೆ. ಅಣೆಕಟ್ಟು ಕೆಳಭಾಗದಿಂದ ಅವರು ನೀರನ್ನು ಸಂಗ್ರಹಿಸಿಲ್ಲ. ನಾವು ಅಣೆಕಟ್ಟು ನೀರನ್ನು ನೇರವಾಗಿ ಕುಡಿಯಲು ಕೊಡುತ್ತಿಲ್ಲ. ನೀರನ್ನು ಜಿಪಂ ಅಧೀನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ಧೀಕರಿಸಿ ಕೊಡುತ್ತೇವೆ ಎಂದು ಹೇಳಿದರು.
Mangalore people get dirty water to homes, High Court slams MCC for negligence after lab test turns positive. The state high court (HC) has directed Karnataka State Pollution Control Board (KSPCB) to initiate action against Mangaluru City Corporation that has remained insensitive to the issue of supplying contaminated drinking water to Mangaluru city. A KSPCB report that was submitted earlier had mentioned about the water of a tributary of river Falguni having been contaminated.
21-05-25 09:16 pm
Bangalore Correspondent
CM Siddaramaiah, Rain, Visit: ಮಳೆ ಹಾನಿ ಪ್ರದೇಶ...
21-05-25 05:42 pm
Kumki elephants, Pawan Kalyan, Cm Siddaramaia...
21-05-25 02:35 pm
ED Raids, Parameshwar College, Ranya Rao: ಹೋಂ...
21-05-25 01:50 pm
KG Halli Police Sub inspector Nagraj, Wife su...
21-05-25 12:12 pm
21-05-25 12:57 pm
HK News Desk
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
21-05-25 09:30 pm
Mangalore Correspondent
Dr M A Saleem New DG&IGP: ಡಿಜಿಪಿ ಅಲೋಕ್ ಮೋಹನ್...
21-05-25 07:17 pm
Tiranga Yatra, Mangalore: ಮಂಗಳೂರಿನಲ್ಲಿ ತಿರಂಗಾ...
20-05-25 11:12 pm
ಕೊಂಡಾಣ ಜಾತ್ರೆಯಲ್ಲಿ ಮುತ್ತಣ್ಣ ಶೆಟ್ಟಿ ಮುಂಡಾಸು ಕಟ...
20-05-25 06:59 pm
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm