ಬ್ರೇಕಿಂಗ್ ನ್ಯೂಸ್
21-05-25 12:57 pm HK News Desk ದೇಶ - ವಿದೇಶ
ನವದೆಹಲಿ, ಮೇ 21 : ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಸ್ಥಗಿತಗೊಳಿಸಿರುವ ಪಾಕ್ ಜೊತೆಗಿನ ಸಿಂಧೂ ಜಲ ಒಪ್ಪಂದ ಕುರಿತಾಗಿ ಮರು ಪರಿಶೀಲನೆಗೆ ಭಾರತ ಸರ್ಕಾರ ಮುಂದಾಗಿದೆ. ಹಳೆಯ ಷರತ್ತುಗಳನ್ನು ಪರಿಗಣಿಸದೆ ತಗ್ಗು ಪ್ರದೇಶಗಳಿಗೆ ನೀರು ಒದಗಿಸಬೇಕೆಂಬ ಅಂತರಾಷ್ಟ್ರೀಯ ನಿಯಮಗಳಡಿ ಒಪ್ಪಂದವನ್ನು ಪುನರ್ ರೂಪಿಸಲು ಭಾರತ ಬಯಸುತ್ತಿದೆ.
ಸಿಂಧೂ ನದಿಯ ನೀರು ಬಿಡುವುದಕ್ಕಾಗಿ ಜಲ ಒಪ್ಪಂದವನ್ನು ಪುನರ್ ಸ್ಥಾಪಿಸಲು ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗ್ರಹ ಮಾಡುತ್ತಿದೆ. ಆದರೆ ಹಿಂದ ಇದ್ದ ರೀತಿಯಲ್ಲೇ ಒಪ್ಪಂದ ಮಾಡಿಕೊಳ್ಳದೆ ಹಳೆ ನಿಯಮಗಳ ಬಗ್ಗೆ ಪುನರ್ ಪರಿಶೀಲಿಸುವ ಕೆಲಸ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಕಿಸ್ತಾನ ಭಾರತವನ್ನು ಮನವಿ ಮಾಡಿಕೊಂಡ ನಂತರ ಈ ಬೆಳವಣಿಗೆ ನಡೆದಿದೆ.
ಸೆಪ್ಟೆಂಬರ್ 1960 ರಲ್ಲಿ ಸೌಹಾರ್ದ ನೆಲೆಯಲ್ಲಿ ಮಾಡಲ್ಪಟ್ಟ ಈ ಒಪ್ಪಂದವು ಪಾಕಿಸ್ತಾನದ ಕಡೆಗೆ ಬಹಳ ಉದಾರವಾಗಿತ್ತು ಎಂದು ಭಾರತ ಸರ್ಕಾರ ಹೇಳುತ್ತಿದೆ. ಕಳೆದ ಮೂರು ದಶಕಗಳಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ಮೂಲಕ ಪಾಕಿಸ್ತಾನ, ಭಾರತದ ಜೊತೆಗಿನ ಸ್ನೇಹ ಮತ್ತು ಸೌಹಾರ್ದತೆ ಮುರಿದಿದೆ. ಹೀಗಾಗಿ ಭಾರತ ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸದೆ ಪಾಕ್ ಕಡೆಗೆ ಹರಿಯುವ ನೀರಿನ ಮೇಲೆ ಅಂಕುಶ ಹಾಕಲಿದೆ ಎಂದು ಹೇಳಲಾಗುತ್ತಿದೆ.
50 ಮತ್ತು 60 ರ ದಶಕದಲ್ಲಿ ರೂಪಿಸಲಾದ ಮೂಲ ಒಪ್ಪಂದಕ್ಕಿಂತ ಭಿನ್ನವಾಗಿ, ಪ್ರಸ್ತುತ ಅಗತ್ಯಗಳು, ಹವಾಮಾನ ಬದಲಾವಣೆ, ಹಿಮನದಿಗಳ ಕರಗುವಿಕೆ, ನದಿಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ, ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಶುದ್ಧ ಇಂಧನವನ್ನು ಗಮನದಲ್ಲಿಟ್ಟು ಒಪ್ಪಂದವನ್ನು ಮರು ಸ್ಥಿರೀಕರಿಸುವ ಸಾಧ್ಯತೆಯಿದೆ.
India Keen to Review Indus Water Treaty, Possibility of Amending Old Rules on Water Sharing with Pakistan.
28-02-26 11:49 am
HK News Desk
ರಾಜ್ಯದಲ್ಲಿ ಆಸ್ತಿ ಖರೀದಿದಾರರಿಗೆ ಮತ್ತೊಂದು ಶಾಕ್ !...
27-02-26 10:17 pm
ಧಾರವಾಡ ಪ್ರತಿಭಟನೆ ಎಫೆಕ್ಟ್ ; ರಾಜ್ಯದಲ್ಲಿ 60 ಸಾವಿ...
26-02-26 10:01 pm
ತಂದೆ ಆಟೋ ಚಾಲಕ, ತಾಯಿ ಹೂವಿನ ವ್ಯಾಪಾರಿ, ಮಗಳು ನ್ಯಾ...
26-02-26 12:58 pm
Moral Policing, Mangalore: ಮೋರಲ್ ಪೊಲೀಸ್ ; ರೈಲ...
26-02-26 10:26 am
28-02-26 10:54 pm
HK News Desk
ಗಲ್ಫ್ ರಾಷ್ಟ್ರಗಳಿಗೆ ವಿಮಾನ ಸಂಚಾರ ವ್ಯತ್ಯಯ ; ಏರ್...
28-02-26 07:17 pm
ಇರಾನ್ ಮೇಲೆ ಮುಗಿಬಿದ್ದ ಅಮೆರಿಕ-ಇಸ್ರೇಲ್ ಪಡೆಗಳು ;...
28-02-26 05:28 pm
ತ್ರಿಷಾ ಬಿರುಗಾಳಿ ; ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್...
28-02-26 01:08 pm
ದೆಹಲಿ ಅಬಕಾರಿ ನೀತಿ ಹಗರಣ ; ಕೇಜ್ರಿವಾಲ್, ಸಿಸೋಡಿಯಾ...
27-02-26 03:55 pm
28-02-26 08:53 pm
HK News Desk
Mangaluru Muscat Flight: ಮಂಗಳೂರು- ಮಸ್ಕತ್ ನಡುವ...
27-02-26 08:59 pm
Mangalore Sujith Madur: ಕೌನ್ಸಿಲರ್ ಸುಜಿತ್ ಮಾಡೂ...
27-02-26 08:52 pm
Leopard Mangalore, MLA Vedavyas Kamath: ಕದ್ರಿ...
27-02-26 08:40 pm
Justice Veerappa, Udupi: ಉಪ ಲೋಕಾಯುಕ್ತ ನ್ಯಾ.ವೀ...
27-02-26 08:36 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm