ಬ್ರೇಕಿಂಗ್ ನ್ಯೂಸ್
25-09-26 07:31 pm HK News Staffer ಕರಾವಳಿ
ಮಂಗಳೂರು , ಸೆ.25: ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ಕರಾವಳಿಯ ಹೆಮ್ಮೆಯ ಜನಪದ ಕ್ರೀಡೆ ಕಂಬಳವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 18 ಮತ್ತು 19ರಂದು ‘ವಿಜಯ-ದಶಮಿ’ ಹೆಸರಿನಲ್ಲಿ ಜೋಡುಕರೆ ಕಂಬಳ ಆಯೋಜಿಸಲಾಗಿದ್ದು, ಕರಾವಳಿ ಜಿಲ್ಲೆಗಳಿಂದ ಸುಮಾರು 150ರಿಂದ 160 ಜೊತೆ ಆಯ್ದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮೈಸೂರು ಕಂಬಳದ ರೂವಾರಿ ಶಾಸಕ ಅಶೋಕ ರೈ ತಿಳಿಸಿದ್ದಾರೆ.
147 ಮೀಟರ್ ಉದ್ದದ ಕಂಬಳ ಕರೆ ಸಿದ್ಧವಾಗುತ್ತಿದ್ದು ಅ.10ರಂದು ಐದು ಜೊತೆ ಕೋಣಗಳನ್ನು ಕರೆದೊಯ್ದು ಟ್ರಯಲ್ ರನ್ ಮಾಡಲಾಗುವುದು. ಕಂಬಳದ ಕೋಣಗಳನ್ನು ಆಯ್ಕೆ ಮಾಡಲು ಪ್ರತ್ಯೇಕ ಸಮಿತಿಯನ್ನು ರಚಿಸಲಾಗಿದೆ ಎಂದು ಅಶೋಕ ರೈ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ. ಮಂಗಳೂರಿನ ಕದ್ರಿಯ ಸರ್ಕಿಟ್ ಹೌಸ್‌ನಲ್ಲಿ ಶಾಸಕ ಅಶೋಕ್ ರೈ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ನೇತೃತ್ವದಲ್ಲಿ ಕಂಬಳದ ಕೋಣಗಳ ಯಜಮಾನರು ಮತ್ತು ಮೈಸೂರಿನಿಂದ ಆಗಮಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ.
ಪುತ್ತೂರಿನಿಂದ ಮೈಸೂರಿನತ್ತ ಕೋಣಗಳ ಪ್ರಯಾಣ
ಅಕ್ಟೋಬರ್ 16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಎಲ್ಲ ಕೋಣಗಳು ಮತ್ತು ಮಾಲೀಕರು ಸೇರಲಿದ್ದು ಅಲ್ಲಿಂದ ಒಟ್ಟಾಗಿ ಲಾರಿಗಳಲ್ಲಿ ಮೈಸೂರಿನತ್ತ ಕರೆದೊಯ್ಯಲಾಗುವುದು. ದೀರ್ಘ ಪ್ರಯಾಣದ ವೇಳೆ ಕೋಣಗಳಿಗೆ ತೊಂದರೆಯಾಗದಂತೆ ಮಡಿಕೇರಿಯಲ್ಲಿ 2ರಿಂದ 3 ಗಂಟೆಗಳ ವಿಶ್ರಾಂತಿ ನೀಡಲಾಗುತ್ತದೆ. ಈ ವೇಳೆ ಮೇವು, ಆಹಾರ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಂದು ರಾತ್ರಿ ಮೈಸೂರು ತಲುಪುವ ಕೋಣಗಳಿಗೆ ಅಕ್ಟೋಬರ್ 17ರಂದು ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ.
18ರಂದು ಮೈಸೂರು ಕಂಬಳಕ್ಕೆ ಚಾಲನೆ
ಅಕ್ಟೋಬರ್ 18ರಂದು ಬೆಳಗ್ಗೆ ಅಧಿಕೃತವಾಗಿ ಮೈಸೂರು ಕಂಬಳಕ್ಕೆ ಚಾಲನೆ ದೊರೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಮರುದಿನ ಸಂಜೆಯೊಳಗೆ ಕಂಬಳ ಮುಗಿಯಲಿದ್ದು ಆನಂತರ ಬಹುಮಾನ ವಿತರಣೆ ನಡೆಯಲಿದೆ. ಸೀನಿಯರ್ ವಿಭಾಗದಲ್ಲಿ ಉತ್ತಮ ಟೈಮಿಂಗ್ ಹೊಂದಿರುವ ಅರ್ಹ ಕೋಣಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಒಟ್ಟು 150ರಿಂದ 160 ಜೊತೆ ಕೋಣಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು ಎಂದು ಅಶೋಕ ರೈ ತಿಳಿಸಿದ್ದಾರೆ.
ಗೆದ್ದ ಕೋಣಗಳಿಗೆ ಚಿನ್ನದ ಬಹುಮಾನ
ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಮತ್ತು ಮಾಲೀಕರಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸಿದ ಎಲ್ಲ ಕೋಣಗಳಿಗೂ ಸಾರಿಗೆ ವೆಚ್ಚ ನೀಡಲಾಗುತ್ತದೆ. ದೊಡ್ಡ ಜೊತೆ ಕೋಣಗಳಿಗೆ ₹65 ಸಾವಿರ ಹಾಗೂ ಸಣ್ಣ ಜೊತೆ ಕೋಣಗಳಿಗೆ ₹50 ಸಾವಿರದಂತೆ ಸಾರಿಗೆ ಭತ್ಯೆ ನಿಗದಿಪಡಿಸಲಾಗಿದೆ. ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ನೀಡಲು ನಿರ್ಧರಿಸಲಾಗಿದೆ. ಮೂರನೇ ಮತ್ತು ನಾಲ್ಕನೇ ಸ್ಥಾನಗಳಿಗೂ ಚಿನ್ನದ ಪದಕ ನೀಡಬೇಕು ಹಾಗೂ ಜೂನಿಯರ್ ವಿಭಾಗದ ಬಹುಮಾನ ಮೊತ್ತವನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಕೋಣಗಳ ಮಾಲೀಕರು ಮುಂದಿಟ್ಟಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಕಂಬಳಕ್ಕೆ ಉಚಿತ ಪ್ರವೇಶ, ಶುಲ್ಕ ಇರಲ್ಲ
ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ. ಯಾವುದೇ ಎಂಟ್ರಿ ಶುಲ್ಕ ಇರುವುದಿಲ್ಲ. ಗ್ಯಾಲರಿಯಲ್ಲಿ ಏಕಕಾಲದಲ್ಲಿ 15 ಸಾವಿರ ಮಂದಿ ಕುಳಿತು ವೀಕ್ಷಿಸಲು ವ್ಯವಸ್ಥೆ ಇರಲಿದೆ. ಕೋಣಗಳ ಮಾಲೀಕರಿಗೆ, ಸಿಬಂದಿಗೆ ಮತ್ತು ವಿಐಪಿಗಳಿಗಾಗಿ ಪಾಸ್‌ಗಳನ್ನು ನೀಡುವ ವ್ಯವಸ್ಥೆ ಇರಲಿದೆ. ಇದಲ್ಲದೆ, ಆವರಣದಲ್ಲಿ ಕೋಣಗಳೊಂದಿಗೆ ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಂಬಳಕ್ಕೆ 25 ಲಕ್ಷ ಜನರ ನಿರೀಕ್ಷೆ
ದೇಶ - ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಬರಲಿದ್ದು ಕರಾವಳಿಯ ಕಂಬಳವನ್ನು 25 ಲಕ್ಷಕ್ಕೂ ಹೆಚ್ಚು ವೀಕ್ಷಿಸುವ ನಿರೀಕ್ಷೆಯಿದೆ. ಕಂಬಳದ ಜೊತೆಗೆ ಕರಾವಳಿಯ ಸಾಂಸ್ಕೃತಿಕ ಲೋಕವನ್ನೂ ಮೈಸೂರಿಗೆ ಪರಿಚಯಿಸುವ ಸಿದ್ಧತೆ ನಡೆದಿದೆ. ಕರಾವಳಿ ಶೈಲಿಯ ಆಹಾರ ಮೇಳ, ವಿವಿಧ ಮಳಿಗೆಗಳು, ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳು ಹಾಗೂ ಸಂಸ್ಕೃತಿ ಬಿಂಬಿಸುವ ಜನಪದ ಕಲೆಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಕನ್ನಡ ಮತ್ತು ತುಳುವಿನಲ್ಲಿ ಕಂಬಳದ ಕಮೆಂಟರಿ ಇರಲಿದೆ.
ಕಂಬಳಕ್ಕೆ ಕಾನೂನು ತೊಡಕಿಲ್ಲ
ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವುದಕ್ಕೆ ಮಹಾರಾಣಿ ಪ್ರಮೋದಾದೇವಿ ಅಪಸ್ವರ ಎತ್ತಿರುವ ಪ್ರಶ್ನೆಗೆ, ಮಹಾರಾಣಿಯವರು ಗೌರವಾನ್ವಿತರಾಗಿದ್ದು ಬೆಂಗಳೂರಿನಲ್ಲಿ ಕಂಬಳ ನಡೆಸಲು ಅವಕಾಶ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಕಂಬಳ ನಡೆಸುವುದು ಸರ್ಕಾರದ ನಿರ್ಧಾರ. ಇದರಲ್ಲಿ ತಪ್ಪು ಭಾವಿಸಲಿಕ್ಕಿಲ್ಲ ಎಂಬುದು ನಮ್ಮ ನಂಬಿಕೆ ಎಂದು ಅಶೋಕ ರೈ ಹೇಳಿದರು. ಪೇಟಾ ಕ್ಯಾತೆ ಮಾಡಬಹುದೇ ಎಂಬ ಪ್ರಶ್ನೆಗೆ, ಕಳೆದ ಬಾರಿ ಬೆಂಗಳೂರಿನಲ್ಲಿ ಕಂಬಳ ನಡೆಸಿದ್ದನ್ನ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದರು. ರಾಜ್ಯದ ಎಲ್ಲಿ ಬೇಕಾದರೂ ಕಂಬಳ ಮಾಡಬಹುದು ಎಂದು ಹೈಕೋರ್ಟ್ ಆದೇಶ ಮಾಡಿದೆ. ಈ ಬಾರಿ ಮೈಸೂರು ದಸರಾ ಉತ್ಸವದ ಭಾಗವಾಗಿಯೇ ಕಂಬಳ ಆಯೋಜಿಸುತ್ತಿರುವುದರಿಂದ ಯಾವುದೇ ಕಾನೂನು ತೊಡಕಿಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
The traditional coastal buffalo race Kambala will be organised as part of the Mysuru Dasara festivities this year. The two-day event, titled ‘Vijaya-Dashami’ Jodukare Kambala, will be held on October 18 and 19, with around 150 to 160 selected pairs of buffaloes from the coastal districts expected to participate.
25-09-26 04:49 pm
HK News Staffer
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
24-09-26 09:42 pm
HK News Staffer
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
25-09-26 07:31 pm
HK News Staffer
ಬಂಟ್ವಾಳ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಬಿಗ್...
25-09-26 07:05 pm
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ಶಶಿಕುಮಾರ್ ನೇ...
24-09-26 10:46 pm
ಬಂಟ್ವಾಳ ; ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಹ...
24-09-26 06:26 pm
ಬಂಗಾಳ ವಾಯುಭಾರ ಕುಸಿತ ; ಕರಾವಳಿ, ಮಲೆನಾಡು, ದಕ್ಷಿಣ...
24-09-26 05:55 pm
25-09-26 04:53 pm
HK News Staffer
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am
ಉಡುಪಿ ; ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಟಿ ಬಸ...
25-09-26 10:30 am
ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ; ಸೀನಿಯರ್ ಗುಂ...
25-09-26 08:57 am
ಪ್ರೀತಿ ನೆಪದಲ್ಲಿ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ದೌ...
24-09-26 05:10 pm