ಬ್ರೇಕಿಂಗ್ ನ್ಯೂಸ್
24-02-21 10:37 am Mangalore Correspondent ಕರಾವಳಿ
ಮಂಗಳೂರು, ಫೆ.24: ಲಂಚದ ಹಣಕ್ಕಾಗಿ ಪೀಡಿಸುತ್ತಿದ್ದ ಮಿನಿ ವಿಧಾನ ಸೌಧದಲ್ಲಿ ಕಂದಾಯ ಇಲಾಖೆಯ ನಗರ ಸರ್ವೇಯರ್ ಆಗಿದ್ದ ಗಂಗಾಧರ್ ಎಂಬಾತ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಮಂಗಳೂರು ನಗರದಲ್ಲಿ ನಾಗರಿಕರೊಬ್ಬರು ತಮ್ಮ ಕಚೇರಿಯ ಪೀಠೋಪಕರಣಕ್ಕಾಗಿ ಮನೆ ಆವರಣದಲ್ಲಿ ಇದ್ದ ಸಾಗುವಾನಿ ಮರವನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮತಿ ಕೋರಿ ಪತ್ರ ಸಲ್ಲಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಈ ಪತ್ರವನ್ನು ಕಂದಾಯ ಇಲಾಖೆಗೆ ಕಳುಹಿಸಿತ್ತು. ತಿಂಗಳು ಕಳೆದರೂ ಸ್ಥಳ ಪರಿಶೀಲನೆ ನಡೆಸಲು ಬಾರದ ಸರ್ವೇಯರ್ ಗಂಗಾಧರ್ ಸ್ಥಳ ಪರಿಶೀಲನೆ ನಡೆಸಲು 3000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಂದಾಯ ಇಲಾಖೆಗೆ ಕಟ್ಟಬೇಕಾದ 600 ರೂ. ಜೊತೆ ಮೂರು ಸಾವಿರವನ್ನೂ ಕೊಟ್ಟಿದ್ದರು. ಆದರೆ, ಮತ್ತೊಂದು ತಿಂಗಳು ಕಳೆದರೂ ಮರ ಇರುವ ಸ್ಥಳದ ನಕಾಶೆ ನೀಡದೆ ಮತ್ತೆ 30,000 ರೂ. ನೀಡುವಂತೆ ಡಿಮಾಂಡ್ ಇಟ್ಟಿದ್ದರು.

ಇದರಿಂದ ನೊಂದ ವ್ಯಕ್ತಿ ಮಂಗಳೂರಿನ ಎನ್ಇಸಿಎಫ್ ತಂಡದ ಸದಸ್ಯರ ಗಮನಕ್ಕೆ ತಂದಿದ್ದು ಬಳಿಕ ಮಂಗಳೂರಿನ ಎಸಿಬಿ ಇನ್ಸ್ ಪೆಕ್ಟರ್ ಶ್ಯಾಮಸುಂದರ್ ಗಮನಕ್ಕೆ ತರಲಾಯಿತು. ಮೂರು ದಿನಗಳ ಬಳಿಕ ಮಂಗಳವಾರ ಸಂಜೆ 5.30 ರ ವೇಳೆಗೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಚೌಕಾಶಿ ಮಾಡಿ, 20 ಸಾವಿರ ಲಂಚದ ಹಣ ತೆಗೆದುಕೊಳ್ಳುತ್ತಿದ್ದಾಗಲೇ ಸರ್ವೇಯರ್ ಗಂಗಾಧರ್ ಎಂ. ಅವರನ್ನು ಎಸಿಬಿ ತಂಡ ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಪ್ರಕಾಶ್, ಇನ್ಸ್ ಪೆಕ್ಟರ್ ಗಳಾದ ಶ್ಯಾಮಸುಂದರ್ ಮತ್ತು ಗುರುರಾಜ್, ಸಿಬಂದಿ ಹರಿಪ್ರಸಾದ್, ರಾಧಾಕೃಷ್ಣ ಕೆ, ಗಂಗಣ್ಣ, ರಾಧಾಕೃಷ್ಣ, ಉಮೇಶ್, ಆದರ್ಶ, ರಾಕೇಶ್, ರಾಜೇಶ್, ಭರತ್, ಮೋಹನ್ ಸಾಲಿಯಾನ್ ಪಾಲ್ಗೊಂಡಿದ್ದರು.
A revenue department surveyor was caught red-handed by the ACB officers for taking a bribe. The accused has been identified as Gangadhar.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm