ಬ್ರೇಕಿಂಗ್ ನ್ಯೂಸ್
27-04-21 03:18 pm Mangalore Correspondent ಕರಾವಳಿ
ಮಂಗಳೂರು, ಎ.27 : ಕೊರೊನಾ ಎನ್ನುವಾಗಲೇ ಹೆದರಿ ಓಡುವ ಕಾಲದಲ್ಲಿ ಇಲ್ಲೊಂದು ಮಹಿಳಾ ಸಂಘಟನೆ ಸದ್ದಿಲ್ಲದೆ ಕೊರೊನಾ ರೋಗಿಗಳ ಸೇವೆಯಲ್ಲಿ ತೊಡಗಿದೆ. ನ್ಯಾಷನಲ್ ವಿಮೆನ್ ಫ್ರಂಟ್ ಹೆಸರಿನ ಸಂಘಟನೆಯ ಮಹಿಳಾ ತಂಡ ಕೊರೊನಾದಿಂದ ಸಾವನ್ನಪ್ಪಿದ ಮುಸ್ಲಿಂ ಮಹಿಳೆಯರ ಅಂತಿಮ ವಿಧಿ ನೆರವೇರಿಸುವ ಮೂಲಕ ಮಾನವೀಯತೆ ಸಾರುವ ಕೆಲಸ ಮಾಡಿದೆ.
ಕೋವಿಡ್ ಒಂದನೇ ಅಲೆಯ ಸಂದರ್ಭದಲ್ಲೂ ಈ ತಂಡ ಕೋವಿಡ್ ಮತ್ತು ಕೋವಿಡ್ ಅಲ್ಲದೆ ಮೃತಪಟ್ಟ 200ಕ್ಕೂ ಅಧಿಕ ಮುಸ್ಲಿಂ ಮಹಿಳೆಯರ ಅಂತಿಮ ವಿಧಿಯನ್ನು ಮುಸ್ಲಿಂ ಸಂಪ್ರದಾಯದಂತೆ ನೆರವೇರಿಸಿ ಗಮನ ಸೆಳೆದಿತ್ತು.
ಈ ಬಾರಿಯೂ ತನ್ನ ಸೇವೆಯನ್ನು ಮುಂದುವರಿಸಿರುವ ಸಂಘಟನೆ ಸದಸ್ಯರು ಬಜ್ಪೆ, ಬಂಟ್ವಾಳ, ಉಪ್ಪಿನಂಗಡಿ, ಮಂಗಳೂರು ಪರಿಸರದ ಕೋವಿಡ್ ಮೃತರ ಅಂತ್ಯಕ್ರಿಯೆಗಳನ್ನು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈ ತಂಡಗಳ ಸದಸ್ಯರಿದ್ದು, ಕೊರೊನಾ ರೋಗಿ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರದ ನಿಯಮದಂತೆ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸುತ್ತಾರೆ.
"ಪುರುಷ ಮೃತಪಟ್ಟರೆ ಪುರಷರೇ ಅಂತ್ಯಕ್ರಿಯೆಗಳನ್ನು ಮಾಡುತ್ತಾರೆ. ಆದರೆ ಮುಸ್ಲಿಂ ಸಂಪ್ರದಾಯದ ಪ್ರಕಾರ ಮುಸ್ಲಿಂ ಮಹಿಳೆ ಮೃತಪಟ್ಟರೆ ಮಹಿಳೆಯರೇ ಶವದ ಸ್ನಾನ ಇನ್ನಿತರ ಕ್ರಿಯೆಗಳನ್ನು ಮಾಡಬೇಕು. ಆದರೆ ಕೊರೊನಾ ಕಾರಣದಿಂದ ಮಹಿಳೆಯರು ಈ ಕ್ರಿಯೆ ಮಾಡಲು ಮುಂದೆ ಬರಲು ಒಪ್ಪಲಿಲ್ಲ. ಹೀಗಾಗಿ ಸಂಘಟನೆಯಿಂದಲೇ ಮಹಿಳಾ ತಂಡವನ್ನು ರಚಿಸಲಾಗಿದೆ" ಎಂದು ನ್ಯಾಷನಲ್ ವಿಮೆನ್ ಫ್ರಂಟ್ ಸಂಘಟನೆಯ ರಾಜ್ಯ ಸದಸ್ಯೆ ಫಾತಿಮಾ ಹೇಳಿದ್ದಾರೆ.
A team of women's help in the cremation of people who died of covid 19 in Mangalore. A huge appreciation has been projected by people on social media
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 12:35 pm
HK News Staffer
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm