ಬ್ರೇಕಿಂಗ್ ನ್ಯೂಸ್
20-05-25 02:03 pm Mangalore Correspondent ಕರಾವಳಿ
ಮಂಗಳೂರು, ಮೇ 20 : ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಬೆಳಗ್ಗಿನಿಂದ ಉತ್ತಮ ಮಳೆಯಾಗಿದೆ. ರಾತ್ರಿಯಿಂದಲೇ ನಿರಂತರ ಮಳೆ ಸುರಿದಿದ್ದು ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ನೆಲ ಒಮ್ಮಿಂದೊಮ್ಮೆಲೆ ತಂಪಗಾಗಿದೆ. ಗಾಳಿ, ಸಿಡಿಲಿನ ಅಬ್ಬರ ಇಲ್ಲದೆ ಸಾಧಾರಣ ರೀತಿಯಲ್ಲಿ ಮಳೆ ಸುರಿಯತೊಡಗಿದ್ದು ಮಳೆಗಾಲದ ಅನುಭವ ನೀಡಿದೆ.
ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಬಹುತೇಕ ಭಾಗದಲ್ಲಿ ಒಂದೇ ರೀತಿಯಲ್ಲಿ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ ಭಾಗದಲ್ಲಿ ಮೇ ಆರಂಭದಲ್ಲಿಯೇ ಒಳ್ಳೆ ಮಳೆ ಆಗಿದ್ದರೂ ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ಒಳ್ಳೆಯ ಮಳೆ ಆಗಿರಲಿಲ್ಲ.
ಉಡುಪಿ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು ಹೆಲ್ತ್ ಹಬ್ ಎನಿಸಿರುವ ಮಣಿಪಾಲದಲ್ಲಿ ಹೆದ್ದಾರಿಯಲ್ಲಿ ನದಿಯಂತೆ ನೀರು ಹರಿಯುವ ವಿಡಿಯೋ ವೈರಲ್ ಆಗಿದೆ. ಉಡುಪಿ- ಮಣಿಪಾಲ ರಸ್ತೆಯಲ್ಲಿ ಕೃತಕ ಪ್ರವಾಹದ ರೀತಿಯಲ್ಲಿ ಮಳೆ ನೀರು ಹರದಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದಾರೆ. ಮಣಿಪಾಲದ ಐನಾಕ್ಸ್ ಬಳಿ ರಸ್ತೆಯಲ್ಲಿ ಪ್ರವಾಹದ ರೀತಿ ಕಲ್ಲು ಮಣ್ಣಿನ ಜೊತೆಗೆ ನೀರು ಹರಿದಿದ್ದು, ಘಟ್ಟ ಕುಸಿದು ಬಂದ ರೀತಿಯ ಅನುಭವ ಆಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿದಿದೆ.
ಎರಡು ದಿನ ಭಾರೀ ಮಳೆ ಸೂಚನೆ
ಹವಾಮಾನ ಇಲಾಖೆಯಿಂದ ಕರಾವಳಿ ಮತ್ತು ಘಟ್ಟ ಪ್ರದೇಶದಲ್ಲಿ ಮೇ 20 ಮತ್ತು 21ರಂದು ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ವೇಳೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಲಾಗಿದ್ದು ಈಗಾಗಲೇ ಮೀನುಗಾರಿಕೆ ತೆರಳಿದವರು ಮರಳುವಂತೆ ಸೂಚಿಸಲಾಗಿದೆ.
Heavy #rainfall that began early Tuesday, May 20 morning has once again triggered artificial flooding along the crucial #Udupi-#Manipal Road, causing severe inconvenience to commuters.#mangalore pic.twitter.com/arFDGlYThX
— Headline Karnataka (@hknewsonline) May 20, 2025
Heavy rainfall that began early Tuesday, May 20 morning has once again triggered artificial flooding along the crucial Udupi-Manipal Road, causing severe inconvenience to commuters.
15-08-25 10:29 pm
Bangalore Correspondent
ಬೈಂದೂರಿನಲ್ಲಿ ವಿದೇಶಿಗರ ಮೋಡಿ ; ಅಧ್ಯಯನಕ್ಕೆ ಬಂದು...
15-08-25 09:47 pm
ಧರ್ಮಸ್ಥಳ ಪ್ರಕರಣದಲ್ಲಿ ಶವದ ಕುರುಹು ಸಿಗದಿದ್ದರೆ ದೂ...
15-08-25 07:15 pm
Mysterious Explosion in Bangalore: ಸ್ವಾತಂತ್ರ್...
15-08-25 03:20 pm
Masked Man, Dharmasthala, R Ashok: ಕೊನೆಯಲ್ಲಿ...
15-08-25 02:27 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 04:45 pm
Mangalore Correspondent
Expert PU College Announces ‘Xcelerate 2025’...
15-08-25 09:04 pm
Flag, Oath, and Nation: Expert PU College, Ko...
15-08-25 08:51 pm
ಎಸ್ಐಟಿ ತನಿಖೆಯಿಂದ ಧರ್ಮಸ್ಥಳಕ್ಕೆ ಅಪಚಾರ ಆಗಿಲ್ಲ, ಬ...
15-08-25 08:40 pm
Dharmasthala News: ಧರ್ಮಸ್ಥಳ ಶವ ಶೋಧಕ್ಕೆ 15ನೇ ದ...
14-08-25 10:29 pm
16-08-25 11:25 am
HK News Desk
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm
ನಟ ದರ್ಶನ್ ಗೆ ಮತ್ತೆ ಜೈಲು ದರ್ಶನ ; ಹೆಂಡತಿ ಜೊತೆ ಅ...
14-08-25 05:31 pm
Supreme Court, Actor Darshan Jail Order: ಸುಪ್...
14-08-25 11:51 am